ಮಲೆನಾಡಿನ ಕಳ್ಳ ಬಂದೂಕುಗಳು, ಸೋ ಬೇಟೆಗಳು, ಬಾಡು ಮಾಂಸಕ್ಕಾಗಿ ಮನುಷ್ಯತ್ವ ಕಳೆದುಕೊಳ್ಳುವ ಬೇಟೆಗಾರರು, ಇವರಿಗೆ ಮದ್ದುಗುಂಡು ಸರಬರಾಜು ಮಾಡುವ ಬಾರೂದ್ ಮನೆತನಗಳು,ನಮ್ಮ ಭಾಗದ ನರಭಕ್ಷಕ ಹೊಡೆದ ಕೆನತ್ ಆಂಡರ್ಸನ್ ಅವರ ಪುಸ್ತಕ ಬೆಳಂದೂರಿನ ನರಭಕ್ಷಕ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ ತೇಜಸ್ಟಿಯವರು ಇವರೆಲ್ಲರ ನೆನಪು ಮಾಡಿದ ತೀರ್ಥಳ್ಳಿಯ ಗನ್ ಶಾಟ್ ಪ್ರಕರಣ
#ಕಳೆದ_ತಿಂಗಳು_ಹಂದಿ_ಶಿಕಾರಿಗೆ_ಹೋದವರು_ಅಕಸ್ಮಿಕ_ಗುಂಡೇಟಿನಿಂದ_ಸಾವು.
#ನಮ್ಮ_ಊರ_ಶಿಕಾರಿಗಾರರು_ಮತ್ತು_ಅವರ_ಕಥೆ.
80 ವರ್ಷದ ಹಿಂದೆ ನರಭಕ್ಷಕ ಹುಲಿಗಳಿದ್ದ ಪ್ರದೇಶ ನಮ್ಮ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಆನಂದಪುರಂ ಎಂಬುದಕ್ಕೆ ಸಾಕ್ಷಿಯಾಗಿ ಪ್ರಸಿದ್ಧ ಬೇಟೆಗಾರ ಕೆನತ್ ಆಂಡರ್ಸನ್ ಬರೆದ #ಬೆಳಂದೂರು_ನರಭಕ್ಷಕ ಪುಸ್ತಕ ಇದನ್ನು ತೇಜಸ್ವಿಯವರು ಅನುವಾದಿಸಿ ಪ್ರಕಟಿಸಿದ್ದಾರೆ.
ನಮ್ಮ ಬಾಲ್ಯದಲ್ಲಿ ಹುಲಿ ಶಿಕಾರಿ ಮಾಡಿಸಿ ಅದರ ಮಾಂಸವನ್ನು ಬೇಯಿಸಿ ತಿಂದು ಮೀಸೆ ತಿರುವಿದ ಆ ಕಾಲದ ನಮ್ಮ ಊರಿನ ಡೇರ್ ಡೆವಿಲ್ ನಲ್ಲಪ್ಪನವರ ಹೆಸರು ಚಿರಸ್ಥಾಯಿ ಆಗಿತ್ತು ಇದರಿಂದ ಆ ಕಾಲದಲ್ಲಿ ಹುಲಿ ಮಾಂಸ ಕಹಿ ಅನ್ನುವ ನಂಬಿಕೆ ಹುಸಿ ಆದ ಘಟನೆ ಇದು.
ಪಸಲು ರಕ್ಷಣೆಗೆ ಮಸಿ ಬಂದೂಕಿಗೆ ಜಮೀನು ಮಾಲಿಕತ್ವ ಹೊಂದಿದವರಿಗೆ ಮಾತ್ರ ಬಂದೂಕು ಲೈಸೆನ್ಸ್ ಇರುತ್ತಿತ್ತು, ಆಗ ಜಮೀನು ತೋಟಗಳಿದ್ದರು ಜಮೀನು ಹಕ್ಕು ಪತ್ರ ಇಲ್ಲದವರು ತಲತಲಾಂತರದಿಂದ ಗೇಣಿ ಮಾಡುತ್ತಿದ್ದ ರೈತರಿಗೆ ಮಾತ್ರ ಲೈಸೆನ್ಸ್ ಇಲ್ಲದ ಮಸಿ ಬಂದೂಕು ಪಸಲು ರಕ್ಷಣೆಗೆ ಹೊಂದಿರುತ್ತಿದ್ದರು.
