#ಇಡೀ_ಶಿವಮೊಗ್ಗ_ಜಿಲ್ಲೆ_ಬೆಚ್ಚಿ_ಬಿದ್ದ_ಹುಣಸಗೋಡು_ಬ್ಲಾಸ್ಟ್.
#ಮೊನ್ನೆಗೆ_ಮೂರು_ವಷ೯_ಆಯಿತು.
#ಸತ್ತವರು_ಯಾರು_ಪರಿಹಾರ_ಸಿಕ್ಕಿತಾ?
#ಈ_ದುರಂತದಿಂದ_ಕಲಿತಿದ್ದೇನು?
#ಶಿವಮೊಗ್ಗ_ಹುಣಸೋಡು_ಬ್ಲಾಸ್ಟ್_ವಾಸ್ತವಗಳು
#ಪ್ರದಾನಿ_ಮೋದಿ_ರಾಹುಲ್_ಗಾಂದಿ_ಸಂತಾಪ_ಮಾಜಿ_ಮುಖ್ಯಮಂತ್ರಿ_ಸಿದ್ದರಾಮಯ್ಯ_ಖಂಡನೆ_ಮುಖ್ಯಮಂತ್ರಿ_ಯಡೂರಪ್ಪ_ಸ್ಥಳಕ್ಕೆ.
#ಅವತ್ತಿನ_ಘಟನೆ_ಬಗ್ಗೆ_ಇವತ್ತಿಗೆ_ಮೂರು_ವರ್ಷದ_ಹಿಂದಿನ_ನನ್ನ_ಲೇಖನ_ಇನ್ನೊಮ್ಮ
ಹೀಗೆ ಗುರುವಾರ ರಾತ್ರಿ 10 ರಿಂದ 10- 20 PM (ದಿನಾಂಕ 21- ಜನವರಿ 2021) ಕೇವಲ 20 ನಿಮಿಷ ಅವಧಿಯಲ್ಲಿ ಆಗಿರುವ ಘೋರ ದುರಂತದ ಸ್ಪೋಟದಿಂದ ಈ ಕ್ಷಣದವರೆಗೂ ಈ ಘಟನೆ ಬಗ್ಗೆ ಅನೇಕ ವರದಿ ವಿಶ್ಲೇಷಣೆಗಳು ಬರುತ್ತಲೇ ಇದೆ.
ಆಗಿರುವ ಅನಾಹುತ, ನಷ್ಟ, ಜೀವಹಾನಿಗೆ ಪರಿಹಾರ ಏನು? ಕಾರಣರಾರು? ಶಿಕ್ಷೆ ಏನು? ಎನ್ನುವ ಚಚೆ೯ ಬದಿಗಿಟ್ಟು ಇಡೀ ಪ್ರಕರಣ ನೋಡುವ ಅನಿವಾಯ೯ತೆ ಇದೆ.
ಗ್ರೌಂಡ್ ರಿಯಾಲಿಟಿ ವರದಿ,ಘಟನೆ ಸಮೀಪದ ವಾಸಿ ಆಗಿರುವ ಬರಹಗಾರರಾದ ರಾಜೇಂದ್ರ ಬುರುಡಿಗಟ್ಟೆ ಅವರ ಲೇಖನದಿಂದ ಪೇಸ್ ಬುಕ್ ಓದುಗರಿಗೆ ಗೊತ್ತಾಯಿತು.
