Blog number 839.ಕಳೆ ಅಂತ ಬಾವಿಸಿದ್ದ ವಡೇಲಿಯಾ ಟ್ರಿಲೋಬಾಟ ಪ್ರಕೃತಿ ತಾನಾಗಿ ಬೆಳೆಸಿದ ಹೊಸ ತಳಿ, ಇದರ ಉಪಯೋಗದ ಬಗ್ಗೆ ರೈತ ಸಮುದಾಯದಲ್ಲಿ ಆರೋಗ್ಯಕರ ಚಚೆ೯ ಪ್ರಾರಂಭ ಆಗಿದೆ
#ಪ್ರಕೃತಿ_ತಾನಾಗಿ_ಬೆಳೆಸಿದ_ಹೊಸ_ತಳಿ
#ಕಳೆನಾ_ಅಥವ_ಉಪಯುಕ್ತ_ಬೆಳೆನಾ
#ಅಡಿಕೆ_ಬೇರುಹುಳಕ್ಕೆ_ಇದು_ಔಷದಿಯಾ
#ಕೋಳಿಗಳಿಗೆ_ಬಲು_ಪ್ರೀತಿ_ಇದು.
ನಮ್ಮ ವಿಕ್ಟೋರಿಯಾ ಕಾಟೇಜ್ ನ ಗಾರ್ಡನ್ ನಲ್ಲಿ ತೆಂಗಿನ ಮರಗಳಿಗೆ ಸ್ಥಳಿಯ ಜಂಬಿಟ್ಟಿಗೆ ಕಲ್ಲಿನಿಂದ ವೃತ್ತಾಕಾರದ ಕಲ್ಲಿನ ಕಟ್ಟಿ ಕಟ್ಟಿ ಅದರಲ್ಲಿ ಮರಳು ತುಂಬಿದ್ದೇನೆ (ಮಣ್ಣಿದ್ದರ ತೆಂಗಿನ ಮರದ ಬೇರು ಬಿಡುತ್ತದೆಂದು.
ಈ ಕಟ್ಟೆಯ ಸುತ್ತಾ ಈ ವಡೇಲಿಯಾ ಟ್ರಿಲೋಬಾಟ (wadelia trilobata) ಎಂಬ ಬೊಟಾನಿಕಲ್ ಹೆಸರಿನ, ಚಿಕ್ ಪೀ ಅಂತೆಲ್ಲ ಕರೆಯುವ ಇದನ್ನು ನಮ್ಮ ಆತ್ಮೀಯ ಕೆಲಸಗಾರ ಮಿತ್ರ #ಕಣ್ಣೂರಿನ_ನಾಗರಾಜ್ ನಾಟಿ ಮಾಡಿದ್ದರು.
ಇತ್ತೀಚಿಗೆ ಇದನ್ನು ನೋಡಿದ ಪ್ರಸಿದ್ಧ ಜಲ ತಜ್ಞ, ಕಾಡಿನ ವಿಜ್ಞಾನಿ ಶಿವಾನಂದ ಕಲವೆ ಇದು ಬೆಳೆಯುವ ಹರಡುವ ಕ್ಷಿಪ್ರತೆಯ ಬಗ್ಗೆ ತಿಳಿಸಿದಾಗಲೇ ಗೊತ್ತಾಗಿದ್ದು.
ಇದರ ಬೀಜ ಪ್ರಸಾರ ಮತ್ತು ವೇಗವಾಗಿ ಹರಡುವುದರಿಂದ ಇದೊಂದು ನಿವಾರಿಸಲು ಕಷ್ಟಸಾಧ್ಯವಾದ ಹೊಸ ರೀತಿಯ ಕಳೆ ಎಂದೇ ಬಾವಿಸಲಾಗಿದೆ ಇದರ ಸುಂದರ ನೋಟ ಇದನ್ನು ಕಿತ್ತು ತೆಗೆಯಲಾಗಲಿಲ್ಲ.
ಮೊನ್ನೆ FB ಯಲ್ಲಿ #ಕಿಲಾರ_ಸತೀಷ್_ಹೆಗ್ಗಡೆ ಇದರ ಬಗ್ಗೆ ಉಲ್ಲೇಖಿಸಿದಾಗ ಅನೇಕರು ಅವರವರ ಅನುಭವ, ತಜ್ಞರು ಇದರ ಬಗ್ಗೆಯ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ.
#ತೇಜ್_ಕುಮಾರ್ ಇದು ನಾಶಮಾಡಲಾಗದ ಕಳೆ ಅಂದಿದ್ದಾರೆ.
#ತರುಣ್_ಥಾಮಸ್ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ, ಇದು ಭ್ರಂಗರಾಜ ಮತ್ತು ವನಮಗಳಿ ಸಸ್ಯದ ಪಾಲಿನೇಷನ್ ಆದ ಸಸ್ಯ, ಪ್ರಕೃತಿ ತಾನಾಗಿ ಬೆಳಿಸಿದ ಹೊಸ ತಳಿ.
ಇದರ ಮೂಲ ಮೆಕ್ಸಿಕೊ ಮತ್ತು ಬ್ರಿಜಿಲ್ ನ ತೇವ ಪ್ರದೇಶದಿಂದ ಬಾರತಕ್ಕೆ ಕಾಲಿಟ್ಟಿದೆ ಅಂತೆ, ಭಾರತದ ICMR,ICAMR,OROMA MISSION ಇದರ ಬಗ್ಗೆ ರೀಸಚ್೯ ನಡೆಸುತ್ತಿದೆ ಅಂತೆ.
ಗಾಯಗಳಿಗೆ, ಕೂದಲ ಬೆಳವಣಿಗೆಗೆ, ನೋವು ನಿವಾರಣೆಗೆ, ಕೀಟ ನಾಶಕವಾಗಿ ಮತ್ತು ತೇವಾಂಶ ಸಂವರ್ದಕ ಅಂತ ತರುಣ್ ಥಾಮಸ್ ಪ್ರತಿಕ್ರಿಯೆ ನೀಡಿರುವುದು ಆಶಾದಾಯಕವಾಗಿದೆ.
ಈ ಸಂವಾದದಲ್ಲಿ ಕೆಲವರ ಅಭಿಪ್ರಾಯ ಇದು ಕೋಳಿಗಳಿಗೆ ಇಷ್ಟದ ಸಸ್ಯ, ಅವು ಇಷ್ಟಪಟ್ಟು ತಿನ್ನುವುದರಿಂದ ಇದಕ್ಕೆ ಇನ್ನೊಂದು ಹೆಸರು ಚಿಕನ್ ಪೀ ಅಂತಿದೆ ಅಂದಿದ್ದಾರೆ.
ಮಣ್ಣು ಸವಕಳಿ ಪರಿಣಾಮಕಾರಿಯಾಗಿ ತಡೆಯುತ್ತದೆ ಅಂತ ಕೆಲವರು ಬರೆದಿದ್ದಾರೆ.
ಚಿಕ್ಕ ಮಗಳೂರಿನ ಅಡಿಕೆ ಬೆಳೆಗಾರರು ಒಬ್ಬರು ಈ ಸಸ್ಯ ಅವರ ಅಡಿಕೆ ತೋಟದಲ್ಲಿನ ಬೇರು ಹುಳ ನಿಯಂತ್ರಣ ಮಾಡಿದೆ ಎ೦ದು ಅವರ ಅನುಭವ ಬರೆದಿದ್ದಾರೆ.
Comments
Post a Comment