Blog number 831.ಹೆಣ್ಣು ನಾಯಿ ಸಂತಾನ ಹರಣ ಚಿಕಿತ್ಸೆ ಮತ್ತು ಬೀದಿ ನಾಯಿ ಸಂರಕ್ಷಣೆ ಸಹೃದಯ ವೈದ್ಯರ ತಂಡದಿಂದ ಇದನ್ನು ವ್ಯವಸ್ಥೆಗೊಳಿಸಿದ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯನವರು ಮತ್ತು ಸಾಕ್ಷಿಯಾದ ಜಿಲ್ಲಾ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ತೀ.ನಾ. ಶ್ರೀನಿವಾಸ್
#ಕಾರಣಕರ್ತರು_ಹಿರಿಯ_ಸಮಾಜವಾದಿ_ಪುಟ್ಟಯ್ಯನವರು
#ಸಾಕ್ಷಿ_ಜಿಲ್ಲಾ_ಕಾಂಗ್ರೇಸ್_ಮಾಜಿ_ಅಧ್ಯಕ್ಷರಾದ_ತೀ_ನಾ_ಶ್ರೀನಿವಾಸ್.
ನನ್ನ ಮಗಳು ಸಾಕಿದ ಅನಾಥ ಹೆಣ್ಣು ನಾಯಿಗಳಾದ ಜಾನ್ಸಿ, ಚಿಂಗೂ, ಜಾನ್ಸಿ ಮಗಳು ಕಾಳು, ಚೊಂಗು ಮಗಳು ಕೆಂಪು ಇವುರುಗಳೆಲ್ಲ ನಮ್ಮ ಕುಟುಂಬ ಸದಸ್ಯರು.
ಇವರುಗಳನ್ನು ಸಂತಾನಹರಣ ಚಿಕಿತ್ಸೆ ಮಾಡಿಸಬೇಕೆಂಬ ಮೂರು ವರ್ಷದ ಪ್ರಯತ್ನ ಇವತ್ತು ಈಡೇರಿಸಿದವರು ಹಿರಿಯ ಸಮಾಜವಾದಿಗಳಾದ ಪ್ರಕೃತಿ ಪಿ. ಪುಟ್ಟಯ್ಯನವರು.
ಇವರು ಸ್ವತಃ ಅನೇಕ ಅನಾಥ ಬೀದಿ ನಾಯಿಗಳ ಪೋಷಕರು ಮತ್ತು ಇವರಂತ ಸಮಾನ ಮನಸ್ಕರು ಸೇರಿ ಅನೇಕ ವರ್ಷದಿಂದ ಅನಾಥಬೀದಿ ನಾಯಿಗಳ ಸಂರಕ್ಷಣೆ ಮಾಡುತ್ತಾರೆ.
ಈ ವಿಚಾರದಲ್ಲಿ ನನಗೆ ಸಲಹೆ ಸಹಕಾರ ನೀಡುವ ಅವರು ನಮ್ಮಲ್ಲಿರುವ ನಾಲ್ಕು ಹೆಣ್ಣು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಯ ವ್ಯವಸ್ಥೆ ಮಾಡಿದರು.
ಇದಕ್ಕಾಗಿ ಇವರಿಗೆ ಸಹಕರಿಸುವ ಪಶು ವೈದ್ಯ ಶಸ್ತ್ರಚಿಕಿತ್ಸಕರುಗಳ ತಂಡ ಇವತ್ತು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ 2 ರ ವರೆಗೆ ಕಾರ್ಯನಿರ್ವಹಿಸಿತು.
ಜಾನ್ಸಿ ಮತ್ತು ಅವಳ ಮಗಳು ನಮ್ಮ ಮನೇನಲ್ಲಿ ನಮ್ಮ ಜೊತೆ ಇರುವುದರಿಂದ ತೊಂದರೆ ಆಗಲಿಲ್ಲ ಆದರೆ ನಮ್ಮ ಲಾಡ್ಜ್ ಸುತ್ತಮುತ್ತ ಕಾಯುವ ಮತ್ತು ರಬ್ಬರ್ ತೋಟದ ಇಬ್ಬರನ್ನು ಹಿಡಿದು ತರುವ ಅವರಿಬ್ಬರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಶ್ರಮದ ಕೆಲಸ ಕೂಡ ಸವಾಲಾಗಿತ್ತು.
ಯಶಸ್ವಿಯಾಗಿ ನಾಲ್ಕು ನಮ್ಮ ಹೆಣ್ಣು ನಾಯಿಗಳ ಸಂತಾನ ಹರಣ ಚಿಕಿತ್ಸೆ ನಡೆಸಿದ ಸಹೃದಯಿ ವೈದ್ಯರ ತಂಡಕ್ಕೆ ಮತ್ತು ಅವರನ್ನು ಕರೆತಂದ ಹಿರಿಯ ಸಮಾಜವಾದಿ ದುರೀಣರಾದ ಪುಟ್ಟಯ್ಯನವರಿಗೆ, ಸಾಕ್ಷಿಗಳಾದ ತೀನಾ. ಶ್ರೀನಿವಾಸರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಈ ರೀತಿ ಸಂತಾನ ಹರಣ ಚಿಕಿತ್ಸೆಯಿಂದ ಅವುಗಳು ಮರಿ ಹಾಕದಂತೆ ಆಗುತ್ತದೆ, ಈ ಚಿಕಿತ್ಸೆ ನಂತರ ದಷ್ಟ ಪುಷ್ಟ ಆಗುವ ಹೆಣ್ಣು ನಾಯಿಗಳು ತುಂಬಾ ಪೆರೋಷಿಯಸ್ ಆಗಿ ಮನೆ ಕಾಯುತ್ತದೆ ಆದ್ದರಿಂದ ಹೆಣ್ಣು ನಾಯಿ ಅಂತ ಪೇಟೆಯಲ್ಲಿ ತಂದು ಬಿಡುವ ಕೆಟ್ಟ ಸಂಪ್ರದಾಯ ಕಡಿಮೆ ಆಗುವ ನಿರೀಕ್ಷೆ ನನ್ನದು.
ಸ್ಥಳಿಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವರ್ಷಕ್ಕೊಮ್ಮೆ ಇಂತಹ ಅಭಿಯಾನ ಹಮ್ಮಿಕೊಂಡರೆ ನಾಯಿ ಸಾಕುವವರಿಗೆ ಹೆಚ್ಚು ಅನುಕೂಲ ಆದರೆ ಅದು ಯಾವಾಗ ಆದೀತೆಂಬುದು ಮರೀಚಿಕೆ ಅಷ್ಟೆ.
ಹೆಣ್ಣು ನಾಯಿಯನ್ನು ಸಾಕುವವವರು, ಬೀದಿ ನಾಯಿ ಸಂರಕ್ಷಕರು ಆಗಾಗ್ಗೆ ತಮ್ಮ ತಮ್ಮ ಊರಲ್ಲೇ ಇಂತಹ ಕ್ಯಾಂಪ್ ಮಾಡಿಸಬಹುದು.
Comments
Post a Comment