ಆಗ ಆನಂದಪುರಂ ಇಡೀ ಹೋಬಳಿಗೆ ಬಂದೂಕು ಮಸಿ ತಯಾರಿಸಿ ಮಾರುವ ಏಕೈಕ ಬಾರೂದ್ ( ಬಂದೂಕು ಮಸಿ - ಗುಂಡು ಮಾರುವವರಿಗೆ ಈ ಹೆಸರು ಆ ಕಾಲದಲ್ಲಿ) ಮನೆ ಆನಂದಪುರಂ ದೊಡ್ಡಿ ಪಕ್ಕದಲ್ಲಿದ್ದ ಹೊನ್ನಾವರದಿಂದ ವಲಸೆ ಬಂದ ಹಸನಾರ್ ಸಾಬರ ಕುಟುಂಬ.
ಹಾಳಾದ ಮಸಿ ಬಂದೂಕು ದುರಸ್ತಿ ಮತ್ತು ಹೊಸ ಮಸಿ ಬಂದೂಕು ತಯಾರಿಸುವ ಹೊಸ ನಗರ ತಾಲ್ಲೂಕಿನ ಆಚಾರ್ ಒಬ್ಬರು ಅವರನ್ನು ಬಿಟ್ಟರೆ ಕೊಡೂರಿನ ಆಚಾರರು ಇದ್ದರು ಶಿಕಾರಿಗಾರರು ಈ ಇಬ್ಬರು ಆಚಾರರನ್ನು ಹೊಗಳುವ ಭರದಲ್ಲಿ ಎರೆಡು ಗುಂಪಾಗುತ್ತಿದ್ದರು.
ಆಗ ಶಿಕಾರಿಗಾರರಲ್ಲಿ A ಗ್ರೇಡ್ ಶಿಕಾರಿಗಾರರೆಂದರೆ ಅವರ ಸೋಬೇಟೆಯಲ್ಲಿ ಶಿಕಾರಿ ಮಾಂಸ ನೂರು ಪಾಲು ಹಾಕಬೇಕಾದಷ್ಟು ಸೋ ಮಾಡುವ ಜನ, ಶಿಕಾರಿ ನಾಯಿ ಮತ್ತು ಬಂದೂಕುಗಳು ಇರುತ್ತಿದ್ದವು, ಈ ಗುಂಪಿನ ಮುಖ್ಯಸ್ಥ ಸ್ಥಳಿಯ ಅರಣ್ಯ ರಕ್ಷಕರು ಮತ್ತು ಪೋಲಿಸರನ್ನು ಸಂಬಾಳಿಸುವ ಗಟ್ಟಿತನ ಮತ್ತು ಬುದ್ದಿವಂತಿಕೆ ಇದ್ದವ, ಶಿಕಾರಿಗೆ ಮೊದಲೇ ಅವರಿಗೆ ತನ್ನ ಶಿಕಾರಿ ಕ್ಷೇತ್ರ ತಿಳಿಸುತ್ತಿದ್ದರಿಂದ ಅವರ ಇಲಾಖೆಯ ಮೇಲಾದಿಕಾರಿಗಳು ಅಲ್ಲಿಗೆ ಬರದಂತ ವ್ಯವಸ್ಥೆ ಆಗುತ್ತಿತ್ತು ಶಿಕಾರಿ ನಂತರ ಅವರಿಗೆ ಶಿಕಾರಿ ಮಾಂಸ ತಪ್ಪದೇ ತಲುಪಿಸುತ್ತಿದ್ದರು, ಶಿಕಾರಿ ಮಾಂಸ ತಿನ್ನದ ಮನೆಗೆ ನಾಟಿ ಹುಂಜ ಕಳಿಸಿ ಸಂತೃಪ್ತಿ ಮಾಡುವ ಶಿಕಾರಿಗಾರ ತಂಡದ ಮುಖ್ಯಸ್ಥ ಈ ಶಿಕಾರಿಯಲ್ಲಿ ಲೈಸೆನ್ಸ್ ಹೊಂದಿದ ಒ0ದರೆಡು ಬಂದೂಕು ಇರುವಂತೆ ( ಬಾಕಿದೆಲ್ಲ ಲೈಸೆನ್ಸ್ ಇಲ್ಲದ ಹಳ್ಳಿಗರ ಬಾಯಲ್ಲಿ ಕಳ್ಳ ಬಂದೂಕು ) ನೋಡಿಕೊಳ್ಳುತ್ತಿದ್ದರು ಮತ್ತು ಹಾಗಂತ ಪೋಲಿಸರಿಗೆ ಹೇಳುತ್ತಿದ್ದರು ಈ ಮೂಲಕ ತಮ್ಮ ಶಿಕಾರಿ ಕಾನೂನು ಬದ್ದ ಎಂಬಂತೆ ತೋರಿಸಿಕೊಳ್ಳುತ್ತಿದ್ದರು.
ಇನ್ನು B ವರ್ಗದವರು ಇಂತಹ ಸಂಪರ್ಕ ಇಲ್ಲದ, ಮಾಂಸ ಮಾರಾಟ ಮಾಡುವ ಹೇಗೆಂದರೆ ಹಾಗೆ ಶಿಸ್ತಿಲ್ಲದ ಶಿಕಾರಿಗಾರರು, C ವರ್ಗದವರು ಬಲೆ, ಉರುಳು ಅಥವ ಬಾಂಬ್ ಹಾಕಿ ಶಿಕಾರಿ ಮಾಡುವವರು.
ಶಿಕಾರಿಗಾರರಲ್ಲಿ ಬಾಡು ಮಾಂಸಕ್ಕಾಗಿ ಒಗ್ಗಟ್ಟು ಇರುತ್ತಿತ್ತು, ನಮ್ಮ ಊರಿನ ಸಮೀಪದ ಸರಗುಂದದಲ್ಲಿ ದಂಡಿಗೆ ಸರದ ಸಣ್ಣಣ್ಣ ಎಂಬ ಸಂಬಾವಿತ ಕೃಷಿಕರು ಸೊ ಬೇಟೆಯಲ್ಲಿ ಗುಂಡಿನಿಂದ ಗಾಯಗೊಂಡ ಹಂದಿ ಇವರನ್ನು ಸೀಳಿಸಿ ಸಾಯಿಸಿದ್ದ ದುಃಖಕರ ಘಟನೆ ಆಗಿತ್ತು.
1995ರಲ್ಲಿ ಮಾರ್ಕ್ - 4 ಡಿಸೇಲ್ ಅಂಬಾಸಡರ್ ಕಾರು ಸಾಗರದಲ್ಲಿ ಟ್ಯಾಕ್ಸಿ ಆಗಿ ವ್ಯವಹಾರ ಮಾಡಲು ಬ್ಯಾಂಕಿನಲ್ಲಿ ಸಾಲ ಮಾಡಿ ಬೆಂಗಳೂರಿನ ಸೇಂಟ್ ಮಾರ್ಕ್ ರಸ್ತೆಯ ಹಿಂದೂಸ್ತಾನ ಶೋ ರೂಂ ಗೆ DD ಕೊಟ್ಟು 8 ತಿಂಗಳು ಕಾಯುವಿಕೆ ನಂತರ ದೂರದ ಕಲ್ಕತ್ತಾದಿಂದ ರಸ್ತೆಯಲ್ಲಿ ಓಡಿಸಿ ತಂದು ಪ್ರನಃ ಸರ್ವಿಸ್ ಮಾಡಿ ಬೆಂಗಳೂರಲ್ಲಿ ಡಿಲವರಿ ಕೊಟ್ಟಿದ್ದ ಕಾರು ಮನೆಗೆ ಬಂದಿತ್ತು ಇದು ಸುತ್ತಾ 16 ಹಳ್ಳಿಗೆ ಸುದ್ದಿ ಆಗಿತ್ತು, ಇನ್ನೂ ರಿಜಿಸ್ಟ್ರೇಷನ್ ಆಗಿರಲಿಲ್ಲ.
