ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕರ ದುರ೦ತ ಪ್ರೇಮ ಕಥೆಯ ಸ್ಮಾರಕ ಚಂಪಕ ಸರಸ್ಸು ವಿಗೆ ಕೆಳದಿ ರಾಜವಂಶಸ್ಥರಾದ ಚಂದ್ರಕಾಂತ ಸಂಗ ನಾಯ್ಕ ದಂಪತಿಗಳು ಮತ್ತು ಕೆಳದಿ ಇತಿಹಾಸ ಸಂಶೋದಕ ಗುಂಡಾಜೋಯಿಸರ ಬೇಟಿ, ಸ್ಥಳಿಯ ಇತಿಹಾಸ ನಿರ್ಲಕ್ಷಿಸಿ ಇತಿಹಾಸ ತಿರುಚ ಬಾರದಾಗಿ ಕರೆ ನೀಡಿದ್ದಾರೆ
#ಕಳೆದ_ವಾರ_ವಿಶೇಷ_ಅತಿಥಿಗಳ_ಆಗಮನ
#ಕೆಳದಿ_ಇತಿಹಾಸ_ಸಂಶೋದಕರಾದ_ಗುಂಡಾಜೋಯಿಸರಿಂದ_ಚಂಪಕ_ಸರಸ್ಸು_ಫುನಶ್ಚೇದನ_ಕಾರ್ಯ_ವೀಕ್ಷಣೆ.
#ಕೆಳದಿ_ರಾಜ_ವಂಶಸ್ಥರಾದ_ಚಂದ್ರಕಾಂತ_ಸಂಗನಾಯಕ_ದಂಪತಿಗಳಿಂದ_ಚಂಪಕ_ಸರಸ್ಸು_ವೀಕ್ಷಣೆ
#ಇತಿಹಾಸ_ಪರಂಪರೆ_ಉಳಿಸಿ_ಟ್ರಸ್ಟ್
#ಆನಂದಪುರಂ_ಸಾಹಿತ್ಯ_ಪರಿಷತ್_ಘಟಕ
#ಆನಂದಪುರಂ_ಪತ್ರಕರ್ತರ_ಕೂಟ
#ಆನಂದಪುರಂ_ಈಜು_ಬಳಗದ_ಪರಿಶ್ರಮ_ಶ್ಲಾಘನೀಯ
2024ಕ್ಕೆ ಚಂಪಕ ಸರಸ್ಸು ಸ್ಮಾರಕಕ್ಕೆ 400 ನೇ ವಷಾ೯ಚಾರಣೆ (ನಾಲ್ಕು ಶತಮಾನ) ಬಹುಶಃ ಈ ನಾಲ್ಕುನೂರು ವರ್ಷ ಈ ಸ್ಮಾರಕ ಹೊರ ಪ್ರಪಂಚಕ್ಕೆ ತೆರೆದುಕೊಳ್ಳದೇ ಅಜ್ಞಾತವಾಗಿತ್ತು ಮತ್ತು ಸೂಸೈಡ್ ಪಾಯಿಂಟ್ ಎಂಬ ಭಯ ಹುಟ್ಟಿಸುವ ಸ್ಥಳವಾಗಿತ್ತು.