ಘಟನೆ ಸ್ಥಳದಿಂದ 3 ಕೀ ಮಿ ದೂರದ ಅಬ್ಬಲಗೆರೆ SR ಪೆಟ್ರೋಲ್ ಪಂಪ್ ಮಾಲಿಕರಾದ ನಿವೃತ್ತ ಕೃಷಿ ಬ್ಯಾಂಕ್ ನ ಜಿಲ್ಲಾ ವ್ಯವಸ್ಥಾಪಕರಾದ ಹಂದಿಗೋಳ್ ಸಾಹೇಬರು " ಅವತ್ತು ರಾತ್ರಿ ಸಣ್ಣ ಬ್ಲಾಸ್ಟ್ ಶಬ್ದ ನಂತರ ಬೆಳಕು, ಆಕಾಶದೆತ್ತರ ಹೊಗೆ ಏಳುವುದು ನೋಡಿ ಏನೋ ಅನಾಹುತ ಅಂತ ಹೊರ ಬಂದು ನೋಡುತ್ತಿರುವಾಗಲೇ ಕಣ೯ ಕಠೋರವಾದ ಸ್ಪೋಟ ಆಯಿತು, ಪೆಟ್ರೋಲ್ ಪಂಪ್ ಗಾಜುಗಳೆಲ್ಲ ಅದುರಿತು " ಅಂದರು.
ಇದೆಲ್ಲ ಕಲ್ಲು ಕೊರೆ ಸಿಡಿಸಲು ತಂದು ಜಿಲೆಟಿನ್ ಬಾಕ್ಸ್ ಸ್ಪೋಟಗೊಂಡ ಪರಿಣಾಮ, ಒಂದು ಜಿಲೆಟಿನ್ ಬಾಕ್ಸ್ 20 ಕೆಜಿ ತೂಕ ಇರುತ್ತದೆ ಅದರಲ್ಲಿ ಗರಿಷ್ಠ 200 ಜಿಲೇಟಿನ್ ಕಡ್ಡಿ ಇರುತ್ತದೆ ಒಂದು ಕಡ್ಡಿಗೆ 20 ರಿಂದ 50 ರೂ ತನಕ ಬೆಲೆ ಅಂದರೂ ಒಂದು ಬಾಕ್ಸ್ ಗೆ ನಾಲ್ಕು ಸಾವಿರದಿಂದ ಹತ್ತು ಸಾವಿರ ಬೆಲೆ ಇದೆ.
ಶಿವಮೊಗ್ಗ ಪಟ್ಟಣದ ಹಾಲಿ ಅಭಿವೃದ್ಧಿ ಕಾಮಗಾರಿ, ದಿನದಿಂದ ದಿನಕ್ಕೆ ಬೆಳೆದು ಪಟ್ಟಣ ಆಗುತ್ತಿರುವ ಪರಿಗೆ ಪ್ರತಿನಿತ್ಯ ಬೇರೆ ಕಡೆಯಿಂದ ಬರುವ ಮರಳು, ಎಂ ಸ್ಯಾಂಡ್, ಜಲ್ಲಿ ಕಲ್ಲುಗಳು ಹೊರತು ಪಡಿಸಿ ಹುಣಸೋಡು ಕ್ರಷರ್ ಜೋನ್ ನಿಂದ ದೊಡ್ಡ ಪ್ರಮಾಣದಲ್ಲಿ ಶಿವಮೊಗ್ಗ ಪಟ್ಟಣಕ್ಕೆ ಪೂರೈಕೆ ಆಗುತ್ತದೆ.
ಹಾಲಿ 60 ಲೈಸೆನ್ಸ್ ಇರುವ ಕ್ರಷರ್ ಇದೆ ಎಂದು ಮಾಹಿತಿ ಇದೆ, ಈ ಕ್ರಷರ್ ಗಳು 6mm ನಿಂದ 20mm ಮತ್ತು 40 mm ಜಲ್ಲಿ ನಿತ್ಯ ತಯಾರಿಸುತ್ತದೆ, ಎಂ ಸ್ಯಾಂಡ್ ಯುನಿಟ್ಗಳು ಬೇರೆ,ಇದರಿಂದ ಪ್ರತಿ ನಿತ್ಯ ಒಂದು ಸಾವಿರ ಲಾರಿ ಲೋಡ್ ಮಾರಾಟ ಆಗುತ್ತದೆ, ಇದನ್ನು ಸರಬರಾಜು ಮಾಡಲಿಕ್ಕೆ 300 ರಿಂದ 400 ಟ್ರಕ್ ಕನಿಷ್ಠ ಒಂದು ಟ್ರಿಪ್ ಗರಿಷ್ಟ 3 ಟ್ರಿಪ್ ಬಾಡಿಗೆ ಮಾಡುತ್ತದೆ.
