Blog number 1106. ಭಾಗ - 2 , ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಪ್ರಚಾರಕ್ಕೆ ಬಂದಿದ್ದ ಕೇಂದ್ರ ಸಚಿವರಾದ ಶ್ರೀನಿವಾಸ್ ಪ್ರಸಾದರ ಪ್ರಶ್ನೆಗಳು ಮತ್ತು ನನ್ನ ಉತ್ತರ.
#ಭಾಗ_2 #ಜೋಗ್_ಕಾಗ೯ಲ್_ಪಟ್ಟಣ_ಪಂಚಾಯಿತಿ_ಚುನಾವಣೆ. #ಪ್ರಚಾರದಲ್ಲಿ_ಭಾಗವಹಿಸಿದ_ಕೇಂದ್ರ_ಸರ್ಕಾರದ_ಮಂತ್ರಿ_ಶ್ರೀನಿವಾಸಪ್ರಸಾದ್. #ಕಾರ್ಮಿಕ_ಮುಖಂಡ_ಜಾರ್ಜ್_ಸಹೋದರ_ಮೈಕಲ್_ಪರ್ನಾಂಡೀಸರು_ಪ್ರಚಾರಕ್ಕೆ_ಬಂದಿದ್ದರು. #ಸಂಯುಕ್ತ_ಜನತಾದಳದ_ಪ್ರಚಾರದಲ್ಲಿ__ಜೆ_ಹೆಚ್_ಪಟೇಲರ_ಮಗ_ಮಹೀಮ_ಪಟೇಲರು. #ಶ್ರೀನಿವಾಸ್_ಪ್ರಸಾದರ_ಆ_ಒಂದು_ಪ್ರಶ್ನೆಗೆ_ನನ್ನ_ಉತ್ತರದಿಂದ_ಪ್ರಶಂಸೆ #ಶೂದ್ರ_ದಲಿತರಿಗೆ_ದೇವರ_ಆರಾದಿಸುವ_ಪೂಜಾ_ವಿಧಾನದ_ತರಬೇತಿ_ಮಠ_ಮಂದಿರ_ಇವತ್ತೂ_ನೀಡಲಾಗಲಿಲ್ಲ. ಜೋಗ್ ಪಾಲ್ಸ್ ನ ಎನಕೋಡ ಎರಮಯ್ಯ ಮನೆಯಲ್ಲಿ ಕೇಂದ್ರ ಸಚಿವರ ರಾತ್ರಿ ಊಟ ನಡೆಯದಂತೆ ತಡೆಯಲು ಪ್ರಯತ್ನಿಸಿದ ಅಧಿಕಾರಿಗಳ ಪ್ರಯತ್ನ ವಿಫಲವಾಗಿದ್ದು ನಮ್ಮ ಕಾಯ೯ಕರ್ತರಿಗೆ ಚುನಾವಣೆಯ ಕಣದಲ್ಲಿ ಹುರುಪು ತಂದಿತು. ದಲಿತರಾಗಿದ್ದ ಎನಕೋಡರ ಪೋಷಕರು ಅಸ್ಪೃಶ್ಯತೆಯ ಅವಮಾನದಿಂದ ಮಾತೃಧರ್ಮ ತೊರೆದು ಕ್ರಿಸ್ತ ಧರ್ಮ ಸೇರಿದವರಾದ ಕುಟುಂಬದವರು ಇಂತಹ ಅನೇಕ ಕುಟುಂಬ ಜೋಗ್ ಕಾಗ೯ಲ್ ಪ್ರಾಜೆಕ್ಟ್ ಪ್ರದೇಶದಲ್ಲಿ ನೆಲೆಸಿದ್ದಾರೆ. ಶ್ರೀನಿವಾಸ ಪ್ರಸಾದರ ಬೆಳಗಿನ ಓದಿಗಾಗಿ ಎಲ್ಲಾ ಪತ್ರಿಕೆಗಳು ಬೇಕ೦ತ ಹೇಳಿದ್ದರಿಂದ ಎಲ್ಲಾ ಪತ್ರಿಕೆ ಒಟ್ಟು ಮಾಡಿ ಜೋಗ ಜಲಪಾತದ ಎದುರಿನ ಸರ್ಕಾರಿ ಪ್ರವಾಸಿ ಮಂದಿರಕ್ಕೆ ಹೋದರೆ ಮಂತ್ರಿಗಳು ಅವರ ಮದುಮೇಹದ ಕಾಯಿಲೆಯ ತೊಂದರೆಗಳಿಂದ 11 ಕ್ಕೆ ಎದ್ದಿದ್ದರು. ಅವತ್ತು ಅವ...