ಒಂದು ಬೇಸಿಗೆಯ ಮಧ್ಯಾಹ್ನ ಸೈಕಲ್ ನಲ್ಲಿ ಬಂದ ಇಬ್ಬರು ಕಾರು ಬಾಡಿಗೆಗೆ ಬೇಕು ಅಂದರು, ಇಲ್ಲ ಇನ್ನೂ ರಿಜಿಸ್ಟ್ರೇಷನ್ ಆಗಿಲ್ಲ, ನನಗೆ ಡ್ರೈವಿಂಗ್ ಬರೊಲ್ಲ ಮತ್ತು ಡ್ರೈವರ್ ಯಾರೂ ಇಲ್ಲ ಅಂದೆ ಅವರು ವಾಪಾಸ್ಸು ಹೋದರು, ಪುನಃ ಇದೇ ರೀತಿ ಬೇರೆಯವರು ಬರುವುದು ಕಾರು ಕೇಳುವುದು ಏಕೆಂದರೆ ಸತ್ಯ ಹೇಳದೇ ವಾಪಾಸು ಹೋಗುವ ಜನ ನಮ್ಮ ಊರಿನ ಸಮೀಪದ ಇರುವಕ್ಕಿ ಎಂಬ ಗ್ರಾಮದ ಕುಂಬಾರರು ಅಂತ ಗೊತ್ತಾಗಿ ಒತ್ತಾಯ ಮಾಡಿದ ಮೇಲೆ ಗುಟ್ಟಾಗಿ ಅವರು ಉಸಿರಿದ್ದು ಶಿಕಾರಿಗಾರರ ಮುಖಂಡ ದೊಡ್ಡ ಜಮೀನುದಾರ ಆ ಕಾಲದ SSLC ಪಾಸು ಮಾಡಿದ ಕುಂಬಾರ ಬಸಣ್ಣನಿಗೆ ಶಿಕಾರಿಯಲ್ಲಿ ಗುಂಡು ತಾಗಿದೆ ಅಂತ.
ನನ್ನ ತಂದೆಗೆ ಆಪ್ತರೂ ಆಗಿದ್ದರಿಂದ ಅವರು ಆಗ ಚಕ್ರಾ ಡ್ಯಾಂ ನಲ್ಲಿ ಕೆಪಿಸಿ ಲಾರಿ ಡ್ರೈವರ್ ಆಗಿದ್ದ ಲೋಬಣ್ಣ ರಜೆಗೆ ಮನೆಗೆ ಬಂದಿದ್ದಾರೆ ಅವರಿಗೆ ನಾನು ಹೇಳಿದಿನಿ ಅಂತ ಹೇಳು ಮತ್ತು ಯಾರಿಗೂ ಗೊತ್ತಾಗದಂತೆ ಅವರಿಗೆ ಬಸಣ್ಣನನ್ನ ಆಸ್ಪತ್ರೆಗೆ ಒಯ್ಯಬೇಕು ಅಂತ ಹೇಳಿ ಕರೆತಾ ಅಂದರು ನಾನು ಓಡಿ ಅವರ ಮನೆಗೆ ಹೋಗಿ ಮಧ್ಯಾಹ್ನ ಮಲುಗಿದ್ದ ಲೋಬಣ್ಣರನ್ನು ಎಬ್ಬಿಸಿ ಸುದ್ದಿ ಕೊಟ್ಟಾಗ ಬನಿಯನ್ ಧರಿಸಿದ್ದ ಲೋಬಣ್ಣ ಕೂಡ ಓಡಿ ಬಂದು ನನ್ನ ಹೊಸ ಕಾರು ಚಾಲು ಮಾಡಿ ನಾವಿಬ್ಬರು ಅವರ ಊರಿನಿಂದ ಬಂದವರನ್ನು ಕೂರಿಸಿಕೊಂಡು