ಮಲೆನಾಡಿನ ಆಯ್ದ ಉಪಹಾರ ದೊರೆಯುವ ಶಿವಮೊಗ್ಗ ಜಿಲ್ಲೆಯ ಏಕೈಕ ಉಪಹಾರ ಗೃಹ ಮಲ್ಲಿಕಾ ವೆಜ್, NH 206, ಯಡೇಹಳ್ಳಿ, ಆನಂದಪುಂ ಅಂಚೆ ಸಾಗರ ತಾಲ್ಲೂಕ್ , ಶಿವಮೊಗ್ಗ ಜಿಲ್ಲೆ.
#ಹೊಸ_ತಿನಿಸು_ಪೋಡಿ_ಇಡ್ಲಿ_ಪ್ರಾರಂಭ_ಆಗಿದೆ.
#ಪೋಡಿ_ಇಡ್ಲಿ_ಶುದ್ದ_ದೇಶಿ_ತುಪ್ಪದಲ್ಲಿ_ತಯಾರಿಸುತ್ತೇವೆ.
#ತಮಿಳುನಾಡಿನ_ಪ್ರಖ್ಯಾತ_ಇಡ್ಲಿ.
Mallika Veg
https://maps.app.goo.gl/NfwTiaPfy1TBkCK56
ಸುಮಾರು ಹತ್ತು ವರ್ಷದಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ನಲ್ಲಿ ರಾ.ಹೆ. 206 ರಲ್ಲಿ ಸಾಗರದಿಂದ 25 ಕಿ.ಮಿ. ಮತ್ತು ಶಿವಮೊಗ್ಗದಿಂದ 50 ಕಿ.ಮಿ. ದೂರದಲ್ಲಿ ಇರುವ ನಮ್ಮ #ಮಲ್ಲಿಕಾ_ವೆಜ್ ವಿಶಿಷ್ಟವಾದ ರೆಸ್ಟೋರಾಂಟ್ ಎಂಬ ಹೆಸರು ಪಡೆಯಲು ಕಾರಣ ಇಲ್ಲಿನ ರುಚಿ ಮತ್ತು ಶುಚಿ.
ಈವರೆಗೆ ಅಜಿನೋಮೊಟೊ (ಟೇಸ್ಟಿಂಗ್ ಪೌಡರ್)ಗೆ ನಮ್ಮಲ್ಲಿ ಪ್ರವೇಶವೇ ನೀಡಿಲ್ಲ, ಕೃತಕ ಬಣ್ಣಗಳನ್ನು ಬಳಸುವುದಿಲ್ಲ. ನಮ್ಮಲ್ಲಿ ಬೆಳಿಗ್ಗೆ ಇಡ್ಲಿ ವಡಾ- ಕೇಸರಿಬಾತ್ - ಉಪ್ಪಿಟ್ಟು - ಪಲಾವ್ - ಬಿಸಿಬೇಳೆಬಾತ್ -ಬನ್ಸ್ ನಿಂದ ಪ್ರಾರಂಭ ಆಗುವ ಉಪಹಾರದ ಜೊತೆ ನಮ್ಮ ಮಲೆನಾಡಿನ ಪ್ರಸಿದ್ದ ಹಲಸಿನ ಎಲೆ ಕೊಟ್ಟೆ ಕಡಬು ನಿತ್ಯ ಗ್ರಾಹಕರಿಗೆ ಕಳೆದ ಒಂದು ವರ್ಷದಿಂದ ನೀಡುತ್ತಿದ್ದೇವೆ.
ಇವತ್ತಿನ ಗ್ರಾಹಕರ ಪ್ರತಿಕ್ರಿಯೆ ನಮ್ಮ ಸಿಬ್ಬಂದಿ ವರ್ಗಕ್ಕೆ ಹುಮ್ಮಸ್ಸು ನೀಡಿದೆ.
ಇನ್ನು ನಿರಂತರ ಶುದ್ಧ ದೇಶಿ ತುಪ್ಪದಲ್ಲಿ ತಯಾರಿಸುವ ಪೋಡಿ ಇಡ್ಲಿ ಚಟ್ನಿ - ಸಂಬಾರ್-ಮತ್ತು- ಸಾಗುವಿನೊಂದಿಗೆ ಬಾಳೆ ಎಲೆಯ ಮೇಲೆ ತಾಜಾ ಘಮ ಮತ್ತು ಸ್ವಾದಿಷ್ಟ ರುಚಿಯೊಂದಿಗೆ #ಮಲ್ಲಿಕಾ_ವೆಜ್ ನಲ್ಲಿ ನಿತ್ಯ ಸಿಗಲಿದೆ.
Comments
Post a Comment