#ಗಂಟಿನಕೊಪ್ಪದ_ಟ್ರಾಕ್ಟರ್_ಮಾಲಿಕ_ಗಜೇಂದ್ರ_ತಂದು_ಕೊಟ್ಟ_ದಂಟು_ಹರಿವೆ.
#ಮಂಗಳೂರು_ಶೈಲಿಯ_ದಂಟು_ಹರಿವೆ_ಸಾರು.
ದಂಟು ಹರಿವೆಯ ಪೋಸ್ಟ್ ಗಳನ್ನು ನೋಡಿದ್ದ ಗೆಳೆಯ ಗಜೇಂದ್ರ ಪೋನ್ ಮಾಡಿದ್ದರು, ತಮ್ಮ ಅಡಿಕೆ ಸಸಿ ತೋಟದ ಮಧ್ಯ ಶುಂಠಿ ಪಟ್ಟೆಯಲ್ಲಿ ಕಳೆದ ವರ್ಷ ಅಲ್ಲಲ್ಲಿ ದಂಟು ಹರಿವೆ ಹಾಕಿದ್ದರಂತೆ ಅದರ ಬಿದ್ದ ಬೀಜದಲ್ಲಿ ಕೆಲ ದಂಟು ಹರಿವೆ ಗಿಡ ಇದೆ ನಿಮ್ಮ ಮನೆಗೆ ತಂದು ಕೊಡುವುದಾಗಿ ತಿಳಿಸಿ ತಲುಪಿಸಿದ್ದರು.
ನಾನು ಊರಲ್ಲಿ ಇರಲಿಲ್ಲ, ಬುಡ ಸಮೇತ ಕಿತ್ತು ತಂದ ಇದರ ಎತ್ತರ 5 ಅಡಿಗೆ ಕಡಿಮೆ ಇರಲಿಲ್ಲ, ಬೇರಿನ ಬುಡ ಕತ್ತರಿಸಿ ನೆಡುವ ವ್ಯವಸ್ಥೆ ಮಾಡಿದೆ. ದಂಟು ಮತ್ತು ಎಲೆ ಕತ್ತರಿಸಿ ತೊಳೆದು ಬೇಳೆ ಇಲ್ಲದ ಮಂಗಳೂರು ಶೈಲಿಯ ಸಾರು ಮಾಡಿದೆ.
ಅರ್ಧ ತೆಂಗಿನ ತುರಿ, ಒಂದು ಚಮಚ ಜೀರಿಗೆ - ಕೊತ್ತುಂಬರಿ - ಉದ್ದಿನಬೇಳೆ,6 ಬೆಳ್ಳುಳ್ಳಿ ಎಸಳು - ಅದ೯ ನೀರುಳ್ಳಿ - 8 ಕೆಂಪು ಮೆಣಸು - ಇಂಗು ಸಣ್ಣ ಪ್ಲೇಮ್ ನಲ್ಲಿ ಒಂದೆರೆಡು ಚಮಚ ಎಣ್ಣೆಯಲ್ಲಿ ಬಾಣಲಿಯಲ್ಲಿ ಬಾಡಿಸಿ ಗ್ರೈಂಡ್ ಮಾಡುವುದು.
ಸೊಪ್ಪು - ದಂಟು ಅರ್ಧ ಬೆಂದಾಗ ಈ ಮಸಾಲೆ ಸೇರಿಸಿ ಕುದಿದ ನಂತರ ಸಾಸಿವೆ - ಉದ್ದಿನ ಬೇಳೆ - ಕೆಂಪು ಮೆಣಸಿನ 4 ಸಣ್ಣ ತುಂಡು, ಕರಿಬೇವಿನ ಜೊತೆ ತುಪ್ಪದಲ್ಲಿ ಕರಿದು ಒಗ್ಗರಣೆ ನೀಡಿದರೆ ಸೊಗಸಾದ ದಂಟ ಹರಿವೆ ಸಾರು ರೆಡಿ.
https://youtube.com/shorts/anH2YgEzkOE?feature=share
Comments
Post a Comment