#ನಿನ್ನೆಯ_ಗೊಜಮೊಟ್ಟೆಯ_ಕಪ್ಪೆಗಳ_ಬಗ್ಗೆ_ಮಾಹಿತಿ_ಕೇಳಿದ್ದೆ #ಪರಿಸರ_ಕಾಳಜಿಯ_ಬೆಳ್ಳೂರುನಾಗರಾಜ್_ಈ_ಕಪ್ಪೆಗಳ_ಬಗ್ಗೆ_ಮಾಹಿತಿ_ನೀಡಿದ್ದಾರೆ. #ಈ_ಕಪ್ಪೆಯ_ವೈಜ್ಞಾನಿಕ_ಹೆಸರು_Clinotarsus_curtipes #ದೇಶಿ_ಹೆಸರು_ಮಲಬಾರ್_ಪ್ರಾಗ್_ಬೈ_ಕಲರ್ಡ್_ಪ್ರಾಗ್ #ಪರಿಸರ_ಪ್ರೇಮಿ_ಬೆಳ್ಳೂರು_ನಾಗರಾಜರಿಗೆ_ದನ್ಯವಾದಗಳು. https://youtu.be/X246K0Y-GHE #ಬೆಳ್ಳೂರು_ನಾಗರಾಜರು_ನೀಡಿದ_ಮಾಹಿತಿ_ಈ_ಕೆಳಗಿನದ್ದು_ಓದಿ. ಒಂದೊಂದು ಜಾತಿ ಕಪ್ಪೆಗಳದ್ದು ಒಂದೊಂದು ರೀತಿಯ ಜೀವನ ಶೈಲಿ ಇರುತ್ತದೆ, ಹಲವು ಜಾತಿ ಕಪ್ಪೆಗಳು ಗೊದಮೊಟ್ಟೆಯಿಂದ ಮರಿ ಕಪ್ಪೆಗಳಾಗುತ್ತವೆ, ಕೆಲವು ಜಾತಿಗಳಲ್ಲಿ ಗೊದಮೊಟ್ಟೆಯ ಹಂತವೇ ಇಲ್ಲದೆ ಮೊಟ್ಟೆಗಳಿಂದ ನೇರವಾಗಿ ಮರಿ ಕಪ್ಪೆಗಳಾಗುತ್ತವೆ, ಇನ್ನು ಕೆಲವು ಗೊದಮೊಟ್ಟೆಗಳು 1-2 ತಿಂಗಳಲ್ಲಿ ಮರಿಕಪ್ಪೆಗಳಾಗುತ್ತವೆ. ವೀಡಿಯೋದಲ್ಲಿರುವ ಕಪ್ಪೆಗಳಿಗೆ bicolored frog ಅಥವಾ Malabar frog ಎನ್ನುತ್ತಾರೆ, ಕನ್ನಡದಲ್ಲಿ ದ್ವಿವರ್ಣ ಕಪ್ಪೆ ಎನ್ನಬಹುದು. ಈ ಕಪ್ಪೆಗಳು ಗೊದಮೊಟ್ಟೆ ಹಂತದಲ್ಲೇ 8-10 ತಿಂಗಳು ಕಳೆಯುತ್ತವೆ, ಕೆರೆ ಅಥವಾ ಜಲಾಶಯಗಳಲ್ಲಿ ಕಪ್ಪನೆಯ ದೊಡ್ಡ ಗೊದಮೊಟ್ಟೆಯ ಹಿಂಡುಗಳನ್ನು ನೋಡಿರಬಹುದು, ಇವು ಗೊದಮೊಟ್ಟೆ ಹಂತದಲ್ಲಿ 8-10 ತಿಂಗಳು ಕಳೆಯುವುದರಿಂದ ಇವುಗಳು ಬದುಕುಳಿಯಲು ವರ್...