ಈ ಬೃಹತ್ ಪ್ರಮಾಣದ ತಯಾರಿಗೆ ಬೇಕಾದ ಸೋಲಿಂಗ್ ಮತ್ತು ಬಂಡೆಗಳನ್ನು ಕಲ್ಲು ಕೊರೆಗಳಿಂದ ರಾತ್ರಿ ಡೈನಾಮೆಂಟ್ ಇಡಲು ಕುಣಿ ಕೊರೆದು ಅದಕ್ಕೆ ಡೈನಾಮೆಂಟ್ ಗೆ ಕೇಪ್ ಇರಿಸಿ ಬ್ಲಾಸ್ಟಿಂಗ್ ಗೆ ವೈರ್ ಅಳವಡಿಸಿಡುತ್ತಾರೆ (ಎಲೆಕ್ಟ್ರಿಕ್ ಬ್ಲಾಸ್ಟ್ ) ಇದನ್ನು ಬೆಳಿಗ್ಗೆ 6ರ ಒಳಗೆ ಸಿಡಿಸಬೇಕು (ರಾತ್ರಿ ತೆಗೆದ ಕುಣಿಯಲ್ಲಿ ಬೆಳಗಿನವರೆಗೆ ಗ್ಯಾಸ್ ಪಾಮೆ೯ಶನ್ ದೊಡ್ಡ ಪ್ರಮಾಣದಲ್ಲಿ ಕಲ್ಲು ಪುಡಿ ಆಗುವುದರಿಂದ) ನಂತರ ಒಡೆದ ಬಂಡೆ ಕ್ರಷರ್ ಗೆ ಕಳಿಸುವ ಲಾರಿ, ಜೆಸಿಬಿ ಮತ್ತು ಲೋಡರ್ ಗಳು ಅಷ್ಟೆ ಸಂಖ್ಯೆಯಲ್ಲಿ ನಿತ್ಯ ಕೆಲಸ ನಿವ೯ಹಿಸುತ್ತದೆ.
ಒಂದು ದಿನ ಉತ್ಪಾದನೆ ನಿಂತರೂ ಕಟ್ಟಡ ವಿಮಾ೯ಣಕ್ಕೆ ದೊಡ್ಡ ನಷ್ಟ. ಇದರಿಂದ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೊಡ್ಡ ಪ್ರಮಾಣದ ಉದ್ಯೋಗ ವ್ಯವಹಾರ ನಡೆಯುತ್ತದೆ.
ಕಲ್ಲು ಗಣಿ ಲೈಸೆನ್ಸ್ ಮಾತ್ರ ನೀಡುವ ಅಧಿಕಾರ ಮೈನ್ಸ್ & ಜುಯಾಲಿಜಿಸ್ಟ್ ಇಲಾಖೆದಾದರೆ ಅಲ್ಲಿನ ಬಂಡೆ ಸಿಡಿಸಲು ಡೈನಾಮೆಂಟ್ ಬಳಸಲು ಜಿಲ್ಲಾಧಿಕಾರಿಗಳು ಎಕ್ಸ್ ಪ್ಲೋಸಿವ್ ಲೈಸೆನ್ಸ್ ನೀಡುತ್ತಾರೆ ಹಾಗಾಗಿ ಗಣಿ ಮತ್ತು ವಿಜ್ಞಾನ ಕೇಂದ್ರಕ್ಕೆ ಇಲ್ಲಿ ನಡೆದ ಸ್ಪೋಟ ಮತ್ತು ದುರಂತಕ್ಕೆ ಸಂಬಂದ ಇರುವುದಿಲ್ಲ.
