Blog number 1672. ನಾಗೇಂದ್ರ ಸಾಗರ್ ಕೃಷಿ ಉದ್ಯಮದಲ್ಲಿ ಯಶಸ್ಸಿನ ಘಟ್ಟ ತಲುಪಲು ಪಟ್ಟ ಕಷ್ಟ ಸಾಮಾನ್ಯವಲ್ಲ ಇದು ಸ್ವಯ೦ ಉದ್ಯೋಗ ಮಾಡುವವರಿಗೆ ಒಂದು ನೀತಿ ಪಾಠ.
#ಪತ್ರಿಕೋದ್ಯಮದಲ್ಲಿ_ಭವಿಷ್ಯ_ಅರಸಿ_ಬೆಂಗಳೂರು_ಸೇರಿದ್ದರು. #ಪತ್ರಿಕೋದ್ಯಮದ_ಬೀಷ್ಮ_ವಿ_ಎನ್_ಸುಬ್ಬರಾವ್_ಅವರ_ಶಿಷ್ಯರಾದರು #ರವಿಬೆಳೆಗೆರೆ_ಪ್ರಕಾಶ್_ರೈ_ಪಬ್ಲಿಕ್_ಟೀವಿ_ರಂಗನಾಥ_ಮುಂತಾದವರ_ಜೊತೆಯಾದರು. #ಅದನ್ನೆಲ್ಲ_ಬಿಟ್ಟು_ಸ್ವಾತಂತ್ರ_ಹೋರಾಟಗಾರರಾದ_ಇವರ_ತಂದೆಯ_ಬರಡು_ಜಮೀನಲ್ಲಿ_ಕೃಷಿ_ಪ್ರಾರಂಬಿಸಿದರು. #ರೈತರಿಗಾಗಿ_ಅಗ್ರಿ_ಕ್ಲೀನಿಕ್_ಸಾಗರ್_ಅಗ್ರಿಕೋ_ಪ್ರಾರಂಬಿಸಿದರು. #ಉದ್ಯಮದಲ್ಲಿ_ನಷ್ಟವಾಯಿತು_ತಂದೆಯ_ಜಮೀನು_ಸಹೋದರನ_ಪಾಲಿಗೆ_ಹೋಯಿತು. #ಮತ್ತೆ_ಬೂದಿಯಿಂದ_ಎದ್ದು_ಬಂದ_ನಾಗೇಂದ್ರಸಾಗರ್ #ಸ್ವಯಂ_ಉದ್ಯೋಗ_ಮಾಡುವವರಿಗೆ_ನೀತಿ_ಪಾಠವಾಗಿದ್ದಾರೆ. ನನ್ನ ಕೃಷಿ ಪ್ರಯೋಗದ ಪ್ರಾರಂಭದ ದಿನಗಳಲ್ಲಿ ಕೃಷ್ಣಪ್ಪ ಎಂಬ ಸಜ್ಜನರು ಸಾಗರದ ತೋಟಗಾರಿಕಾ ಇಲಾಖೆ ಮುಖ್ಯಾದಿಕಾರಿ ಆಗಿದ್ದರು ಅವರ ಮಾರ್ಗದರ್ಶನದಲ್ಲಿ ಕೃಷಿ ಪ್ರಾರಂಬಿಸಿದ್ದೆ ಆಗ ಡ್ರಿಪ್ ಇರಿಗೇಷನ್ ಮಾಡಲು ಬೀಮನಕೋಣೆಯ ಪಿ.ಎಲ್.ಡಿ ಬ್ಯಾಂಕಿಗೆ ಹೋದಾಗ ಅಲ್ಲಿ ವ್ಯವಸ್ಥಾಪಕರಾಗಿದ್ದ ಹಂದಿಗೋಳ್ ಸಾಹೇಬರು ನಾಗೇಂದ್ರ ಸಾಗರ್ ಅವರ ಸಾಗರ್ ಅಗ್ರಿಕೋ ತೋರಿಸಿದರು. ಅಲ್ಲಿ ನನ್ನ ಸ್ವಭಾವವಾದ ಕೆಲವೇ ಕ್ಷಣದಲ್ಲಿ ವ್ಯವಹಾರ ಮುಗಿಸಿದ್ದೆ ನಂತರ ಉತ್ತುಂಗಕ್ಕೆ ಏರಿದ್ದ ಇವರ ವ್ಯವಹಾರ ನಷ್ಟಕ್ಕೆ ಇಳಿಯಿತು, ಸುಖದಲ್ಲಿ ಸುತ್ತುವರಿದಿದ್ದವರೆಲ್ಲ ಹಾರಿ ನಾಪತ್ತೆ ಆದರು. ಬೆಂಗಳೂರಿನ ಚೆಕ್ ಕೇಸಿಗೆ ಜಾಮೀನು ಹಾಕಲು ಒಬ್ಬನೇ ಒಬ್ಬ ಗೆಳೆಯ ಮುಂದೆ ಬರಲ...