ಭಾಗ - 12, ಆ ಕಾಲದ ಅಗರ್ಭ ಶ್ರೀಮಂತರ ಈಗ ಶಿಥಿಲವಾಗಿರುವ ಬೃಹತ್ ಮನೆ ಆನಂದಪುರದ ಸಾಹುಕಾರ್ ಚೆನ್ನಪ್ಪ ಶೆಟ್ಟರ ಕುಟುಂಬ ಕೊನೆ ಕೊನೆಗೆ ಅತ್ಯಂತ ಬಡತನ ಅನುಭವಿಸಿದ ಹೊತ್ತಿನ ಊಟಕ್ಕೂ ಸಾಧ್ಯವಾಗದ ಜನ ಮರೆತ ಕಥೆ ನೆನಪಿಸುತ್ತದೆ, ಈ ಮನೆ ಮಲ್ಲೇಶಿ ಮನೆ ಎಂತಲೇ ಜನ ಈಗ ಕರೆಯುತ್ತಾರೆ.
#ಭಾಗ_12 ಆ_ಕಾಲದಲ್ಲಿ_ಆನಂದಪುರದ_ಶ್ರೀಮಂತ_ಮನೆತನ_ಸಾಹುಕಾರ್_ಚೆನ್ನಪ್ಪಶೆಟ್ಟರದ್ದು. ಆನಂದಪುರಂ_ಹಳೇ_ಪೋಲಿಸ್_ಸ್ಟೇಷನ್_ಪಕ್ಕದ_ಮನೆ_ಆ_ಕಾಲದ_ಬೃಹತ್_ಮನೆ_ಆಗಿತ್ತು. ಎಲ್ಲಾ_ನ್ಯಾಯ_ಪಂಚಾಯಿತಿ_ಇವರ_ಮನೇನಲ್ಲಿ ಸಾಹುಕಾರ್ ಚೆನ್ನಪ್ಪ ಶೆಟ್ಟರು ಮಾಡದ ಪಂಚಾಯಿತಿ ಮಾತ್ರ ರಾಮ ಕೃಷ್ಣ ಆಯ್ಯಂಗಾರ್ ಮಾಡುತ್ತಿದ್ದರೆಂದರೆ ಆನಂದಪುರಂನ ಮುಖ್ಯ ಬೀದಿಯ ಅರಮನೆ ಅಂತ ಮನೆ, ನೂರಾರು ಎಕರೆ ಭೂ ಹಿಡುವಳಿ, ಲೇವಾದೇವಿ ಮತ್ತು ಅಂಗಡಿ ಮಾಲಿಕರ ಅಗರ್ಭ ಶ್ರೀಮಂತಿಕೆ ಮತ್ತು ಸಾಮಾಜಿಕ ಸ್ಥಾನಮಾನ ಅಥ೯ ಆದೀತು. ಲಿಂಗಾಯಿತ ಶೆಟ್ಟಿ ಬಣಜಿಗರು ಕೆಳದಿ ಅರಸರ ಕಾಲದಲ್ಲಿ ಶ್ರೀಮಂತ ವರ್ತಕರು, ರಾಜರ ಕಾಲದಲ್ಲಿ ದಾನ ಧರ್ಮ ಮಾಡಿದವರು. ಈ ವರ್ತಕ ವೃಂದದವರೇ ಆದ ಇವರ ಜಾತಿಯವರಾದ ಚೆನ್ನ ಶೆಟ್ಟಿ ಎಂಬುವವರು ಮಾಡಿದ ಉಪಕಾರ, ಕಟ್ಟಿಸಿದ ಕೆರೆಗಾಗಿ ಗೌರವಾರ್ಥಕವಾಗಿ ರಾಜರ ಕಾಲದಲ್ಲಿ ಆ ಹಳ್ಳಿಗೆ ಚೆನ್ನ ಶೆಟ್ಟಿ ಕೊಪ್ಪ ಎಂದು ಹೆಸರಿಸಿದ್ದು ಈಗಲೂ ಮುಂದುವರಿದಿದೆ ಅದು ಈಗ ಆನಂದಪುರಂ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನ ಶೆಟ್ಟಿ ಕೊಪ್ಪ, ಹೊಸನಗರ ತಾಲ್ಲೂಕಿನ ಬಟ್ಟೆ ಮಲ್ಲಪ್ಪ ಕೂಡ ಖ್ಯಾತ ಬಟ್ಟೆ ವ್ಯಾಪಾರಿ ಮಲ್ಲಪ್ಪ ಶೆಟ್ಟಿ ಹೆಸರು ಅಂತೆ. ಸಾಹುಕಾರ್ ಚೆನ್ನಪ್ಪ ಶೆಟ್ಟರು ಇಂತಹ ಅಗಭ೯ ಶ್ರೀಮಂತಿಕೆ ಮತ್ತು ಸಾಮಾಜಿಕ ಗೌರವ ಪಡೆದವರಲ್ಲ...