Skip to main content

ಸಾಗರದ ಸಾಗರ್‌ - ಜ೦ಬಗಾರು ರೈಲು ನಿಲ್ದಾಣಕ್ಕೆ ರಾಮ ಮನೋಹರ ರೈಲು ನಿಲ್ದಾಣ ಎಂಬ ನಾಮಪಲಕ ಅನಾವರಣಗೊಂಡು 22 ವರ್ಷ ಆಯಿತು, ಆಗಿನ ಉಪ ಪ್ರದಾನಿ ಲಾಲ್ ಕೃಷ್ಣ ಅಡ್ವಾನಿ ಅನುಮೋದನೆ ನೀಡಿದ ಪ್ರಸ್ತಾವನೆ ರೈಲ್ವೆ ಇಲಾಖೆ ಕಾರ್ಯರೂಪಕ್ಕೆ ತರದಿದ್ದು ವಿಪಯಾ೯ಸ

#ಡಾ_ರಾಮಮನೋಹರ_ಲೋಹಿಯ_ರೈಲುನಿಲ್ದಾಣ.

#ಸಾಗರ_ಜಂಬಗಾರು_ರೈಲುನಿಲ್ದಾಣದ_ಮರುನಾಮಕರಣ_ವಿಳಂಭ_ಏಕೆ?

#ದಿನಾಂಕ_12_ಜೂನ್_2000ದಂದು_ನಾಮಪಲಕ_ಅನಾವರಣಗೊಳಿಸಲಾಗಿತ್ತು.

#ಆಗಿನ_ಉಪಪ್ರಧಾನಿ_ಲಾಲ್_ಕೃಷ್ಣ_ಅಡ್ವಾನಿ_ವಿಶೇಷ_ಕಾಳಜಿಯಿಂದ_ಮರುನಾಮಕರಣಕ್ಕೆ_ಅನುಮೋದನೆ_ನೀಡಿದ್ದರು.

#ಕಳೆದ_ವರ್ಷ_ಶಿವಮೊಗ್ಗ_ಸಂಸದರಾದ_ರಾಘವೇಂದ್ರ_ಮತ್ತು
#ಸಾಗರ_ವಿದಾನಸಭಾ_ಸದಸ್ಯರಾದ_ಹರತಾಳು_ಹಾಲಪ್ಪರಿಗೆ_ಮನವಿ_ಮಾಡಿದ_ನೆನಪಿನೊಂದಿಗೆ

