#ಇಡೀ_ಶಿವಮೊಗ್ಗ_ಜಿಲ್ಲೆ_ಬೆಚ್ಚಿ_ಬಿದ್ದ_ಹುಣಸಗೋಡು_ಬ್ಲಾಸ್ಟ್. #ಮೊನ್ನೆಗೆ_ಮೂರು_ವಷ೯_ಆಯಿತು. #ಸತ್ತವರು_ಯಾರು_ಪರಿಹಾರ_ಸಿಕ್ಕಿತಾ? #ಈ_ದುರಂತದಿಂದ_ಕಲಿತಿದ್ದೇನು? #ಶಿವಮೊಗ್ಗ_ಹುಣಸೋಡು_ಬ್ಲಾಸ್ಟ್_ವಾಸ್ತವಗಳು #ಪ್ರದಾನಿ_ಮೋದಿ_ರಾಹುಲ್_ಗಾಂದಿ_ಸಂತಾಪ_ಮಾಜಿ_ಮುಖ್ಯಮಂತ್ರಿ_ಸಿದ್ದರಾಮಯ್ಯ_ಖಂಡನೆ_ಮುಖ್ಯಮಂತ್ರಿ_ಯಡೂರಪ್ಪ_ಸ್ಥಳಕ್ಕೆ. #ಅವತ್ತಿನ_ಘಟನೆ_ಬಗ್ಗೆ_ಇವತ್ತಿಗೆ_ಮೂರು_ವರ್ಷದ_ಹಿಂದಿನ_ನನ್ನ_ಲೇಖನ_ಇನ್ನೊಮ್ಮ ಹೀಗೆ ಗುರುವಾರ ರಾತ್ರಿ 10 ರಿಂದ 10- 20 PM (ದಿನಾಂಕ 21- ಜನವರಿ 2021) ಕೇವಲ 20 ನಿಮಿಷ ಅವಧಿಯಲ್ಲಿ ಆಗಿರುವ ಘೋರ ದುರಂತದ ಸ್ಪೋಟದಿಂದ ಈ ಕ್ಷಣದವರೆಗೂ ಈ ಘಟನೆ ಬಗ್ಗೆ ಅನೇಕ ವರದಿ ವಿಶ್ಲೇಷಣೆಗಳು ಬರುತ್ತಲೇ ಇದೆ. ಆಗಿರುವ ಅನಾಹುತ, ನಷ್ಟ, ಜೀವಹಾನಿಗೆ ಪರಿಹಾರ ಏನು? ಕಾರಣರಾರು? ಶಿಕ್ಷೆ ಏನು? ಎನ್ನುವ ಚಚೆ೯ ಬದಿಗಿಟ್ಟು ಇಡೀ ಪ್ರಕರಣ ನೋಡುವ ಅನಿವಾಯ೯ತೆ ಇದೆ. ಗ್ರೌಂಡ್ ರಿಯಾಲಿಟಿ ವರದಿ,ಘಟನೆ ಸಮೀಪದ ವಾಸಿ ಆಗಿರುವ ಬರಹಗಾರರಾದ ರಾಜೇಂದ್ರ ಬುರುಡಿಗಟ್ಟೆ ಅವರ ಲೇಖನದಿಂದ ಪೇಸ್ ಬುಕ್ ಓದುಗರಿಗೆ ಗೊತ್ತಾಯಿತು. ಘಟನೆ ಸ್ಥಳದಿಂದ 3 ಕೀ ಮಿ ದೂರದ ಅಬ್ಬಲಗೆರೆ SR ಪೆಟ್ರೋಲ್ ಪಂಪ್ ಮಾಲಿಕರಾದ ನಿವೃತ್ತ ಕೃಷಿ ಬ್ಯಾಂಕ್ ನ ಜಿಲ್ಲಾ ವ್ಯವಸ್ಥಾಪಕರಾದ ಹಂದಿಗೋಳ್ ಸಾಹೇಬರು " ಅವತ್ತು ರಾತ್ರಿ ಸಣ್ಣ ಬ್ಲಾಸ್ಟ್ ಶಬ್ದ ನ...