Blog no 830. ಕಾಗೋಡು ಹೋರಾಟದ ರೂವಾರಿ ಹೆಚ್ ಗಣಪತಿಯಪ್ಪ ರಂಗಮಂದಿರ ಆನಂದಪುರಂನ ಯಡೇಹಳ್ಳಿಯ ಕೆಂಜಿಗಾಪುರ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1999 - 2000ದಲ್ಲಿ ಸ್ಥಾಪಿಸಲಾಗಿದೆ.
#ಆನಂದಪುರ೦ನ_ಯಡೇಹಳ್ಳಿ_ಸರ್ಕಾರಿ_ಮಾಧ್ಯಮಿಕ_ಶಾಲೆಯಲ್ಲಿ.
#ನಮ್ಮ_ಊರಿಗೆ_ಮಂಜೂರಾಗಿದ್ದ_ಟೆಬೇಟಿಯನ್_ಕ್ಯಾಂಪ್
#ಮುಖ್ಯಮಂತ್ರಿ_ಕಡಿದಾಳರಿಂದ_ಮುಂಡಗೋಡಿಗೆ_ಬದಲಿಸಿದವರು_ಗಣಪತಿಯಪ್ಪ.
ಮುಂಡಗೋಡಿನ ಟಿಬೇಟ್ ಕ್ಯಾಂಪ್ ಮೊದಲು ಮಂಜೂರು ಆಗಿದ್ದು ಆನಂದಪುರಂ ಹೋಬಳಿಯ ಕೆಂಜಿಗಾಪುರ ಕೇಂದ್ರಿತವಾಗಿ ಯಡೇಹಳ್ಳಿ, ಇರುವಕ್ಕಿ,ಅಡೂರು, ಹೆಬ್ಬೋಡಿ, ತಾವರೇಹಳ್ಳಿಗ್ರಾಮಗಳ ಸಾವಿರಾರು ಎಕರೆ ಪ್ರದೇಶವಾಗಿತ್ತು ಆಗ ಸ್ಥಳಿಯ ಭೂ ಮಾಲಿಕರು ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪರನ್ನ ವಿನಂತಿ ಮಾಡುತ್ತಾರೆ.
ಗಣಪತಿಯಪ್ಪರಿಗೆ ಆತ್ಮೀಯರಾಗಿದ್ದ ಕಡಿದಾಳು ಮಂಜಪ್ಪ ಗೌಡರು ಆಗ ಮುಖ್ಯಮಂತ್ರಿಗಳು ಆಗಿದ್ದರಿಂದ ಗಣಪತಿಯಪ್ಪನವರು ಕಡಿದಾಳರ ಮನ ಒಲಿಸುತ್ತಾರೆ ಆದ್ದರಿಂದಲೇ ಟೆಬೇಟಿಯನ್ ಕ್ಯಾಂಪ್ ಇಲ್ಲಿ೦ದ ಮುಂಡಗೋಡಿಗೆ ಬದಲಾಗುತ್ತದೆ.
(ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ https://arunprasadhombuja.blogspot.com/2021/06/30.html)
ಈ ಘಟನೆಯ ನೆನಪಿಗಾಗಿ ಮತ್ತು ಸ್ವಾತಂತ್ರ ಭಾರತದ ಭೂ ಹೋರಾಟ ಕಾಗೋಡು ಸತ್ಯಾಗ್ರಹ ಹುಟ್ಟು ಹಾಕಿದ ನೇತಾರ ಗಣಪತಿಯಪ್ಪರ ಹೆಸರು ಚಿರಸ್ಥಾಯಿಗೊಳಿಸಲು ಆನಂದಪುರಂ ಹೋಬಳಿಯ ಯಡೇಹಳ್ಳಿಯ ಕೆಂಜಿಗಾಪುರದ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ #ಕಾಗೋಡು_ಸತ್ಯಾಗ್ರಹದ_ರೂವಾರಿ_ಹೆಚ್_ಗಣಪತಿಯಪ್ಪ_ರಂಗಮಂದಿರ_ನಿರ್ಮಿಸಲಾಗಿದೆ.
ವಿಶೇಷವೆಂದರೆ ಈ ರಂಗ ಮಂದಿರ ಉದ್ಘಾಟನ ಕಾರ್ಯಕ್ರಮದಲ್ಲಿ ಗಣಪತಿಯಪ್ಪನವರು ಭಾಗವಹಿಸಿದ್ದರು ಈ ದಿನ ಸ್ಥಳಿಯ ಗಣಪತಿಯಪ್ಪ ಅಭಿಮಾನಿಗಳು ಗಣಪತಿಯಪ್ಪರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಶಾಲಾ ಸಮಿತಿ, ಶಿಕ್ಷಕ ವೃಂದ ಮತ್ತು ಸ್ಮಳಿಯ ಗ್ರಾಮ ಪಂಚಾಯತ್ ಈ ರಂಗಮಂದಿರ ಸುವ್ಯವಸ್ಥೆಯಿಂದ ನಿರ್ವಹಿಸುತ್ತಾ ಬಳಸುತ್ತಿರುವುದು ಕೂಡ ಅಭಿನಂದನಾರ್ಹ ವಿಚಾರ.
Comments
Post a Comment