ಇದಕ್ಕೆ ಕಾರಣ ಕೆಳದಿ ರಾಜ ವೆಂಕಟಪ್ಪ ನಾಯಕ ಬೆಸ್ತರ ಕುಲದ ಸುಂದರಿ ಚಂಪಕಾಳ ಮನಮೋಹಕ ರಂಗೋಲಿಗೆ ಮನಸೋತು ವಿವಾಹ ಆಗಿದ್ದು ಈ ಅಂತರ್ಜಾತಿ ವಿವಾಹ ವಿರೋದಿಸಿದ ಪಟ್ಟದ ರಾಣಿ ಭದ್ರಮ್ಮಾಜಿ ಅನ್ನಹಾರ ತ್ಯಜಿಸಿ ಜೀವ ತ್ಯಾಗ ಮಾಡಿದ್ದು ಇದರಿಂದ ಕೆಳದಿ ರಾಜ್ಯದಲ್ಲಿ ಚಂಪಕ ಮಾಯಾವಿ ಅನ್ಯ ಆಹಾರ ಸುರಾಪಾನ ಮಾಡುತ್ತಾಳೆ೦ಬ ಸುಳ್ಳು ಸುದ್ದಿ ಹರಡಿ ಪ್ರಜೆಗಳು ರಾಜ ವೆಂಕಟಪ್ಪ ನಾಯಕರನ್ನು ಖಳನಾಯಕರಂತೆ ಬಾವಿಸಿದ್ದರಿಂದ ನೊಂದ ಚಂಪಕ ವಜ್ರದ ಪುಡಿ ಮಿಶ್ರಿತ ಹಾಲು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ತನ್ನ ಪ್ರೀತಿಯ ಪತ್ನಿ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ ಈ ಸ್ಮಾರಕವೇ #ಚಂಪಕ_ಸರಸ್ಸು.
ರಾಣಿ ಭದ್ರಮ್ಮಾಜಿಯ ಸಾವಿಗೆ ಚಂಪಕ ಕಾರಣ ಎಂದು ಈ ಸ್ಮಾರಕ ಶಾಪಗ್ರಸ್ತವೇ ಆಗಿತ್ತು, ಚಂಪಕಳಾ ವಂಶಸ್ಥರು ಈಗಲೂ ಇದ್ದಾರೆ ಅವರಿಗೆ ಆ ಕಾಲದ ರಾಜಪರಿವಾರದ ಭಯ ಇನ್ನೂ ಹೋಗಿಲ್ಲ ಇನ್ನೊಂದು ಚಂಪಕ ಸೂಳೆ ಎಂದು ಜರಿಯುತ್ತಾ ಬಂದ ಚಂಪಕಳ ವಿರೋದಿ ಮನಸ್ಸುಗಳ ಸಮಾಜದಿಂದ ತಾವು ಚಂಪಕಳ ವಂಶಸ್ಥರೆಂದರೆ ತಮಗೆ ಅವಮಾನ ಎಂಬ ಭಯ.
ಚಂಪಕಾಳ ಮನೆ ಇದ್ದ ಜಾಗ ಅದರ ವಂಶಸ್ಥರು 1860 ರಲ್ಲಿ ಬ್ರಿಟಿಷ್ ಸರ್ಕಾರದ ಪ್ರಾಥಮಿಕ ಶಾಲೆಗೆ ದಾನ ನೀಡುತ್ತಾರೆ ಅಷ್ಟೇ ಅಲ್ಲ ಜಮೀನು ದಾನ ನೀಡಿದ್ದಕ್ಕಾಗಿ ಬ್ರಿಟಿಷ್ ಸರ್ಕಾರ ಈ ಶಾಲೆಯಲ್ಲಿ ಉದ್ಯೋಗ ನೀಡಿದರು ನಿರಾಕರಿಸುತ್ತಾರೆ.
