ಮಾವಿನ ಮರದ ಹಸಿರೆಲೆ ಮಧ್ಯೆ ಮಾವಿನ ಹೂವು ಬಂದು ಮಾವಿನಮಿಡಿ ರೂಪ ತಾಳಿದಾಗಲೇ ಬಾಲ್ಯದಲ್ಲಿ ನಮಗೆಲ್ಲ ರೋಮಾಂಚನ ನೀಡುವ ಮಾವಿನಕಾಯಿಯ ಸುಗ್ಗಿ ಹಬ್ಬ
#ಕಬ್ಬಿನಿಂದ_ಶುರುವಾಗಿ_ಹಣ್ಣಿನಕಾಲ
#ಮಳೆಗಾಲ_ಪ್ರಾರಂಭ_ಆಗಿ_ಹಲಸಿನ_ಹಣ್ಣಿನೊಂದಿಗೆ_ಮುಕ್ತಾಯ .
ಕಬ್ಬು ಆಲೇಮನೆ ಜೊತೆ ಜೊತೆಯಲ್ಲಿ ಕಾಡಲ್ಲಿ ಪರಗಿ ಹಣ್ಣು, ನೆಲ್ಲಿಕಾಯಿ, ಮುರುಗಲು ಹಣ್ಣು, ತುಂಬ್ರಿ ಹಣ್ಣು, ಮುಳ್ಳು ಹಣ್ಣುಗಳ ಸುಗ್ಗಿ ಅದು ಮುಗಿಯುತ್ತಲೇ ಮಾವಿನ ಕಾಲ ಪ್ರಾರಂಭ.
ಮಕ್ಕಳಿಗೆ ಮಾವಿನ ಕಾಯಿಗಳ ಕಾಲದಷ್ಟು ಸಂತೋಷ ಮಾವಿನ ಹಣ್ಣಿನ ಕಾಲದ್ದಲ್ಲ, ಮಾವು ಚಿಗುರಾದಾಗ ಅದರದ್ದೇ ಒ0ದು ರುಚಿ, ಅದು ದಿನದಿಂದ ದಿನಕ್ಕೆ ಬದಲಾಗಿ ಹುಳಿ ಮಾವಾಗಿ ಅದಕ್ಕೆ ಉಪ್ಪು ಖಾರದ ಮೆಣಸಿನ ಪುಡಿ ಸೇರಿಸಿ ರುಚಿ ಸಮ ಮಾಡಿ ತಿನ್ನುತ್ತಾ ತಿನ್ನುತ್ತಾ ಮಾವಿನಕಾಯಿಯ ಒಳಗೆ ಗೊರಟಾಗಿ ಮಾವಿನಕಾಯಿ ಕಾಲ ಸಮಾಪ್ತಿ ಆದರೆ ಮುಂದಿನ ಹಂತವಾದ ಮಾವಿನ ಹಣ್ಣಿನ ಕಾಲ.
ದೊಡ್ಡವರು ಮಾವಿನಕಾಯಿ ಕಾಲದಲಿ ಉಪ್ಪಿನಕಾಯಿಗಾಗಿ ಮಿಡಿ ಮಾವಿನಕಾಯಿ ಹುಡುಕಿದರೆ ಮಕ್ಕಳು ಮಾತ್ರ ಆಗಿಂದಾಗಲೇ ತಿಂದು ಬಿಡುವ ಮಾವಿನ ಕಾಯಿಯ ಹುಡುಕಾಟದಲ್ಲಿರುತ್ತಿದ್ದ ನೆನಪು ಮರೆಯುವಂತಿಲ್ಲ.
ಹುಳಿ ಮಾವಿನ ಕಾಯಿ ಬೆಳಿಗ್ಗಿನಿಂದ ರಾತ್ರಿ ತನಕ ತಿನ್ನುವ ಅದಕ್ಕೆ ಉಪ್ಪು ಮತ್ತು ಮೆಣಸಿನ ಪುಡಿಯೊಂದಿಗೆ ಮಾವಿನ ಮರಗಳ ಕೆಳಗೆ ಸೇರುತ್ತಿದ್ದ ಬಾಲ್ಯದ ಗೆಳೆಯರೆಲ್ಲ ಮಾವಿನಕಾಯಿ ಸೀಸನ್ ನಲ್ಲಿ ನೆನಪಾಗುತ್ತಾರೆ.
ನನ್ನ ಬಾಯಿ ರುಚಿಯ ಅರಿತಿರುವ ಗೆಳೆಯ #ಗೇರುಬೀಸಿನ_ಚೆನ್ನಪ್ಪ ಈ ವರ್ಷದ ಮಾವಿನ ಮೊದಲ ಪಸಲಿನ ಮಾವಿನಕಾಯಿ ಬೆಳಿಗ್ಗೆ ತಂದು ಕೊಟ್ಟಿದ್ದು ಪುನಃ ಬಾಲ್ಯದ ನೆನಪಿಗೆ ಒಯ್ದು ಬಿಟ್ಟಿತು ಮಾವಿನಕಾಯಿಯ ಪರಿಮಳ, ಅದರ ಚಿಗುರಿನ ಒಗರು, ಹುಳಿ ಎಲ್ಲದರ ಮಿಶ್ರಣ ಅದನ್ನು ಪದಗಳಾಗಿಸಲಾಗದ ರುಚಿ.
Comments
Post a Comment