Blog number 833.ಜಿಲ್ಲೆಯ ಏಕೈಕ ಪ್ರಬಾವಿ ಮಂತ್ರಿ ಸ್ಥಾನದ ಆರಗ ಜ್ಞಾನೇ೦ದ್ರ ಅವಧಿ ಪೂರ್ಣ ಗೃಹ ಸಚಿವರಾಗಿ ಕಾಯ೯ನಿರ್ವಹಿಸಲಿ, ಶಿವಮೊಗ್ಗ ಜಿಲ್ಲೆಯ ಜನತೆ ಅವರಿಗೆ ನೈತಿಕ ಬೆಂಬಲ ನೀಡಲಿ
#ಆರಗ_ಜ್ಞಾನೆಂದ್ರ.
#ಒಂದು_ಕಾಲದಲ್ಲಿ
#ಶಿವಮೊಗ್ಗ_ಜಿಲ್ಲೆಯ_ಹೆಚ್ಚು_ಕುಂದುಕೊರತೆ_ವಿದಾನಸೌದದಲ್ಲಿ_ಪ್ರಸ್ತಾಪಿಸಿದವರು.
#ಅವದಿ_ಪೂರ್ಣ_ಅಧಿಕಾರ_ನಡೆಸಲಿ.
#ಆಡಳಿತದಲ್ಲಿ_ಚಾಣಕ್ಷ_ನೀತಿ_ಅಳವಡಿಸಿಕೊಳ್ಳಲಿ
1995 ರಿಂದ 2000 ಇಸವಿಯಲ್ಲಿ ನಾವೆಲ್ಲ ಜಿಲ್ಲೆಯ ಜನಪರ ವಿಚಾರ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆಯಲು ಆರಗ ಜ್ಞಾನೇಂದ್ರರನ್ನು ಅವಲಂಬಿಸಿದ್ದೆವು ಅವರಿಗೆ ಜನಪರ ಕಾಳಜಿ ಇದೆ, ಬಡತನದ ಕಷ್ಟವೂ ಗೊತ್ತಿದೆ.
22 ವರ್ಷದಿಂದ ನೇರ ಸಂಪರ್ಕವಿಲ್ಲ ಆದರೆ ಜಿಲ್ಲೆಯ ಶಾಸಕರೋರ್ವರು ಸರ್ಕಾರದ ಉನ್ನತ ಸ್ಥಾನದಲ್ಲಿರುವುದು ಸಂತೋಷ ಪಡುವಂತ ವಿಚಾರವೇ ಆಗಿದೆ.
ಅವರ ಆಡಳಿತಾತ್ಮಕವಾಗಿ ದುಡುಕಿನ ಮಾತುಗಳು ಅವರ ಮೊದಲ ಮಂತ್ರಿಗಿರಿಯ ಹುಮ್ಮಸ್ಸು ಅಥವ ಅವರನ್ನು ನಿಯಂತ್ರಿಸುವ ಅವರ ಪಕ್ಷದ ಕಾರಣ ಇರಬಹುದು.
ಏನೇ ಆದರೂ ನನಗೆ ಅನ್ನಿಸುವುದು ಆರಗ ಜ್ಞಾನೇಂದ್ರ ಅವಧಿ ಪೂರ್ಣ ಗೃಹ ಸಚಿವರಾಗಿ ಇರಲಿ.
ಮುಂದಿನ ದಿನದಲ್ಲಿ ಅವರು ರಾಜ್ಯದ ಚಾಣಕ್ಯ ರಾಜನೀತಿಯಂತೆ ಗೃಹ ಖಾತೆ ನಿರ್ವಹಿಸಲಿ ಎಂದು ಹಾರೈಸುತ್ತೇನೆ
Comments
Post a Comment