ಅತ್ಯಂತ ಕಡಿಮೆ ಖರ್ಚಿನಲ್ಲಿ ಸ್ವದೇಶಿ ತಂತ್ರಜ್ಞಾನದಲ್ಲಿ ಬಿರು ಬೇಸಿಗೆಯಲ್ಲೂ ಮನೆ ತಂಪಾಗಿಡಲು ಸಾಧ್ಯವಿದೆ ಇದು ನನ್ನ ಸ್ವಂತ ಅನುಭವ
#ಬೇಸಿಗೆಯ_ಮಟಾಮಟಾ_ಮದ್ಯಾಹ್ನ_ಸುಲಭವಾಗಿ_ದೇಶಿ_ಹವಾನಿಯಂತ್ರಣ. #ಸುಲಭ_ವಿಧಾನ_ಹೇಳಿಕೊಟ್ಟ_ಗುಜರಾತಿನ_ಹರೀಸ್_ಬಾಯಿ. #ಇವತ್ತು_ನಮ್ಮ_ಮಲ್ಲಿಕಾ_ವೆಜ್_ಕೂಲ್_ಕೂಲ್ . ನಾಲ್ಕು ವರ್ಷದ ಹಿಂದೆ ನಮ್ಮ ಹೊಸ ಲಾಡ್ಜ್ ಕಟ್ಟಲು ನಮ್ಮ ತಾತ್ಕಾಲಿಕ ಕಛೇರಿ ಹೆಂಚಿನ ಮಾಡಿನ ಮತ್ತು ಸುತ್ತಲೂ ಎಸಿಪಿ ಶೀಟಿನ ಗೋಡೆಯಲ್ಲಿ ನಿರ್ಮಿಸಿಕೊಂಡಿದ್ದೆ, ಬೇಸಿಗೆಯಲ್ಲಿ ಪ್ಯಾನ್ - ಏರ್ ಕೂಲರ್ ಹಾಕಿದರೂ ದಗೆ ಸಹಿಸಲು ಸಾಧ್ಯವಿರಲಿಲ್ಲ. ಈ ಸಂದರ್ಭದಲ್ಲಿ ಗುಜರಾತಿನ ನವಸಾರಿಯ ಕೋ ಆಪರೇಟಿವ್ ಶುಗರ್ ಪ್ಯಾಕ್ಟರಿಯ ಹರೀಸ್ ಬಾಯ್ ನಮ್ಮ ಲಾಡ್ಜ್ ನಲ್ಲಿ ಉಳಿದಿದ್ದವರು ಒ0ದು ಅತ್ಯಂತ ಕಡಿಮೆ ವೆಚ್ಚದ ಮತ್ತು ಸುಲಭ ಉಪಾಯ ಹೇಳಿದರು. ಸಣ್ಣ ಸ್ಪ್ರಿಂಕ್ಲರ್ ನನ್ನ ಹೆಂಚಿನ ಆಫೀಸ್ ಕ್ಯಾಬೀನ್ ನ ಮೇಲೆ ಅಳವಡಿಸಿ ಅದಕ್ಕೊಂದು ವಾಲ್ವ್ ಹಾಕಿ ಬೇಕಾದಾಗ ನೀರು ಬಿಡಿ ನಿಮ್ಮ ಕಛೇರಿ ಕೂಲ್ ಆಗುತ್ತೆ ಅಂದರು. ನನಗೂ ಇಂತಹ ಹೊಸ ಪ್ರಯೋಗ ಆಗಿಂದಾಗಲೇ ಮಾಡುವ ಹುಕಿ ಆದ್ದರಿಂದ ತಕ್ಷಣ ನಮ್ಮ ಕೆಲಸಗಾರರಿಗೆ ಹೇಳಿ ಈ ವ್ಯವಸ್ಥೆ ಮಾಡಿ ನೀರು ಸ್ಟ್ರಿಂಕ್ಲರ್ ನಿಂದ ಹಾರಿಸಿಬಿಟ್ಟು ಹತ್ತು ನಿಮಿಷದಲ್ಲಿಯೇ ಬೇಸಿಗೆಯ ಬಿಸಿಲಿಗೆ ಬಿಸಿ ಇಡ್ಲಿ ಪಾತ್ರೆ ಆಗಿದ್ದ ಆಪೀಸು ಕ್ಯಾಬೀನು ಏರ್ ಕಂಡೀಷನ್ ಆಗಿ ಆಹ್ಲಾದಕರ ಅನ್ನಿಸಿಬಿಟ್ಟಿತು. ಈ ಐಡಿಯಾ ನೀಡಿದ ಗುಜರಾತಿನ ಹರೀಸ್ ಬಾಯ್ ಗೆ ಕೃತಜ್ಞತೆ ಅರ್ಪಿಸಿ ಮರುದಿನ ನಮ್ಮ ಮಲ್ಲಿಕಾ ವ...