ಸನ್ಮಾನ್ಯ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರರಿಗೆ.
 ಇತ್ತೀಚಿಗೆ ತಾವು ಹೊಸನಗರ ತಾಲ್ಲೂಕಿನ ಅರಸಾಳು ರೈಲ್ ನಿಲ್ದಾಣಕ್ಕೆ ಶಂಕರ್ ನಾಗ್ ರು ಮಾಲ್ಗುಡಿ ಡೇಸ್ ಸಿರೀಯಲ್ ಶೂಟಿಂಗ್ ಮಾಡಿದ ನೆನಪಿಗಾಗಿ ಮಾಲ್ಗುಡಿ ರೈಲು ನಿಲ್ದಾಣವಾಗಿ ಮರುನಾಮಕರಣ ಮಾಡುವುದಾಗಿ ತಿಳಿಸಿದ್ದೀರಿ ಸ್ವಾಗತ.
 ಅದಕ್ಕಿ೦ತ ಮೊದಲು ಅಥವ ಅದರ ಜೊತೆ ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ ಆಗಿನ ಉಪ ಪ್ರದಾನ ಮಂತ್ರಿಯಾದ ಶ್ರೀ ಲಾಲ್ ಕೃಷ್ಣ ಅಡ್ವಾನಿಯವರಿಂದ ಅನುಮೋದಿಸಲ್ಪಟ್ಟ ಡಾII ರಾಮ್ ಮನೋಹರ್ ಲೋಹಿಯಾ ರೈಲು ನಿಲ್ದಾಣ ಕಾಯ೯ಕ್ರಮ ಕೂಡ ನೆರವೇರಿಸಲು ಒತ್ತಾಯಿಸುತ್ತೇನೆ.
  ಸಾಗರ ಜಂಬಗಾರು ರೈಲು ನಿಲ್ದಾಣದ ಹೆಸರನ್ನ ಹೆಸರಾಂತ ಸಮಾಜವಾದಿ ಡಾII ರಾಮ ಮನೋಹರ ಲೋಹಿಯಾ ರೈಲು ನಿಲ್ದಾಣ ಎಂದು ಮರು ನಾಮಕರಣಕ್ಕಾಗಿ 2000ನೇ ಇಸವಿಯಿ೦ದ ಪ್ರಯತ್ನಿಸುತ್ತಿದ್ದು ಇದಕ್ಕೆ ಆಗಿನ ಉಪ ಪ್ರದಾನಿ ಲಾಲ್ ಕೃಷ್ಣ ಅಡ್ವಾನಿಯವರಿಗೆ ಮಾಡಿದ ಮನವಿ ಕನಾ೯ಟಕ ಸಕಾ೯ರಕ್ಕೆ, ಅಲ್ಲಿಂದ ಶಿವಮೊಗ್ಗ ಜಿಲ್ಲಾ ಆಡಳಿತಕ್ಕೆ ಅಲ್ಲಿ೦ದ ಸಾಗರ ಸಾಗರ ಪುರಸಭೆಗೆ ಅನುಮೋದನೆಗೆ ಬಂದು ಅನುಮೋದನೆ ಪಡೆದು ಪುನಃ  ಉಪ ಪ್ರದಾನಿಗಳಿಂದ ಸಂಬಂದಪಟ್ಟ ಇಲಾಖೆಗೆ ಸಾಗರ ರೈಲು ನಿಲ್ದಾಣದ ಹಾಲಿ ಹೆಸರು ಬದಲಿಸಿ ಡಾII ರಾಮಮನೋಹರ ಲೋಹಿಯ ಎಂದು ಪುನರ್ ನಾಮಕರಣ ಮಾಡಬಹುದೆಂದು ಸಂಬಂದಪಟ್ಟ ಇಲಾಖೆಗೆ ಅನುಮತಿ ನೀಡಿ 22 ವಷ೯ ಆದರೂ ರೈಲ್ವೆ ಇಲಾಖೆ ಮರು ನಾಮಕರಣ ಮಾಡಿರುವುದಿಲ್ಲ ಎಂದು ನಿಮ್ಮ ಗಮನಕ್ಕೆ ತರುತ್ತಾ, ತಕ್ಷಣ ಅರಸಾಳು ರೈಲು ನಿಲ್ದಾಣದ ಮರು ನಾಮಕರಣದ ಜೊತೆ ಸಾಗರ ಜOಬಗಾರ್ ಎಂಬ ಸಾಗರ ರೈಲು ನಿಲ್ದಾಣವನ್ನ ಎಲ್ಲಾ ಅನುಮತಿ ಪಡೆದಿರುವ ಡಾII ರಾಮ ಮನೋಹರ್ ಲೋಹಿಯಾ ಎಂದು ಪುನರ್ ನಾಮಕರಣ ಮಾಡಬೇಕೆಂದು ಮನವಿ ಮಾಡುತ್ತೇನೆ.
