ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮಾದಾಪುರದಲ್ಲಿ ಪ್ರತಿ ಮನೆಯಲ್ಲಿ ಕಲಾವಿದರಿದ್ದಾರೆ, 1995-96 ರಲ್ಲಿ ಶ್ರೀ ಶನಿ ಪರಮೇಶ್ವರ ಯುವಕ ಸಂಘ ಉದ್ಘಾಟನೆ ಆಗಿ 26 ವರ್ಷದಿಂದ ಕ್ರಿಯಾಶೀಲವಾಗಿದೆ
#ಈಗಲೂ_ಕ್ರಿಯಾಶೀಲ_ಆಗಿರುವುದು_ಶ್ಲಾಘನೀಯ
#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಮಾದಾಪುರದ_ಪ್ರತಿ_ಮನೆಯಲ್ಲೂ_ಕಲಾವಿದರಿದ್ದಾರೆ.
ಪ್ರಶಸ್ತಿ ವಿಜೇತ ಶಿಕ್ಷಕ, ಖ್ಯಾತ ಜನಪದ ಕಲಾವಿದ, ಕವಿ, ಡೊಳ್ಳು ಕಲಾವಿದ, ರಂಗಭೂಮಿ ಕಲಾವಿದ, ಹಾಡುಗಾರ, ತಬಲ ಹಾರ್ಮೋನಿಯಂ ನುಡಿಸುವ ಸಕಲ ಕಲಾ ವಲ್ಲಭರೇ ಆದ ಕಿರಿಯ ಮಿತ್ರ ರೇವಣ್ಣ ಮಾಸ್ತರ್ ಅವರ ಊರಾದ ಸಣ್ಣ ಹಳ್ಳಿಯಲ್ಲಿ ಮಾದಾಪುರದಲ್ಲಿ ಇದೇ ತಿಂಗಳ 11ನೇ ತಾರೀಖು ಸೋಮವಾರ ತಾಲ್ಲೂಕು ಕೇಂದ್ರದಲ್ಲಿ ನಡೆಸುವಂತ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರ ಆಹ್ವಾನ ಪತ್ರಿಕೆ ನೀಡಿದ್ದಾರೆ.
ಸಾದಕರಿಗೆ ಸನ್ಮಾನ, ಕವನ ಸಂಕಲನ ಬಿಡುಗಡೆ, ಸಂಗ್ಯಾ ಬಾಳ್ಯ ಎಂಬ ನಾಟಕ ಮತ್ತು ಬರಲಿರುವ ವಿಶೇಷ ಅತಿಥಿಗಳಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೆಂಚನಾಲ ಗ್ರಾಮ ಪಂಚಾಯತನ ಮಾದಾಪುರ ಕಂಗೊಳಿಸಲಿದೆ.
1995-96 ರಲ್ಲಿ ಈ ಊರಿನ ಶ್ರೀ ಶನಿ ಪರಮೇಶ್ವರ ಯುವಕ ಸಂಘ ಪಕ್ಕದ ಸಾಗರ ತಾಲೂಕಿನ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನನ್ನಿಂದ ಉದ್ಘಾಟನೆ ಮಾಡಿಸಿದ್ದರು.
ಸುಮಾರು 26 ವರ್ಷ ಕಾಲ ದೇಶ ವಿದೇಶಗಳಲ್ಲಿ ಈ ಸಂಘ ಅನೇಕ ಕಾಯಕ್ರಮ ನಡೆಸಿದೆ.
ಈ ಹಳ್ಳಿಯ ಪ್ರತಿ ಮನೆಯಲ್ಲೂ ಕಲಾವಿದರು ಇದ್ದಾರೆ, ತಬಲ- ಹಾರ್ಮೋನಿಯಂ, ಡೊಳ್ಳು ಕುಣಿತ, ಸಂಗ್ಯಾಬಾಳ್ಯಾ ದಂತ ನಾಟಕ, ಜನಪದ ಗೀತಾ ಗಾಯನ ಹೀಗೆ ಇಡೀ ಹಳ್ಳಿ ಕಲಾರಾದನೆಯಲ್ಲಿರುವುದು ಸೋಜಿಗ.
ನಾಡಿದ್ದು ಸೋಮವಾರದ ಅದ್ದೂರಿ ಕಾರ್ಯಕ್ರಮ ಯಶಸ್ವೀಯಾಗಲಿ ಎಂದು ಹಾರೈಸುತ್ತೇನೆ.
Comments
Post a Comment