#ಮುಂದಿನ_ತಿಂಗಳು_ಮೇ_3ಕ್ಕೆ_ಗೃಹಪ್ರವೇಶ
#ನಾವೆಲ್ಲರೂ_ಅವರಿಗೆ_ಶುಭ_ಹಾರೈಸೋಣ.
ರಾಜ್ಯ ಜಾನಪದ ಅಕಾಡಮಿ ಅಧ್ಯಕ್ಷೆ, ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಪಡೆದ ಮಾತಾ ಮಂಜಮ್ಮ ಜೋಗತಿಯವರ ಜೀವನದ ಬಗ್ಗೆ ತಿಳಿಯಬೇಕಾದರೆ ಅರುಣ್ ಜೋಳದಕೂಡ್ಲಿಗಿ ಬರೆದ "ನಡುವೆ ಸುಳಿವ ಹೆಣ್ಣು" ಪುಸ್ತಕ ಓದಲೇ ಬೇಕು ಓದಿದವರೆಲ್ಲರ ಹೃದಯ ಕಲಕಿ ಕಣ್ಣೀರಾಗದೆ ಇರುವುದಿಲ್ಲ.
ಕಲ್ಲು ಮುಳ್ಳಿನ ಜೀವನದ ಹಾದಿಯಲ್ಲಿ ಯಾವುದೇ ನಿರೀಕ್ಷೆ ಇಲ್ಲದೆ, ತನ್ನವರೆಂಬುವವರೆಲ್ಲ ದೂರವಾಗಿದ್ದ ಮಂಜಮ್ಮ ಜೋಗತಿ ಹೊಟ್ಟೆಪಾಡಿಗಾಗಿ ಜಾನಪದ ನೃತ್ಯ ಒಂದೇ ಕಸುಬಾಗಿತ್ತು, ದೈವ ಕೃಪೆಯಿಂದ ಜಾನಪದ ಅಕಾಡೆಮಿ ಸದಸ್ಯರಾಗಿ ಸರ್ಕಾರ ನೇಮಿಸಿತ್ತು ನಂತರ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪ ಸರ್ಕಾರ ಇವರನ್ನು ಅಧ್ಯಕ್ಷರಾಗಿಸಿತು.
ಪದ್ಮಶ್ರೀ ಪ್ರಶಸ್ತಿಯ ಸಮ್ಮಾನವೂ ಆಗಿ ಮಂಜಮ್ಮ ಜೋಗತಿ ಕನ್ನಡಿಗರ ಅಚ್ಚುಮೆಚ್ಚಿನ ಪದ್ಮಶ್ರೀ ಮಾತಾ ಮಂಜಮ್ಮ ಜೋಗಿ ಆದರು, ಅವರಂತೆಯೇ ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾದವರಿಗೆ ತಲೆ ಎತ್ತಿ ಜೀವಿಸಲು ಮತ್ತು ಅವರ ಹಕ್ಕುಗಳ ಕೇಳಲು ಇವರು ಪ್ರೇರಕರಾಗಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಸು ಕಾಣುವುದು ಸ್ವಂತದ್ದಾದ ಮನೆ ಮಾಡಿಕೊಳ್ಳಬೇಕೆಂದು ಅದರಂತೆ ಮಂಜಮ್ಮ ಜೋಗತಿ ಅವರ ಕನಸು ನನಸಾಗಿದೆ ಇದೇ ಮುಂದಿನ ತಿಂಗಳು 3 ರಂದು (3 - ಮೇ -2022) ಸ್ವಂತ ಊರಾದ ಬಳ್ಳಾರಿ ಜಿಲ್ಲೆಯ ಮರಿಯಮ್ಮನ ಹಳ್ಳಿಯಲ್ಲಿ ಗೃಹ ಪ್ರವೇಶದ ಆಹ್ವಾನ ನೀಡಿದ್ದಾರೆ.
ಜಾನಪದ ಕಲೆಯಂತೆ ಮಂಜಮ್ಮ ಜೋಗತಿ ಕನ್ನಡದ ಪುಸ್ತಕಗಳ ಓದುವ ಹವ್ಯಾಸದವರು, ನನ್ನ ಕಾದಂಬರಿ ಕೆಳದಿ ಇತಿಹಾಸ ಮರೆತ #ಬೆಸ್ತರ_ರಾಣಿಚಂಪಕಾ (ಕೆಳದಿ ರಾಜ ವೆಂಕಟಪ್ಪ ನಾಯಕರ ಮತ್ತು ರಾಣಿ ಚಂಪಕಾಳ ದುರಂತ ಪ್ರೇಮ ಕಥೆ )ಓದಿ ಕಣ್ಣೀರಾಗಿದ್ದರು, ಅದನ್ನು ವಿಡಿಯೋದಲ್ಲಿ ಪ್ರತಿಕ್ರಿಯಿಸಿದ್ದು ತುಂಬಾ ವೈರಲ್ ಆಗಿತ್ತು ಈ ಲಿಂಕ್ ತೆರೆದು ನೋಡಿ.
https://youtu.be/eFBnvRL2ud8
ನೂತನ ಗೃಹ ಪ್ರವೇಶಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಮಂಜಮ್ಮ ಜೋಗತಿಯವರಿಗೆ ಇಡೀ ನಾಡೇ ದೇವರು ಆಯುರಾರೋಗ್ಯ - ಆಯುಸ್ಸು- ಐಶ್ವರ್ಯ ನೀಡಲಿ ಎಂದು ಹಾರೈಸುತ್ತದೆ.
Comments
Post a Comment