ಚಂಪಕಾ ಮುಸ್ಲಿಂ ಎಂಬ ಕೆಲವರ ವಾದವಿದೆ ಅದಕ್ಕೆ ಅವರು ಉದಾಹರಿಸುವುದು ಡೊಲ್ಲಾ ವಿಲ್ಲೆ ಎ೦ಬ ಪ್ರವಾಸಿ ಪತ್ರ ಆದರೆ ಈ ಬಗ್ಗೆ ಸಂಶೋದನೆ ನಡೆಸಿರುವ ಡಾ. ಕೇಸರಿ ಆಗಿನ ಇಟಲಿಯಲ್ಲಿ ನದಿ ದಂಡೆಯಲ್ಲಿ ಮೀನುಗಾರಿಕೆ ವೃತ್ತಿಯ ಜನ ಸಮೂಹಕ್ಕೆ ಮ್ಲೇಚರೆಂದು ಕರೆಯುತ್ತಿದ್ದರು ಆ ಕಾಲದಲ್ಲಿ ಆನಂದಪುರಂ ಪೇಟೆ ಬೆಸ್ತರ ಕಾಲೋನಿ ಆಗಿತ್ತು ಆದ್ದರಿಂದ ಡೊಲ್ಲಾವಿಲ್ಲೆ ಹೇಳಿದ್ದು ಸರಿ ಅನ್ನುತ್ತಾರೆ ಅವರು ಇದರಿಂದ ಚಂಪಕ ಮುಸ್ಲಿಂ ಅಲ್ಲ ಮತ್ತು ಮುಸ್ಲಿಂರಲ್ಲಿ ಚಂಪಕ ಹೆಸರು ಇಡುವ ಪದ್ದತಿ ಇಲ್ಲ ಎನ್ನುತ್ತಾರೆ, ಅವರ ಸಂಶೋದನಾ ವರದಿ ಸದ್ಯದಲ್ಲಿ ಬಿಡುಗಡೆ ಆಗಲಿದೆ.
ಇನ್ನೂ ಕೆಲವರು ಇಲ್ಲಿ ಸಂಪಿಗೆ ಮರ ಇದ್ದಿದ್ದರಿಂದ ಚಂಪಕ ಸರಸ್ಸು ಎಂದಾಯಿತು ಎಂಬುದು ಸರಿಯಾದ ಉದಾಹರಣೆ ಅಲ್ಲ, ಆ ಕಾಲದಲ್ಲಿ ಸಂಪಿಗೆ ಮರ ಹೆಚ್ಚು ಇದ್ದ ಪ್ರದೇಶಕ್ಕೆ ಸಂಪಿಗೆ ಸರ, ಸಂಪಿಗೆಹಳ್ಳಿ ಅಂತ ಕರೆಯುತ್ತಿದ್ದ ವಾಡಿಕೆ ಮತ್ತು ಸಂಪಿಗೆ ಸರ ಎಂಬ ಮಜರೆ ಊರುಗಳು ಇರುವುದನ್ನು ಉದಾಹರಿಸುತ್ತಾರೆ.
ಮತ್ತು ಸ್ಥಳಿಯ ಜನಪದ ಅದಕ್ಕೆ ಪೂರಕವಾದ ಸ್ಥಳದ ಮಾಹಿತಿ, ಚಂಪಕಳ ವಂಶಸ್ಥರು, ಚಂಪಕಾ ಕುಟುಂಬದವರ ವಾಸದ ಜಾಗ ಬ್ರಿಟಿಷ್ ಸರ್ಕಾರಕ್ಕೆ ದಾನ ನೀಡಿದ್ದು,ಸ್ಥಳ ದಾನ ನೀಡಿದವರಿಗೆ ಬ್ರಿಟಿಷ್ ಸರ್ಕಾರ ನೀಡಿದ ನೌಕರಿಯನ್ನು ಶಾಪಕ್ಕೆ ಹೆದರಿ ನಿರಾಕರಿಸಿದ್ದು ಮತ್ತು ಚಂಪಕಾ ಬಳಸುತ್ತಿದ್ದ ಪೂಜಾ ಸಾಮಗ್ರಿ, ತಾಮ್ರಪತ್ರಗಳು ಸಂಶೋದಕರು ಪಡೆದು ಸಂಶೋದಿಸಬೇಕು.
ಚಂಪಕಾ ಕೋಟೆಯಲ್ಲಿನ ಅರಮನೆಯಲ್ಲಿ ನಿತ್ಯ ಪೂಜಿಸುತ್ತಿದ್ದ ಸಣ್ಣ ಶಿಲಾ ಶಿವಲಿಂಗವೇ ಚಂಪಕ ಸರಸ್ಸು ಕೊಳದ ಮಧ್ಯದಲ್ಲಿರುವ (ಕಲ್ಲಿನ ಪಾವಟಿಕೆ ಮೂಲಕ ಹೋಗಬೇಕು) ಶಿಲಾ ದೇವಾಲಯದಲ್ಲಿ ಸ್ಥಾಪಿಸಿದ್ದಾರೆ ಈ ಶಿವಲಿಂಗದ ಎದುರು ಕಲ್ಲಿನ ಸಣ್ಣ ಬಸವಣ್ಣ ಇದೆ.