  ಈ ಹೆಸರು ಇಡಬೇಕೆಂದು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪಾ, ಸಾಹಿತಿ ದೀ.ಕೋಣಂದೂರು ವೆಂಕಪ್ಪ ಗೌಡರು, ಮಾಜಿ ವಿದಾನ ಪರಿಷತ್ ಸದಸ್ಯರಾದ ಜಿ.ಮಾದಪ್ಪ, ಆಗಿನ ರಾಜ್ಯಸಭಾ ಸದಸ್ಯ ಜವರೇಗೌಡರು, ಆಗಿನ ಕೇಂದ್ರ ಮಂತ್ರಿ ಜಾಜ್೯ ಪನಾ೯೦ಡಿಸ್, ಶ್ರೀನಿವಾಸ ಪ್ರಸಾದ್, ನಿತೀಶ್ ಕುಮಾರ್ ಕೇಂದ್ರ ಸಕಾ೯ರವನ್ನ ಒತ್ತಾಯಿಸಿದ್ದರು ಕಾರಣ 1950ರ ದಶಕದ ಪ್ರಾರಂಭದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಗೋಡಿನಲ್ಲಿ ಪ್ರಾರಂಭವಾದ ಗೇಣಿ ರೈತರ ಹೋರಾಟ ಕಾಗೋಡು ಹೋರಾಟಕ್ಕೆ ಬೆಂಬಲಿಸಲು ಬಂದ ಲೋಹಿಯರನ್ನ ಅವರು ತಂಗಿದ್ದ ಸಾಗರ ರೈಲು ನಿಲ್ದಾಣದ ವಿಶ್ರಾಂತಿ ಕೋಣೆಯಲ್ಲಿ ಬಂದಿಸುತ್ತಾರೆ, ಇದು ದೊಡ್ಡ ಸುದ್ದಿ ಆಗುತ್ತದೆ ರಷ್ಯಾದ ರೇಡಿಯೋ ಮಾಸ್ಕೋದಲ್ಲೂ ಪ್ರಮುಖ ಸುದ್ದಿ ಆಗಿ ಬಿತ್ತರ ಆಗುತ್ತೆ, ಈ ಚಳವಳಿಯ ಮೂಸೆಯಲ್ಲಿ ಸಮಾಜವಾದಿ ಪಕ್ಷದಿಂದ ಶಾಂತವೇರಿ ಗೋಪಾಲಗೌಡರು ಸಾಗರದಿ೦ದ ಮೊದಲ ಶಾಸಕರಾಗಿ ಆಯ್ಕೆ ಆಗುತ್ತಾರೆ, ಕಾಗೋಡು ಚಳವಳಿ ದೇಶದ ಪ್ರಮುಖ ಭೂ ಹೋರಾಟ ಎಂದು ಇತಿಹಾಸದಲ್ಲಿ ದಾಖಲಾಯಿತು, ಜೆ.ಪಿಯವರು ಬರುತ್ತಾರೆ ಈ ಎಲ್ಲಾ ಕಾರಣದಿಂದ ಜಾಜ್೯, ನಿತೀಶ್ ಮತ್ತು ಅಡ್ವಾನಿಯವರು ಕಾಳಜಿ ವಹಿಸುತ್ತಾರೆ.
 ಇದರ ನೇತೃತ್ವ ನಾನು ಮತ್ತು ಕಲ್ಲೂರು ಮೇಘರಾಜ್ ಅನೇಕ ಸಮಾನ ಮನಸ್ಕರ ಸಹಯೋಗದಿಂದ ನಿವ೯ಹಿಸಿದ್ದೆವು.
 12 - ಜೂನ್ -2000 ದಂದು  ಸಾಗರ ರೈಲು ನಿಲ್ದಾಣದ ಸಮೀಪದ ಜೋಗ ರಸ್ತೆಯ ವೃತ್ತದಲ್ಲಿ ಡಾ|| ರಾಮಮನೋಹರ್ ಲೋಹಿಯ ರೈಲು ನಿಲ್ದಾಣ ಎಂಬ ನಾಮ ಫಲಕವನ್ನ ವಿದಾನ ಪರಿಷತ್ ಸದಸ್ಯೆ ಶ್ರೀಮತಿ ಪ್ರಪುಲ್ಲಾ ಮದುಕರ್ ಅನಾವರಣ ಮಾಡಿದ್ದರು, ನಾಮ ಘೋಷಣೆ ನನ್ನಿಂದ, ಸಭೆಯ ಅಧ್ಯಕ್ಷತೆ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಅನಾರೋಗ್ಯದ ಕಾರಣದಿಂದ ಸಭೆಗೆ ಭಾಗವಹಿಸಲಾಗದೆ ಸಂದೇಶ ಕಳಿಸಿದ ಮ್ಯಾಗ್‌ಸೇಸೆ ಪ್ರಶಸ್ತಿ ವಿಜೇತ ರಂಗ ಕಮಿ೯ ಕೆ.