ಅತ್ಯಂತ ಕಡಿಮೆ ಖರ್ಚಿನಲ್ಲಿ ಸ್ವದೇಶಿ ತಂತ್ರಜ್ಞಾನದಲ್ಲಿ ಬಿರು ಬೇಸಿಗೆಯಲ್ಲೂ ಮನೆ ತಂಪಾಗಿಡಲು ಸಾಧ್ಯವಿದೆ ಇದು ನನ್ನ ಸ್ವಂತ ಅನುಭವ
#ಸುಲಭ_ವಿಧಾನ_ಹೇಳಿಕೊಟ್ಟ_ಗುಜರಾತಿನ_ಹರೀಸ್_ಬಾಯಿ.
#ಇವತ್ತು_ನಮ್ಮ_ಮಲ್ಲಿಕಾ_ವೆಜ್_ಕೂಲ್_ಕೂಲ್ .
ನಾಲ್ಕು ವರ್ಷದ ಹಿಂದೆ ನಮ್ಮ ಹೊಸ ಲಾಡ್ಜ್ ಕಟ್ಟಲು ನಮ್ಮ ತಾತ್ಕಾಲಿಕ ಕಛೇರಿ ಹೆಂಚಿನ ಮಾಡಿನ ಮತ್ತು ಸುತ್ತಲೂ ಎಸಿಪಿ ಶೀಟಿನ ಗೋಡೆಯಲ್ಲಿ ನಿರ್ಮಿಸಿಕೊಂಡಿದ್ದೆ, ಬೇಸಿಗೆಯಲ್ಲಿ ಪ್ಯಾನ್ - ಏರ್ ಕೂಲರ್ ಹಾಕಿದರೂ ದಗೆ ಸಹಿಸಲು ಸಾಧ್ಯವಿರಲಿಲ್ಲ.
ಈ ಸಂದರ್ಭದಲ್ಲಿ ಗುಜರಾತಿನ ನವಸಾರಿಯ ಕೋ ಆಪರೇಟಿವ್ ಶುಗರ್ ಪ್ಯಾಕ್ಟರಿಯ ಹರೀಸ್ ಬಾಯ್ ನಮ್ಮ ಲಾಡ್ಜ್ ನಲ್ಲಿ ಉಳಿದಿದ್ದವರು ಒ0ದು ಅತ್ಯಂತ ಕಡಿಮೆ ವೆಚ್ಚದ ಮತ್ತು ಸುಲಭ ಉಪಾಯ ಹೇಳಿದರು.
ಸಣ್ಣ ಸ್ಪ್ರಿಂಕ್ಲರ್ ನನ್ನ ಹೆಂಚಿನ ಆಫೀಸ್ ಕ್ಯಾಬೀನ್ ನ ಮೇಲೆ ಅಳವಡಿಸಿ ಅದಕ್ಕೊಂದು ವಾಲ್ವ್ ಹಾಕಿ ಬೇಕಾದಾಗ ನೀರು ಬಿಡಿ ನಿಮ್ಮ ಕಛೇರಿ ಕೂಲ್ ಆಗುತ್ತೆ ಅಂದರು.
ನನಗೂ ಇಂತಹ ಹೊಸ ಪ್ರಯೋಗ ಆಗಿಂದಾಗಲೇ ಮಾಡುವ ಹುಕಿ ಆದ್ದರಿಂದ ತಕ್ಷಣ ನಮ್ಮ ಕೆಲಸಗಾರರಿಗೆ ಹೇಳಿ ಈ ವ್ಯವಸ್ಥೆ ಮಾಡಿ ನೀರು ಸ್ಟ್ರಿಂಕ್ಲರ್ ನಿಂದ ಹಾರಿಸಿಬಿಟ್ಟು ಹತ್ತು ನಿಮಿಷದಲ್ಲಿಯೇ ಬೇಸಿಗೆಯ ಬಿಸಿಲಿಗೆ ಬಿಸಿ ಇಡ್ಲಿ ಪಾತ್ರೆ ಆಗಿದ್ದ ಆಪೀಸು ಕ್ಯಾಬೀನು ಏರ್ ಕಂಡೀಷನ್ ಆಗಿ ಆಹ್ಲಾದಕರ ಅನ್ನಿಸಿಬಿಟ್ಟಿತು.