ಚಂಪಕಾಳ ಗದ್ದುಗೆ ಇಲ್ಲಿ ಯಾವುದು ಎಂದು ಮುಂದಿನ ಸಂಶೋದನೆಗಳು ಬೆಳಕು ಚೆಲ್ಲಬಹುದು.
ಆನಂದಪುರಂನ ಅಭಿವೃದ್ಧಿಗೆ ಕಾರಣರಾದ ದೈಹಿಕ ಶಿಕ್ಷಕ ಎಸ್.ಆರ್.ಕೃಷ್ಣಪ್ಪ (ಶಿಕಾರಿಪುರ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಗಿದ್ದರು) ನಂತರ ಆನಂದಪುರಂ ಕನ್ನಡ ಸಂಘ, ನಂತರ ಸಾಗರದ ಜೀವ ವಿಮಾ ಇಲಾಖೆಯ ಹರೀಶ್ ನವಾತೆ ನೇತೃತ್ವದ ಆನಂದಪುರಂ ಈಜು ಬಳಗ (ಹರೀಶ್ ನವಾತೆ ಕರೆ ತಂದವರು ಸಂತೆ ಮಾರ್ಕೆಟ್ ನ LIC ಹರೀಶ್, DTDC ಕೋರಿಯರ್ ರಾಮಣ್ಣ ) ನಂತರ ಆನಂದಪುರಂ ಪತ್ರಕತ೯ರ ಒಕ್ಕೂಟ, ನಂತರ ಇವರೆಲ್ಲ ಸೇರಿ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್, ಇವರಿಗೆ ಬೆಂಗಾವಲಾದ ವಿ.ಟಿ. ಸ್ವಾಮಿ ನೇತೃತ್ವದ ಸಾಗರ ಸಾಹಿತ್ಯ ಪರಿಷತ್, ಜಾನಪದ ಪರಿಷತ್, ನಿವೃತ್ತ ನೌಕರರ ಸಂಘ, ರಾಷ್ಟ್ರೀಯ ಸ್ವಯ೦ ಸೇವಕ ಸಂಘ, ಇವರ ಆಸಕ್ತಿಗೆ ಕೈ ಜೋಡಿಸಿದ ಜಲ ತಜ್ಞ ಶಿವಾನಂದ ಕಳವೆ ( ಇವರನ್ನು ಕರೆತಂದ ನೀಚಡಿ ಕೆರೆ ಅಭಿವೃದ್ದಿ ಸಮಿತಿಯವರು) ಶಿವಾನಂದ ಕಳವೆಯರ ಶಿಪಾರಸ್ಸಿನಿಂದ #ಚಂಪಕ_ಸರಸ್ಸು ಪುನಶ್ಚೇತನದ ಜವಾಬ್ದಾರಿ ಪ್ರಸಿದ್ಧ ರಾಕಿಂಗ್ ಸ್ಟಾರ್ ಯಶ್ ರವರ ಸಂಸ್ಥೆ #ಯಶೋಮಾರ್ಗ ವಹಿಸಿಕೊಂಡಿದೆ.