ವಿ ಸುಬ್ಬಣ,ರೈತ ಮುಖಂಡರಾದ ಕೆ.ಟಿ.ಗಂಗಾದರ್,ನಮ್ಮೆಲ್ಲರ ಜೊತೆ ಸಾಹಿತಿ ನಾ.ಡಿಸೋಜ, ಬಿ.ಆರ್.ಜಯ೦ತ್, ಜಿ.ಆರ್.ಜಿ.ನಗರ್ ದಂಪತಿಗಳು, ರೈತ ಸಂಘದ ಅನೇಕ ಪ್ರಮುಖರು ಇದ್ದರು.
  ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಶಿವಮೊಗ್ಗದ
" ಜನವಾರ್ತೆ "ದಿನ ಪತ್ರಿಕೆಯಲ್ಲಿ ಪ್ರಕಟ ಆಗಿದ್ದ ಪೋಟೋ, ಕಾಯ೯ಕ್ರಮದ ಪೋಟೋ ಮತ್ತು 22 ವರ್ಷದ ನಂತರ ಶಿಥಿಲಾವಸ್ಥೆಯ ಬೋರ್ಡ ಪೋಟೋ ಇಲ್ಲಿ ಆಸಕ್ತರಿಗಾಗಿ ಪೋಸ್ಟ್ ಮಾಡಿದ್ದೇನೆ ಮತ್ತು 2004ರಲ್ಲಿ ಆಗಿನ ರೈಲ್ವೆ ಮಂತ್ರಿ ನಿತೀಶ್ ಕುಮಾರರಿಗೆ ಬ್ರಾಡ್ ಗೇಜ್ ಪರಿವರ್ತನೆಗೆ ಹಣ ಬಿಡುಗಡೆಗೆ ಮತ್ತು ರೈಲು ನಿಲ್ದಾಣಕ್ಕೆ ಡಾ. ರಾಮ ಮನೋಹರ ಲೋಹಿಯ ಎ೦ದು ಪುನರ್ ನಾಮಕರಣಕ್ಕೆ ಮನವಿ ನೀಡಿದ ಪೋಟೋ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಕೂಡ ಇಲ್ಲಿ ಹಾಕಿದ್ದೇನೆ.
  ಇದೇ ಸ್ಥಳದಲ್ಲಿ ಕನ್ಯಾಕುಮಾರಿಯಿಂದ ಮುಂಬೈ ಬಂದರ್ ತನಕ ರೈತಸಂಘದ ಪ್ರೋಪೆಸರ್ ನಂಜುಂಡಸ್ವಾಮಿ ಅವರ ಬಂಡಿಯಾತ್ರೆ ಹಮ್ಮಿಕೊಂಡಾಗ ಯಾತ್ರೆ ಸಾಗರಕ್ಕೆ ಬಂದಾಗ ಇದೇ ಡಾ.ರಾಮಮನೋಹರ್ ಲೋಹಿಯಾ ರೈಲು ನಿಲ್ದಾಣ ಸಾಗರದ ನಾಮಫಲಕದ ಸ್ಥಳದಲ್ಲೇ ಸ್ವಾಗತಿಸಲಾಗಿತ್ತು ಪ್ರೋ ನಂಜುಂಡ ಸ್ವಾಮಿಯವರನ್ನ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಅಡಿಕೆ ಸಿಂಗಾರ ನೀಡಿ ಸ್ವಾಗತಿಸಿದ್ದು, ರೈತ ಮುಖಂಡರಾದ ಕೆ.ಟಿ.ಗಂಗಾಧರ್, ವಸಂತ್ ಕುಮಾರ್, ಸೇನಾಪತಿ ಗೌಡರು, ಚೆನ್ನಬಸಪ್ಪ ಗೌಡರು ಮತ್ತು ಅನೇಕ ಪ್ರಗತಿ ಪರ ಮಿತ್ರರು ಭಾಗವಹಿಸಿದ್ದು ಈಗ ನೆನಪು. (ಈ ಚಿತ್ರ ಕೂಡ ಲಗತ್ತಿಸಲಾಗಿದೆ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...