ಈ ಐಡಿಯಾ ನೀಡಿದ ಗುಜರಾತಿನ ಹರೀಸ್ ಬಾಯ್ ಗೆ ಕೃತಜ್ಞತೆ ಅರ್ಪಿಸಿ ಮರುದಿನ ನಮ್ಮ ಮಲ್ಲಿಕಾ ವೆಜ್ ರೆಸ್ಟೋರಾಂಟ್ ನ ಎದುರಿನ ಶೀಟು ಹಾಕಿದ ತೆರೆದ ಪ್ರದೇಶದ ಮಾಡಿಗೂ ಸ್ಪ್ರಿ೦ಕಲರ್ ಅಳವಡಿಸಿದೆವು ಇದಕ್ಕೆ ನಾನು ಖರ್ಚು ಮಾಡಿದ್ದು ಕೇವಲ ಒಂದೂವರೆ ಸಾವಿರ ಇದರಿಂದ ಇಡೀ ವ್ಯವಸ್ಥೆ ತಣ್ಣಗಾಗಿತ್ತು.
ಕಳೆದ ಎರೆಡು ವರ್ಷ ಲಾಕ್ ಡೌನ್ ಕಾರಣದಿಂದ ಇದು ಪ್ರಾರಂಬಿಸಿರಲಿಲ್ಲ ಮತ್ರು ಹೊಸ ಲಾಡ್ಜ್ ಕಛೇರಿ ಹೊಸ ಕಟ್ಟಡದಲ್ಲಿ AC ಅಳವಡಿಸಿದ್ದರಿಂದ ನಮಗೆ ಬೇಸಿಗೆ ಬಿಸಿ ಅನುಭವ ಕಡಿಮೆ ಆಗಿತ್ತು.
ಈ ವರ್ಷದ ಮಾರ್ಚ್ ನಲ್ಲಿ ಅತ್ಯಂತ ಹೆಚ್ಚು ಶೆಖೆ ಮತ್ತು ಹೆಚ್ಚು ಉಷ್ಣಾಂಶ ದಾಖಲಾದ್ದರಿಂದ ಇವತ್ತು ನಮ್ಮ ಮಲ್ಲಿಕಾ ವೆಜ್ ರೆಸ್ಟೋರಾಂಟ್ ಗೆ ಪುನಃ ಗುಜರಾತಿನ ಹರೀಸ್ ಬಾಯಿ ಟೆಕ್ನಿಕ್ ನ ದೇಸಿ ಹವಾನಿಯಂತ್ರಣದ ತಗಡಿನ ಮಾಡಿನ ಮೇಲೆ ಸಾಲಾಗಿ ಸಣ್ಣ ಸ್ಟ್ರಿಂಕ್ಲರ್ ಅಳವಡಿಸಿ ಇವತ್ತು ಮಧ್ಯಾಹ್ನ ಇಡೀ ರೆಸ್ಟೋರಂಟ್ ನ ಎದುರು ಭಾಗದ ತೆರೆದ ಹಾಲ್ ತಣ್ಣಗೆ ಮಾಡಿದೆವು.
ಇದನ್ನು ಒ0ದು ಅಂತಸ್ತಿನ RCC ಮನೆಗೆ, ಹೆಂಚಿನ ಮನೆಗೂ ಅಳವಡಿಸಿದರೆ ಬೇಸಿಗೆ ತಂಪಾಗಿ ಕಳೆಯಬಹುದು, ಇದು ಸಾವಿರಾರು ವರ್ಷದ ಹಿಂದಿನ ರಾಜರ ಬೇಸಿಗೆಯ ಅರಮನೆಗಳ ಶೀಸಾ ಮಹಲ್ ಗಳ ಸ್ವದೇಶಿ ತಂತ್ರಜ್ಞಾನವೇ ಆಗಿದೆ. ಇದಕ್ಕೆ ಪೈಪ್, ವಾಲ್ವ್, ಸ್ಪ್ರಿಂಕಲರ್ ಮತ್ತು ಅಳವಡಿಸಿದವರ ಸಂಬಳ ಸೇರಿ ನನಗಾದ ಖರ್ಚು ಕೇವಲ ಎರೆಡು ಸಾವಿರ ಮತ್ತು ಇದರಿಂದ ಹವಾ ನಿಯಂತ್ರಣವಾದ ಸ್ಥಳದ ವಿಸ್ತಾರ 60 ಅಡಿ ಉದ್ದ ಮತ್ತು 15 ಅಗಲದ ಪ್ರದೇಶ.
ಇವತ್ತು ಗುಜರಾತಿನ ಹರೀಸ್ ಬಾಯ್ ಇನ್ನೊಮ್ಮೆ ನೆನಪಾದರು.
Comments
Post a Comment