400 ವರ್ಷದಲ್ಲಿ ಆಗದ ಪುನಶ್ಚೇತನ ಕೆಲಸ ಪ್ರಾರಂಭವಾಗಿದೆ, ಅನೇಕ ಇತಿಹಾಸ ತಜ್ಞರು ಸಂಶೋದನೆಗೆ ಮುಂದಾಗಿದ್ದಾರೆ, ಈಗ ಪ್ರತಿ ನಿತ್ಯ ಚಂಪಕ ಸರಸ್ಸು ವೀಕ್ಷಿಸಲು ನೂರಾರು ಜನ ಹೊರ ಜಿಲ್ಲೆಗಳಿಂದ ಬರುತ್ತಿದ್ದಾರೆ ಇದರಿಂದ ಇಲ್ಲಿನ ಜವಾಬ್ದಾರಿ ವಹಿಸಿದ ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ಗೆಳೆಯರು ಮುಂದಿನ ಹಂತದಲ್ಲಿ ಶಿಥಿಲವಾಗಿರುವ ಆನಂದಪುರಂ ಕೋಟೆ ಸ್ವಚ್ಚತೆ ಮತ್ತು ದುರಸ್ತಿ, ಸುತ್ತಮುತ್ತಲಿನ ಶಿಲಾಶಾಸನಗಳ ಸಂರಕ್ಷಣೆ, ಕೆಳದಿ ಅರಸರ ದಾನ ದತ್ತಿ ಪಡೆದ ವಿಜಯನಗರದ ಸಾಮ್ರಾಜ್ಯದ ಪ್ರಸಿದ್ಧ ಗಂಗಾ ಮಠ ಪುನರ್ ಸ್ಥಾಪನೆ, ಚಂಪಕ ಸರಸ್ಸು ಸಮೀಪ ಪಳಿಯುಳಿಕೆ ಆಗಿ ಉಳಿದ ಮಹತ್ತಿನ ಮಠ, ಸಾವಿರ ವರ್ಷದ ಹಿಂದಿನ ಶಾಸನ ಇರುವ ಆಚಾಪುರದ ತೀರ್ಥ ( ಮಾಚ ರಾಜ ದೇವಾಲಯ)ಗಳನ್ನು ಅಭಿವೃದ್ಧಿ ಮಾಡಿ ಸಾರ್ವಜನಿಕರಿಗೆ ಪ್ರೇಕ್ಷಣಿಯ ಸ್ಥಳ ಮಾಡುವ ಹುಮ್ಮಸ್ಸಿನಿಂದ ಇದ್ದಾರೆ.
ಕಳೆದ ವಾರ ಕೆಳದಿ ವಂಶಸ್ಥರಾದ ರಾಣಿ ವೀರಮ್ಮಾಜಿಯ ಸಂಬಂದಿಗಳಾದ ಹಾಲಿ ಹುಬ್ಬಳ್ಳಿಯಲ್ಲಿ ವಾಸ ಇರುವ ಚಂದ್ರಕಾಂತ ಸಂಗನಾಯಕರು ಬಿನ್ ಬಸಪ್ಪ ನಾಯಕ (ತಮ್ಮಣ್ಣ ) ತಮ್ಮ ಪತ್ನಿ ಜ್ಯೋತಿಯವರೊಂದಿಗೆ ಚಂಪಕ ಸರಸ್ಸು ಸ್ಮಾರಕ ವೀಕ್ಷಿಸಲು ಬಂದಿದ್ದರು ಅವರನ್ನು ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್, ಪತ್ರಕರ್ತರ ಒಕ್ಕೂಟ, ಸಾಹಿತ್ಯ ಪರಿಷತ್, ಜಾನಪದ ಪರಿಷತ್ ಮತ್ತು ಸ್ಥಳಿಯರು ಕೆಳದಿಯ ವ೦ಶಸ್ಥ ದಂಪತಿಗಳಿಗೆ ಸ್ವಾಗತಿಸಿ ಸನ್ಮಾನಿಸಿದರು.
ಇದೇ ರೀತಿ ಕೆಳದಿ ಇತಿಹಾಸ ಸಂಶೋದಕರಾದ ಗುಂಡಾಜೋಯಿಸರನ್ನು ಮೇಲ್ಕಂಡ ಎಲ್ಲಾ ಸಂಸ್ಥೆಗಳು ಆಹ್ವಾನಿಸಿ ಅವರಿಂದ ಸಾಗರ ತಾಲ್ಲೂಕಿನ ಇತಿಹಾಸ ಸಂಶೋಧನಾ ಕಾರ್ಯಕ್ರಮದ ಉದ್ಘಾಟನೆ ಇದೇ ಚಂಪಕ ಸರಸ್ಸು ಅವರಣದಲ್ಲಿ ಯಶಸ್ವಿಯಾಗಿ ನಡೆಸಿತು.
