ಶಿಕಾರಿಪುರದ ದೀಮಂತ ನಾಯಕ, ವಿದಾನ ಪರಿಷತ್ ಸಭಾಪತಿಯೂ ಆಗಿದ್ದ ಕೆ.ವಿ.ನರಸಪ್ಪರ ಪುತ್ರ ಆನಂದ ಪುರಂನ ಪಶುವೈದ್ಯಾದಿಕಾರಿ ಸಜ್ಜನ ಡಾಕ್ಟರ್ ಮೋಹನ್ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಗೌರವಯುತ ಬೀಳ್ಕೊಡಿಗೆಯ ಈ ನೆನಪುಗಳು.
#ರಾಜಕಾರಣದಲ್ಲಿ_ಅವರ_ಸಾದನೆ_ಅಪ್ರತಿಮ.
#ಬದರಿನಾರಾಯಣ_ಆಯ್ಯಂಗಾರರ_ಸಮಕಾಲಿನವರು.
#ಇವರ_ಪುತ್ರ_ಡಾಕ್ಟರ್_ಮೋಹನ್_ಆನಂದಪುರಂ_ಪಶುವೈದ್ಯಾದಿಕಾರಿಗಳಾಗಿ_ಈ_ತಿಂಗಳು_ನಿವೃತ್ತರಾಗುತ್ತಿದ್ದಾರೆ.
#ಶಿಕಾರಿಪುರದಲ್ಲಿ_ಕೆ_ವಿ_ನರಸಪ್ಪ_ಸ್ಮಾರಕ_ಬಯಲು_ರಂಗಮಂದಿರ_ಇದೆ.
ಸುಮಾರು 12 ವರ್ಷದಿಂದ ನಮ್ಮ ಆನಂದಪುರಂನ ಪಶು ವೈದ್ಯ ಶಾಲೆಗೆ ವೈದ್ಯರಾಗಿ ಬಂದ ನಂತರ ಸದರಿ ಇಲಾಖೆಯಲ್ಲಿ ಉಪ ನಿಧೇ೯ಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಮೋಹನ್ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿದ್ದಾರೆ.
ಮಿತ ಬಾಷಿ, ಹೆಚ್ಚು ಓದುವ ಹವ್ಯಾಸದ ಇವರು ಇಲ್ಲಿಗೆ ಬರುವ ಮೊದಲು ಕೆಳದಿ ಭಾಗದಲ್ಲಿ ಹೈನುಗಾರಿಕೆಯನ್ನ ಉತ್ತೇಜಿಸುವ ಕೆಲಸ ಮಾಡಿ ಆಭಾಗದಲ್ಲಿ ಜನಾನುರಾಗಿಗಳಾಗಿದ್ದರು.
ಆನಂದಪುರಂನ ಪಶು ವೈದ್ಯ ಶಾಲೆ ನಿರ್ಮಿಸಿ ಊರಿಗೆ ದಾನ ಮಾಡಿದವರು ಆನಂದಪುರಂನ ಜಮೀನ್ದಾರರೂ, ಕೊಡುಗೈ ದಾನಿಗಳಾದ ರಾಮಕೃಷ್ಣ ಅಯ್ಯಂಗಾರರು ಅವರ ಪುತ್ರರಾದ ಜಗನ್ನಾಥ ಅಯ್ಯಂಗಾರರು ಅಕಾಲಿಕ ಮೃತ್ಯು ಹೊಂದಿದಾಗ ಅವರ ಸ್ಮರಣಾರ್ಥ ಜಗನ್ನಾಥ ಅಯ್ಯಂಗಾರ್ ಪಶು ವೈದ್ಯ ಶಾಲೆ ಸ್ಪಂತ ಜಾಗದಲ್ಲಿ ನಿರ್ಮಿಸಿ ಊರಿಗೆ ಅರ್ಪಿಸುತ್ತಾರೆ ಇವರ ಪುತ್ರ ವೆಂಕಟಚಲ ಅಯ್ಯಂಗಾರ್ ದೀರ್ಘ ಕಾಲ ಆನಂದಪುರಂ ವಿಲೇಜ್ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರೆ, ಇನ್ನೊಬ್ಬ ಪುತ್ರ ಬದರಿನಾರಾಯಣ ಅಯ್ಯಂಗಾರ್ ಶಾಸಕರು, ವಿದ್ಯಾಮಂತ್ರಿ ಮತ್ತು ಸಂಸದರಾಗುತ್ತಾರೆ.