ಇರುವಕ್ಕಿಯ ಬಸಣ್ಣರ ಮನೆಗೆ ಹೋದಾಗ ಅಲ್ಲಿ ಇಡೀ ಊರೇ ಶೋಕದಲ್ಲಿ ಸೇರಿತ್ತು, ಕಾರಿನ ಶಬ್ದ ಕೇಳಿ ಕೆಲವರು ಕಾಡು ಬಿದ್ದಿದ್ದರಂತೆ (ಓಡಿ ಹೋಗಿದ್ದು) ಎದೆ, ಹೊಟ್ಟೆ ಮತ್ತು ಕುತ್ತಿಗೆಗೆ ಗುಂಡು ಹೊಕ್ಕಿದ್ದ ಬಸಣ್ಣ ಮತ್ತು ಜೊತೆಗೆ ಅವರ ಪತ್ನಿಯನ್ನು ಕರೆದುಕೊಂಡು ಸಾಗರದ ಸರ್ಕಾರಿ ಆಸ್ಪತ್ರೆಯ ಎದುರಿನ ಯಳಮಳಲಿ ನರ್ಸಿಂಗ್ ಹೊಂಗೆ ಅಡ್ಮಿಟ್ ಮಾಡಿದೆವು ತಕ್ಷಣ ವೈದ್ಯರು ಪರೀಕ್ಷಿಸಿ ಮೂರು ಗುಂಡು ತೆಗೆದರು ಅದೃಷ್ಟದಿಂದ ಶ್ವಾಸ ಕೋಶ ಮತ್ತು ಲಿವರ್ ಗೆ ಗುಂಡು ತಾಗಿಲ್ಲ ಅಂದಾಗ ಎಲ್ಲರೂ ನಿರಾಳರಾದರು.
ಕೆಲ ವರ್ಷದ ನಂತರ ಇದೇ ತಂಡ ಒಂದೆರೆಡು ಹಂದಿ ಹೊಡೆದು ಜೋಷಿನಲ್ಲಿದ್ದಾಗ ಮೂರನೇ ಹಂದಿ ಗುಂಡೇಟು ತಿಂದು ತಪ್ಪಿಸಿಕೊಂಡಾಗ ಸೋಬೇಟೆಯಲ್ಲಿದ್ದ ಯುವಕನಿಗೆ ಹಾವು ಕಚ್ಚಿತ್ತು ಬಾಡಿನ ಆಸೆಯ ತಂಡದವರು ಅವನ ಇಲಾಜಿನ ಬಗ್ಗೆ ನಿರ್ಲಕ್ಷ್ಯ ವಹಿಸಿ ಹಂದಿ ಹುಡುಕಾಟಕ್ಕೆ ಪ್ರಾಶಸ್ತ್ಯ ನೀಡಿದ್ದರು, ಹಾವು ಕಚ್ಚಿಸಿ ಕೊಂಡಾತ ಜೊತೆಗಾರನೊಬ್ಬನನ್ನ ಕರೆದು ಕೊಂಡು ಬಂದಾಗ ನಾನು ಅವನ ಇಷ್ಟದಂತೆ ವ್ಯಾನಿನಲ್ಲಿ ಗೆಣಸಿನಕುಣಿಯ ನಾಗಭೂಷಣ ಹೆಗ್ಗಡೆ ಹತ್ತಿರ ಕಳಿಸಿದ್ದೆ (ಈ ಬಾಗದಲ್ಲಿ ಅನೇಕರು ಹಾವಿನ ಕಡಿತಕ್ಕೆ ಚಿಕಿತ್ಸೆಗೆ ಇವರ ಹತ್ತಿರ ಹೋಗುತ್ತಾರೆ) ಇವತ್ತಿಗೂ ನನಗ ಆಶ್ಚಯ೯ ಇದು 3 ಇಂಚಿಗೂ ಹೆಚ್ಚಿನ ಅಂತರದ ಹೆಚ್ಚು ಆಳವಾದ ಹಾವಿನ ಹಲ್ಲಿನ ಕಡಿತ ನಾನು ನೋಡಿದ್ದು ಮೊದಲು ಮತ್ತು ಹಾವು ಕಡಿತಕ್ಕೆ ಒಳಗಾದವನೂ ಹಾವು ನೋಡಿರಲಿಲ್ಲ ಆದರೆ ಚಿಕಿತ್ಸೆಗೆ ಹೋದಾದ ಜೀವಂತ ಮರಳಲಿಲ್ಲ ನನಗೆ ಅಸಹ್ಯ ಅನ್ನಿಸಿದ್ದು ಈ ಶಿಕಾರಿಗಾರ ಬಾಡು ತಿನ್ನುವ ದುರಾಸೆ.
ಜೊತೆಗಾರ ಸತ್ತರೂ ಕೇರ್ ಮಾಡದೆ ಹಂದಿ ಹಸಿಗೆ ಮಾಡಿ, ನಲ್ಲೆ ಮಾಡಿ (ಮಾ೦ಸ ಸ್ಥಳದಲ್ಲಿ ಬೇಸಿ ತಿಂದು) ಮಾಂಸ ಹಂಚಿಕೊಂಡು ಮಾಂಸ ತಿಂದರಂತೆ.
ಇನ್ನೋಂದು ಘಟನೆ ಇದೇ ಕುಂಬಾರ ನಾಗಪ್ಪ ಮತ್ತು ನನ್ನ ಕ್ಲಾಸ್ ಮೇಟ್ ಕುಂಬಾರ ತಿಮ್ಮಪ್ಪನ ಬೇಲಿ ಗಡಿ ಜಗಳ ವಿಕೋಪಕ್ಕೆ ಹೋಗಿ ಇಬ್ಬರೂ ಕಳ್ಳ ಬಂದೂಕನ್ನು ಜಳಪಿಸಿದ್ದಾರೆ ಅಂತಿಮವಾಗಿ ನಾಗಪ್ಪ ತಿಮ್ಮನ ತಲೆ ಮೇಲಿಂದ ಹೆದರಿಸಲು ಗುಂಡು ಹಾರಿಸಿದ್ದಾನೆ ಅದರ ಚರೆ ಒಂದು ತಿಮ್ಮನ ಮೂಗು ಸವರಿ ಹೋಗಿತ್ತು.
ಇಬ್ಬರೂ ಬಂದಿದ್ದರು ನಾವೆಲ್ಲ ಸೇರಿ ಒಂದು ಪಂಚಾಯಿತಿ ಮಾಡಿದೆವು ಏನೆಂದರೆ ತಪ್ಪು ಒಪ್ಪಿಕೊಂಡ (ಪೋಲಿಸರ ಭಯದಿಂದ) ನಾಗಪ್ಪ ಪಂಚಾಯತಿ ದಾರರ ತೀರ್ಮಾನಕ್ಕೆ ಬದ್ದ ಎಂದಾಗ ನನ್ನ ಕ್ಲಾಸ್ ಮೇಟ್ ತಿಮ್ಮನ ಕಾಳಜಿಯಿಂದ ನಾಗಪ್ಪನಿಗೆ 15 ಸಾವಿರ ದಂಡ, ಗುಂಡು ಹೊಡೆದ ಕಳ್ಳ ಬಂದೂಕು ತಿಮ್ಮನಿಗೆ ಸಮರ್ಪಣೆ ಮತ್ತು ತಿಮ್ಮನು ಒತ್ತುವರಿ ಮಾಡಿದ ನಾಗನ ಜಾಗ ತಿಮ್ಮನಿಗೆ ಎಂದು ಸರ್ವಾನುಮತದ ತೀರ್ಮಾನ ಆಗಿತ್ತು.
