#ಇವತ್ತು_ಹಲಸಿನ_ಕಡಿಯ_ಬಿರಿಯಾನಿ.
#ವಿಶ್ವದಾದ್ಯಂತ_ಪ್ರೋಜನ್_ಟೆಂಡರ್_ಜಾಕ್_ಪ್ರೊಟ್_ಹೊಸ_ಶಕೆ_ಪ್ರಾರಂಭ_ಆಗಿದೆ.
#ಅಮೇಜಾನ್_300_ಗ್ರಾಂ_ಹಲಸಿನ_ಕಡಿ_ಹೋಳು_180_ರೂಪಾಯಿಗೆ_ಮಾರುತ್ತಿದೆ.
#ವೀಗನ್_ನವರಿಗೆ_ಮಾಂಸದ_ಪರ್ಯಾಯ.
ನಮ್ಮ ಮನೆ ಹಿತ್ತಿಲಲ್ಲಿ ನಮ್ಮ ತಂದೆ ನೆಟ್ಟಿದ್ದ ಹಲಸಿನ ಮರ ಬುಡದಿಂದಲೇ ಎರೆಡು ಮರವಾಗಿ ಬೆಳೆದಿದೆ, ಇದರ ಎಲೆ ನಿತ್ಯ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ಗೆ ಹಲಸಿನ ಎಲೆ ಕೊಟ್ಟೆ ಕಡುಬಿಗೆ ಬಳಕೆ ಮಾಡುತ್ತೇವೆ, ನಿನ್ನೆ ವಾಕಿಂಗ್ ಮಾಡುವಾಗ ಅದರಲ್ಲಿದ್ದ ಎರೆಡು ಎಳೆ ಹಲಸಿನ ಕಡಿಗಳು ತಂದಿದ್ದೆ.
ಇವತ್ತು ಇದರಿಂದ ಮಾಡಿದ ಬಿರಿಯಾನಿ ಮಾತ್ರ ಸೂಪರ್, ಮಟನ್ ಬಿರಿಯಾನಿ ಮೀರಿಸುವಂತಾ ರುಚಿ, ಸ್ವಾದ ಮತ್ತು ಆರೋಮ ಹಲಸಿನ ಕಡಿಯಲ್ಲಿದೆ.
ಮಾಂಸಹಾರದ ಬಿರಿಯಾನಿ ಮಾಡಿದಂತೆಯೇ ಹಲಸಿನ ಕಡಿ ಕತ್ತರಿಸಿ ಮೊಸರು, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿಣ ಪುಡಿ ಮತ್ತು ಉಪ್ಪಿನೊಂದಿಗೆ ಅರ್ದ ಗಂಟೆ ಮ್ಯಾರಿನೇಟ್ ಮಾಡಿ ನಂತರ ತುಪ್ಪದಲ್ಲಿ ಚೆನ್ನಾಗಿ ರೋಸ್ಟ್ ಆಗಿ ಹುರಿದು ನಂತರ ನಿಮ್ಮದೇ ರೀತಿಯಲ್ಲಿ ಬಿರಿಯಾನಿ ಮಾಡದರೆ ಆಯಿತು ಇದು ಸುಲಭ ಕೂಡ, ಇದರಲ್ಲೇ ದಂ ಬಿರಿಯಾನಿ, ಹೈದರಾಬಾದ್ ಬಿರಿಯಾನಿ, ಲಕ್ನೋ ಬಿರಿಯಾನಿ, ಸಿಂಪಲ್ ಬಿರಿಯಾನಿ ಎಲ್ಲಾ ಮಾಡಬಹುದು.
ವಿಶ್ವದಾದ್ಯಂತ ವೀಗನ್ (ಪ್ರಾಣಿಜನ್ಯ ಯಾವುದೇ ವಸ್ತು ಹಾಲು ಕೂಡ ಬಳಸದವರು) ಮಾಂಸದ ರುಚಿಯ ಈ ಪರ್ಯಾಯ ಎಳೆ ಹಲಸು ಹೆಚ್ಚು ಬಳಸಲು ಪ್ರಾರಂಬಿಸಿದ್ದರು ಇವರಿಂದ ಪ್ರೇರೇಪಣೆ ಪಡೆದು ಸಸ್ಯಹಾರಿಗಳೂ ಇದನ್ನು ಬಳಸುತ್ತಿದ್ದಾರೆ ಈಗ ಮಾಂಸಹಾರಿಗಳೂ ಇದನ್ನು ಇಷ್ಟ ಪಡುತ್ತಿದ್ದಾರೆ.
ಆದ್ದರಿಂದಲೇ ಇದು ಪಟ್ಟಣ ವಾಸಿಗಳಿಗೆ, ಹಲಸು ಬೆಳೆಯದ ದೇಶಗಳಲ್ಲೂ ಸುಲಭವಾಗಿ ಸಿಗುವಂತೆ ಸಾವಿರಾರು ಆಹಾರ ಉತ್ಪಾದನಾ ಕಂಪನಿಗಳು ತಮ್ಮ ತಮ್ಮ ಬ್ರಾಂಡ್ ಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.
ವಿಶ್ವದಲ್ಲೇ ಅತ್ಯಂತ ಹೆಚ್ಚು ಹಲಸು ಬೆಳೆಯುವ ದೇಶ ಭಾರತ ಅದರಲ್ಲಿ ಕೇರಳ, ತಮಿಳುನಾಡು ಮತ್ತು ಒರಿಸ್ಸಾ ರಾಜ್ಯ ಅಗ್ರ ಸ್ಥಾನದಲ್ಲಿದೆ.
ಹಲಸಿನ ಹಣ್ಣು ಮಾತ್ರ ಬಳಕೆಯಲ್ಲಿದ್ದ ಸಂಪ್ರದಾಯದ ಕಾಲ ಬದಲಾಗಿದೆ, ಹಲಸಿನ ಬೀಜ ಕೂಡ ವಿವಿದ ಬಳಕೆ ಪ್ರಾರಂಭ ಆಗಿದೆ ಈಗ ಹಲಸಿನ ಕಡಿ (Tender Jack Fruit) ವಿಶ್ವ ಮಾನ್ಯತೆ ಪಡೆಯುತ್ತಿರುವುದರಿಂದ ಹಲಸು ಜನಪ್ರಿಯ ಆಗುತ್ತಿದೆ.
ಇದು ಹಲಸಿನ ಕಡಿಯ ಬಿರಿಯಾನಿ ತಯಾರಿಸಿ ರುಚಿ ನೋಡಲು ಸರಿಯಾದ ಕಾಲ, ತಡ ಮಾಡದೆ ಬಿರಿಯಾನಿ ಯಾಕೆ ಮಾಡಬಾರದು?
Comments
Post a Comment