1970 ರಿಂದ ಆನಂದಪುರಂ ನ ಸ್ಥಳಿಯರಿಗೆ ಚಂಪಕ ಸರಸ್ಸು ಸಂರಕ್ಷಿಸಿ ಇದರ ಮಾಹಿತಿಯ ಬೋರ್ಡ್ ಗಳನ್ನು ಎಲ್ಲಾ ಕಡೆ ಹಾಕಿ ಅಂತಿದ್ದ ಕೆಳದಿ ಗುಂಡಾ ಜೋಯಿಸರು ಪುನಶ್ಚೇತನವಾಗುತ್ತಿರುವ ಚಂಪಕ ಸರಸ್ಸು ನೋಡಿ ಸಂತೋಷ ಪಟ್ಟಿದ್ದಾರೆ ಮತ್ತು ಸ್ಥಳಿಯ ಇತಿಹಾಸ ಕಡೆಗಾಣಿಸ ಬೇಡಿ ಮತ್ತು ಇತಿಹಾಸ ತಿರುಚಬೇಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಂಪಕ ಸರಸ್ಸು, ಹೊಸಗುಂದ ದೇವಾಲಯಗಳ ದುರಸ್ತಿಗಾಗಿ ಸಂರಕ್ಷಣೆಗಾಗಿ ಹೆಚ್ಚು ಶ್ರಮ ವಹಿಸುತ್ತಿದ್ದ ಸಂಶೋದಕ ಜಯ ದೇವಪ್ಪ ಜಿನಕೇರಿ ಈಗಿಲ್ಲ ಆದರೆ ಅವರ ಉದ್ದೇಶಗಳು ಈಡೇರಿದೆ.
ಆನಂದಪುರಂ ನ ಇತಿಹಾಸ ಸಾರುವ, ಕೆಳದಿ ರಾಜರ ದುರಂತ ಪ್ರೇಮ ಕಥೆಯ ಸಾರುವ #ಚಂಪಕ_ಸರಸ್ಸು ಸಮಸ್ತ ಆನಂದಪುರಂ ವಾಸಿಗಳ ಆಸ್ತಿ ಇದನ್ನು ಸಂರಕ್ಷಿಸಿ ಉಳಿಸಿ ಬೆಳಿಸಿಕೊಂಡು ಹೋಗುವ ಜವಾಬ್ದಾರಿ ಮುಂದಿನ ತಲೆಮಾರಿನದ್ದು.
ಮುಂದಿನ ದಿನದಲ್ಲಿ ನಕಾಶೆಕಂಡ ರಸ್ತೆ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಆನಂದಪುರಂ ಪದವಿ ಪೂರ್ವ ಕಾಲೇಜು ಮತ್ತು ಕೆ.ಎಂ.ಎಸ್ ರೈಸ್ ಮಿಲ್ ಮಧ್ಯದಲ್ಲಿದೆ, ಗಟ್ಟಿ ಮುಟ್ಟಾದ ಮೋರಿ ಇನ್ನೂ ಸುಸ್ಥಿತಿಯಲ್ಲಿದೆ ಇದನ್ನು ಸ್ಥಳಿಯ ಶಾಸಕರಾದ #ಹರತಾಳು_ಹಾಲಪ್ಪ ಅಭಿವೃದ್ಧಿ ಮಾಡಿಸಿ ಚಂಪಕ ಸರಸ್ಸುವಿಗೆ ಸರಾಗವಾಗಿ ತಲುಪುವಂತೆ ಮಾಡಬೇಕಾಗಿ ಆನಂದಪುರಂ ವಾಸಿಗಳು ವಿನಂತಿಸಿದ್ದಾರೆ.
#ಚಂಪಕ_ಸರಸ್ಸು ಆನಂದಪುರಂನ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ ಆಗಿದೆ.
Comments
Post a Comment