ಆಗಷ್ಟೆ ರಾಮಕೃಷ್ಣ ಹೆಗ್ಡೆಯವರ ಆಡಳಿತ ವಿಕೇ೦ದ್ರಿಕರಣದಿಂದ ಹಳ್ಳಿಯಲ್ಲೆಲ್ಲ ಯಾವತ್ತೂ ಇರದ ರಾಜಕೀಯದ ಮೇಲಾಟ ಪ್ರಾರಂಭವಾಗಿದ್ದರಿಂದ ಅವರ ಜಾತಿಯ ಯುವ ಮುಂದಾಳು ರಾಜಿ ಪಂಚಾಯಿತಿ ಮುರಿದು ತಿಮ್ಮನಿಗೆ ಆಸ್ಪತ್ರೆ ಸೇರಿಸಿ ಪೋಲಿಸ್ ಕಂಪ್ಲೆಂಟು ನೀಡಿ ಕೇಸ್ ಮಾಡಿದ್ದ.
ಎಷ್ಟೋ ದಿನದ ನಂತರ ಬಂದ ತಿಮ್ಮ ನೀವೆಲ್ಲ ಮಾಡಿದ ಪಂಚಾಯತಿ ಚೆನ್ನಾಗಿತ್ತು ಆದರೆ ಈಗ ನೋಡಿ ನಾಗಪ್ಪ ಆರಾಮಾಗಿ ನಿರೀಕ್ಷಣ ಜಾಮೀನು ತಂದು ಅರಾಮಿದ್ದಾನೆ, ನನಗೆ ಹಣನೂ ಸಿಗಲಿಲ್ಲ, ಅವನ ಬಂದೂಕು ಸಿಗಲಿಲ್ಲ ನಾಗ ಪೋಲಿಸರಿಗೆ ಸರಿ ಮಾಡಿ ನನ್ನ ಜಮೀನು (ಖಾತೆ ಅಲ್ಲದ ಬಗೆ ರ್ ಹುಕುಂ ) ಎರೆಡು ಎಕರೆ ಒಳ ಮಾಡಿಕೊಂಡಿದ್ದಾನೆ ಅಂತಿದ್ದ.
ಮೊನ್ನೆ ನಾಗಪ್ಪ ಮಗನ ಮದುವೆಗೆ ಆಹ್ವಾನ ನೀಡಲು ಬಂದಾಗ ನೆನಪಾಯಿತು ಮತ್ತು ತೀರ್ಥಹಳ್ಳಿಯ ಆರಗ ಸಮೀಪದ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಂದಿ ಶಿಕಾರಿಗೆ ಹೋಗಿ ಗುಂಡಿಗೆ ಬಲಿಯಾದ ವರದಿ #ಲಕ್ಷೀಷ್_ವಾರಪತ್ರಿಕೆಯಲಿ ಓದಿದಾಗ ನಮ್ಮ ಊರಿನ ಈ ಶಿಕಾರಿಗಾರರ ಬಗ್ಗೆ ಬರೆಯಬೇಕೆನ್ನಿಸಿತು.
ಈಗೆಲ್ಲ ಹಂದಿ ಹೊಡೆದರು ಜೈಲು ಎಂಬ ಭಯದಿಂದ ಸೋಬೇಟೆಗಳು ಹೆಚ್ಚು ಕಡಿಮೆ ನಿಂತೇ ಹೋಗಿದೆ.
Comments
Post a Comment