ಆನಂದಪುರಂನ ಕನಕಮ್ಮಾಳ್ ಸರ್ಕಾರಿ ಆಸ್ಪತ್ರೆ ಕೂಡ ರಾಮಕೃಷ್ಣ ಅಯ್ಯಂಗಾರರ ಪತ್ನಿ ಹೆಸರಲ್ಲಿ ಕಟ್ಟಿಸಿದ ಆಸ್ಪತ್ರೆ.
ಜಗನ್ನಾಥ ಅಯ್ಯಂಗಾರ್ ಪಶು ಆಸ್ಪತ್ರೆಯಲ್ಲಿ ದೀರ್ಘ ಅವದಿ ಸೇವೆ ಸಲ್ಲಿಸಿರುವ ಡಾಕ್ಟರ್ ಮೋಹನ್ ತಂದೆ ಶಿಕಾರಿಪುರದ ಕೆ.ವಿ.ನರಸಪ್ಪನವರು ಬದರಿನಾಯಣ ಅಯ್ಯಂಗಾರರ ಸಮಕಾಲಿನವರು ಮತ್ತು ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಕಾಂಗ್ರೇಸ್ ನ ಪ್ರಮುಖರು.
ಶಿಕಾರಿಪುರದಲ್ಲಿ ಕೆ.ವಿ.ನರಸಪ್ಪ ಮೆಮೋರಿಯಲ್ ಬಯಲು ರಂಗಮಂದಿರ ಇದೆ, ಕೆ.ವಿ.ನರಸಪ್ಪನವರು 1920 ರಲ್ಲಿ ಜನಿಸಿದವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದು, ಬೆಳಗಾವಿಯ ಆರ್.ಎಲ್. ಕಾಲೇಜಿನಲ್ಲಿ ಕಾನೂನು (LLB) ವ್ಯಾಸಂಗ ಮಾಡುತ್ತಾರೆ.
1956 ರಿಂದ 1968 ರ ವರೆಗೆ ಶಿವಮೊಗ್ಗ ಜಿಲ್ಲೆಯ ಲೋಕಲ್ ಆಥರಿಟೀಸ್ ಕಾನ್ಸ್ಟ್ಯೂನ್ಸಿಯಿಂದ ವಿಧಾನ ಪರಿಷತ್ ಸದಸ್ಯರಾಗುತ್ತಾರೆ.
1960ರಿಂದ 1962 ರ ಅವಧಿಯಲ್ಲಿ ವಿಧಾನ ಪರಿಷತ್ ಸಭಾಪತಿಗಳಾಗಿ ಕಾರ್ಯನಿರ್ವಹಿಸುತ್ತಾರೆ.
ಶಿಕಾರಿಪುರ ತಾಲ್ಲೂಕ್ ಕಾಂಗ್ರೇಸ್ ಅಧ್ಯಕ್ಷರಾಗಿರುತ್ತಾರೆ, 6 ವರ್ಷ ಶಿಕಾರಿಪುರ ಟವನ್ ಮುನ್ಸಿಪಲ್ ಅಧ್ಯಕ್ಷರಾಗಿರುತ್ತಾರೆ, 10 ವರ್ಷ ಟವನ್ ಮುನ್ಸಿಪಲ್ ಸದ ಪುರಾಗಿರುತ್ತಾರೆ, ಮೈಸೂರು ರಾಜ್ಯ ಪೈನಾನ್ಸ್ ಕಾರ್ಪೋರೇಷನ್ ನಿರ್ದೇಶಕರಾಗಿ, ಕೆ.ಪಿ.ಸಿ.ಸಿ. ಸದಸ್ಯರಾಗಿ, ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಕಾರ್ಯಕಾರಿ ಆಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಶಿಕಾರಿಪುರ ಮಾರ್ಕೆಟಿಂಗ್ ಸೊಸೈಟಿಗೆ 10 ವರ್ಷ ಅಧ್ಯಕ್ಷರಾಗಿ, ಶಿಕಾರಿಪುರ ತಾಲ್ಲೂಕ್ ಲ್ಯಾಂಡ್ ಮಾರ್ಟ್ಗೇಜ್ ಬ್ಯಾಂಕ್ ಅಧ್ಯಕ್ಷರಾಗಿ, ಶಿಕಾರಿಪುರ ಅಗ್ರಿಕಲ್ಚರ್ ಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ, ಅಂಜನಾಪುರ ಬೆಟರ್ ಪಾರ್ಮಿಂಗ್ ಸೊಸೈಟಿ ಅಧ್ಯಕ್ಷರಾಗಿ, ಮೈಸೂರು ಕೋ ಆಪರೇಟಿವ್ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ... ಹೀಗೆ ಒಬ್ಬ ಜನನಾಯಕರು ಇದ್ದರೆಂದರೆ ಈಗಿನ ಕಾಲಕ್ಕೆ ಸೋಜಿಗ ಪಡುವಂತ ಧೀಮಂತ ನಾಯಕರಾಗಿದ್ದರು ಕೆ.ವಿ.ನರಸಪ್ಪನವರು.