ಪ್ರತಿ ನಿತ್ಯ ಇಷ್ಟೇ ಉತ್ಪಾದಿಸಬೇಕು, ನಿಗದಿತ ವೇಳೆಯಲ್ಲಿ ಸೀಮಿತ ಸಂಖ್ಯೆಯ ಬ್ಲಾಸ್ಟ್ ಆಗಬೇಕೆಂಬ ನಿಯಮ, ವಾಹನಗಳಲ್ಲಿ ಪಮಿ೯ಟ್ ಜೊತೆಗೆ ಟಾಪ೯ಲ್ ಮುಚ್ಚಿ ಸಾಗಾಣಿಕೆ ಮಾಡಬೇಕೆಂಬ ನಿಯಮಗಳು ಎಷ್ಟರ ಮಟ್ಟಿಗೆ ಜಾರಿ ಇದೆ ಗೊತ್ತಿಲ್ಲ.
ಮೊನ್ನೆ ಆಗಿರುವ ಘಟನೆಯ ಬಗ್ಗೆ ಅನೇಕರಲ್ಲಿ ಸಂಗ್ರಹಿಸಿದ ಮಾಹಿತಿಗೆ ನೈಜತೆಗೆ ಹತ್ತಿರ ಇರಬಹುದಾದ್ದು ಇಲ್ಲಿ ಪ್ರತಿನಿತ್ಯ ನಡೆಸುವ ನೂರಾರು ಬ್ಲಾಸ್ಟಿಗೆ ಅವಶ್ಯ ಇರುವ ದೊಡ್ಡ ಪ್ರಮಾಣದ ಜಿಲೇಟಿನ್ ಮತ್ತು ಕೇಪುಗಳು ಖರೀದಿಸಿ ತರುತ್ತಲೇ ಇರುತ್ತಾರೆ ಆದರೆ ಯಾವತ್ತೂ ಆಗದ ದುರಂತಕ್ಕೆ ಕಾರಣ ಸೆಲ್ ಫೋನ್ ಆಗಿರಲೂ ಬಹುದು ಎ೦ದು ಒ೦ದು ಕಾಲದ ಕ್ರಷರ್ ಮಾಲಿಕರಾದ ಹೊಸನಗರ ತಾಲ್ಲೂಕಿನ ಬಟ್ಟೆ ಮಲ್ಲಪ್ಪದ ರಾಜಶೇಖರ್ ಅನುಮಾನ ಪಡುತ್ತಾರೆ.
ಬ್ಲಾಸ್ಟ್ ಮಾಡುವ ಸ್ಥಳದಲ್ಲಿ ಸೆಲ್ ಫೋನ್ ಬಳಸಬಾರದೆಂಬ ನಿಯಮ ಇದೆ ಆದರೆ ಈಗಿನ ಕೆಲಸಗಾರರಲ್ಲಿ ಈ ಬಗ್ಗೆ ಭಯ ಎಚ್ಚರ ಇಲ್ಲವಾಗಿದೆ.
ಅವರ ಪ್ರಕಾರ ದೊಡ್ಡ ಕ್ಯಾಂಟರ್ ವಾಹನದಿಂದ ಸಣ್ಣ Ace ವ್ಯಾನ್ ಗೆ ಅನ್ ಲೋಡು ಮಾಡುವಾಗ ಜಿಲೆಟಿನ್ ಬಾಕ್ಸ್ ಮತ್ತು ಕೇಪ್ ನ ಬಾಕ್ಸ್ ಒಟ್ಟಿಗೆ ಇಡುವಾಗ ಸೆಲ್ ಫೋನ್ ಕನೆಕ್ಟಿವಿಟಿಯಿಂದ ಬ್ಲಾಸ್ಟ್ ಆಗಿದೆ ಇದರ ಪರಿಣಾಮ ನಂತರ ದೊಡ್ಡ ವ್ಯಾನ್ ಬ್ಲಾಸ್ಟ್ ಆಗಿದೆ ಇದೇ ಕಂಪನದಿಂದ ಆ ಪ್ರದೇಶದಲ್ಲಿ ಬೆಳಿಗ್ಗೆ ಬ್ಲಾಸ್ಟ್ ಮಾಡಲು ಅಳವಡಿಸಿದ ಎಲ್ಲಾ ಕುಣಿಗಳಲ್ಲೂ ಬ್ಲಾಸ್ಟ್ ಒಂದೇ ಸಮಯದಲ್ಲಿ ಆಗಿದ್ದರಿಂದ (ಈ ಬಗ್ಗೆ ಎಲ್ಲಾ ಗಣಿಗಳಲ್ಲೂ ಬ್ಲಾಸ್ಟ ಆದ ಕುರುಹು ಇರುತ್ತೆ ) ಸುಮಾರು 50 ರಿಂದ 100 ಕಿ ಮಿ ಸುತ್ತಳತೆ ಪ್ರದೇಶದ ಗ್ರಾನೈಟ್ ಕಲ್ಲಿನ ಸೆಲೆ ಇರುವ ಪ್ರದೇಶದಲ್ಲಿ ಕಂಪನ ಆಗಿದೆ, ಜಂಬಿಟ್ಟಿಗೆ ಕಲ್ಲಿನ ಪ್ರದೇಶ ಮತ್ತು ನೂರು ಅಡಿ ಮಟ್ಟದ ಮಣ್ಣು ಪ್ರದೇಶದಲ್ಲಿ ಕಂಪನ ಶೇಕ್ ಅಬ್ಸರ್ವರ್ ರೀತಿ ವತಿ೯ಸುವುದರಿಂದ ಕಂಪನ ಅನುಭವಕ್ಕೆ ಬರುವುದಿಲ್ಲ ಅಂತೆ.
ಮುಂದೆ ಈ ರೀತಿ ಆಗದಂತೆ ಏನು ಮಾಡ ಬೇಕು ಎನ್ನುವ ಬಗ್ಗೆ ಯೋಚಿಸ ಬೇಕು ಕ್ರಷರ್ ಜೋನ್ ಜನವಸತಿಯಿಂದ ದೂರ ಇರಬೇಕು, ಕಲ್ಲು ಗಣಿ ಮತ್ತು ಕ್ರಷರ್ ಗೆ ಅಂತರ ಇರಬೇಕು, ಇಡೀ ಗಣಿ, ಬ್ಲಾಸ್ಟಿಂಗ್, ಕ್ರಷರ್ ಮತ್ತು ಸಾಗಾಣಿಕೆ ಒಂದೇ ಇಲಾಖೆ ಸೂರಿನಲ್ಲಿ ಅನುಮತಿ ಮತ್ತು ನಿಯಂತ್ರಣದಲ್ಲಿರುವಂತೆ ರಾಜ್ಯ ಸಕಾ೯ರ ತೀಮಾ೯ನಿಸಬೇಕು ಈ ಮೂಲಕ ನಿಗದಿತ ಪ್ರಮಾಣ ಮೀರದಂತೆ ಉತ್ಪಾದನೆಗೆ ನಿಯಂತ್ರಣ ಮಾಡಬೇಕು, ಕ್ರಷರ್ ಜೋನ್ ನಲ್ಲಿ ಕೆಲಸ ಮಾಡುವವರ ಮಾಹಿತಿ ಮತ್ತು ಅವರ ವಿಳಾಸ ಖಾತ್ರಿ ದಾಖಲೆ ಪ್ರತಿ ವಾರ ಸಂಬಂದಪಟ್ಟ ವ್ಯಾಪ್ತಿಯ ಪೋಲಿಸ್ ಠಾಣೆಗೆ ಕಡ್ಡಾಯ ನೀಡುವ ಸಂಪ್ರದಾಯ ಕೂಡ ಪ್ರಾರಂಭ ಆಗಬೇಕು.
ಸುರಕ್ಷತೆಯ ಎಲ್ಲಾ ಮಾನದಂಡಗಳನ್ನು ಗಣಿ ಮತ್ತು ಕ್ರಷರ್ ಮಾಲಿಕರು ತಪ್ಪದೇ ಅನುಸರಿಸುವ ನೈತಿಕತೆ ಕೂಡ ಕಾನೂನಿಗಿಂತ ಅವಶ್ಯ ಎಂಬ ಸ್ವಯಂ ಜಾಗೃತಿ ಕೂಡ ಅನಿವಾಯ೯.
Comments
Post a Comment