1967ರ ಅವಧಿಗೆ ಶಿಕಾರಿಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆದವರು ಸಂಯುಕ್ತ ಸೋಷಲಿಸ್ಟ್ ಪಾಟಿ೯ ಜಿ.ಬಸವಣ್ಯಪ್ಪನವರು. ಇವರ ವಿರುದ್ದ ಕೆ.ವೆಂಕಟಪ್ಪರನ್ನು ಕರೆತಂದು 1972 ಮತ್ತು 1978ರ ಎರೆಡು ಅವಧಿಗೆ ಶಾಸಕರನ್ನಾಗಿಸಲು ಕೆ.ವಿ.ನರಸಪ್ಪರ ಪ್ರಯತ್ನ ಕೂಡ.
ಇವರ ಇನ್ನೋರ್ವ ಪುತ್ರ ಅರುಣ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರೂ ಆಗಿದ್ದರು.
ಇಂತಹ ನಾಯಕತ್ವದ, ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ದೊಡ್ಡ ಸಾಧನೆ ಮಾಡಿದ ಕೆ.ವಿ.ನರಸಪ್ಪರ ಕೊನೆಯ ಪುತ್ರ ಡಾಕ್ಟರ್ ಮೋಹನ್ ಕೂಡ ಅಷ್ಟೇ ಸಜ್ಜನರು.
ಆನಂದಪುರಂಗೆ ಪಶುವೈದ್ಯಾಧಿಕಾರಿ ಆಗಿ 12 ವರ್ಷದ ಸೇವೆಯಲ್ಲಿ ನಮ್ಮ ಎಂಟು ನಾಯಿಗಳಿಗೆ ಶಶ್ರೂಷೆ ಮಾಡಿದ್ದಾರೆ, ನಿನ್ನೆ ಈಗಿರುವ ನಾಲ್ಕು ನಾಯಿಗಳಿಗೆ ರೇಬೀಸ್ ಮತ್ತ ಮೆಗಾ ವ್ಯಾಕ್ಸ್ - 6. ಎಂಬ ಆರು ಕಾಯಿಲೆಗಳ ನಿಯಂತ್ರಿಸುವ ವ್ಯಾಕ್ಸಿನ್ ಕೊಡಲು ಬಂದಾಗ ಅವರ ನಿವೃತ್ತಿ ವಿಷಯ ಹೇಳಿದಾಗ ಮನಸ್ಸು ಬಾರವಾಗಿ ಅನಿವಾರ್ಯ ವಿದಾಯವನ್ನು ನನ್ನ ಕಥಾ ಸಂಕಲನ ನೀಡುವ ಮೂಲಕ ಮಾಡಿದೆ.
ಈ ಸಂದರ್ಭದಲ್ಲೆ ಇವರ ತಂದೆಯ ಸ್ಮರಣೆ ಮಾಡುವ ಮೂಲಕ ಈ ವಿದಾಯ ಸ್ಮರಣೀಯವಾಗಿ ಮಾಡ ಬೇಕೆನ್ನಿಸಿತು.
ಮುಂದಿನ ದಿನದಲ್ಲಿ ಶಿಕಾರಿಪುರದ ಕೆ.ವಿ.ನರಸಪ್ಪರ ನೆನಪಿಸುವ ಕಾರ್ಯಕ್ರಮಗಳು ಸಂಬಂದ ಪಟ್ಟವರು ಆಯೋಜಿಸಲಿ ಮತ್ತು ಆಸಕ್ತ ಪತ್ರಕರ್ತರು ಈ ಬಗ್ಗೆ ಹೆಚ್ಚಿನ ಮಾಹಿತಿ ಬರೆಯಲಿ ಎಂದು ಆಶಿಸುತ್ತೇನೆ.
Comments
Post a Comment