Blog number 1935. ಶಿಕಾರಿಪುರದ ಪಡುವಾರಳ್ಳಿ ಪಾಂಡವರಾಗಿ ಯಡೂರಪ್ಪರ ನೇತೃತ್ವದ ಮಂತ್ರಿ ವೆಂಕಟಪ್ಪರ ವಿರುದ್ದ ಹೋರಾಟದಲ್ಲಿ ಪೋಲಿಸರಿಂದ ದೈಹಿಕ ಹಲ್ಲೆಗೊಳಗಾಗಿ ಬಳ್ಳಾರಿ ಜೈಲು ಸೇರಿದ ಶಿಕಾರಿಪುರದ ರಾಜು ನಾಥಪಂಥದ ಅನುಯಾಯಿ ನನ್ನ ಅತಿಥಿ.
#ಹತ್ತು_ವರ್ಷದ_ನಂತರದ_ಬೇಟಿ
#ಶಿಕಾರಿಪುರದ_ರಾಜು
#ನಾಥ_ಪಂಥದ_ಅನುಯಾಯಿಗಳು
#ಹಲವಾರಿ_ಮಠದ_ಹಿಂದಿನ_ಸ್ವಾಮಿಗಳಾದ_ಪೀರ್_ಸೋಮನಾಥಜೀ_ಶಿಷ್ಯರು
#ಜೀವ_ತ್ಯಾಗ_ಮಾಡಿದ_ಗುರುಗಳು_ಕಣ್ಣು_ತೆರೆದ_ಪವಾಡ
#ಶಿಕಾರಿಪುರದ_ಪಡುವಾರಳ್ಳಿ_ಪಾಂಡವರು_ಇವರು
ಹೊಸನಗರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೂಪರಿಡೆಂಟ್ ಆಗಿದ್ದ ಶಿಕಾರಿಪುರದ ರಾಜು ಮತ್ತು ಗ್ರಾಮ ಲೆಖ್ಖಗಿರಾಗಿದ್ದ ಮೋಹನ್ ಅವರು ನನಗೆ ಆಪ್ತರಾಗಿದ್ದು ಇವರಿಬ್ಬರು ನಾಥ ಪಂಥದ ಅನುಯಾಯಿಗಳಾದ್ದರಿಂದ,
ನಾಥ ಪಂಥದ ಬಗ್ಗೆ ಹೆಚ್ಚು ತಿಳಿದಿದ್ದಾರೆ - ಓದಿದ್ದಾರೆ ಮತ್ತು ನಾಥ ಪಂಥದ ಅನೇಕ ಉತ್ತರ ಭಾರತದ ಕ್ಷೇತ್ರಗಳನ್ನು ವರ್ಷಂಪ್ರತಿ ಸಂದರ್ಶಿಸುತ್ತಾರೆ.
ಕೊಡಚ್ಚಾದ್ರಿ ಸಿದ್ದ ಪೀಠ ಯಡಮೊಗೆಯ ಹಲವಾರಿ ಮಠ ನಾಥ ಪಂಥದ ಉತ್ತರಪ್ರದೇಶದ ಗೋರಕಪುರದ ಮಹಾಂತರಾದ ಯೋಗಿ ಆದಿತ್ಯನಾಥರ ಆಡಳಿತಕ್ಕೆ ಒಳಪಟ್ಟಿದೆ ಪ್ರತಿ 12 ವರ್ಷಕ್ಕೆ ನಾಸಿಕದಲ್ಲಿ ನಡೆಯುವ ಕುಂಭಮೇಳದ ಮರುದಿನ ಹೊರಡುವ ಬಾರಾಪಂಥ ಯಾತ್ರೆಯಲ್ಲಿ ನೂರಾರು ಸಂತರು ಪಶ್ಚಿಮ ಘಟ್ಟ ಪ್ರದೇಶದ ಮಧ್ಯ ನಡೆದು ಬರುತ್ತಾರೆ ಅಂತಿಮವಾಗಿ ಮಂಗಳೂರಿನ ಕದ್ರಿ ಮಠ ತಲುಪುವ ಬಾರಾಪಂಥ್ ಯಾತ್ರೆ ಈ ಹಲವಾರಿ ಮಠದಲ್ಲಿ ತಂಗುತ್ತದೆ.
ಈ ಮಠದ ಹಿಂದಿನ ಗುರುಗಳಾದ ಗ್ಯಾಲಿಯರ್ ನ ಫೀರ್ ಸೋಮನಾಥಜೀ ಅವರಿಗೆ ಇವರಿಬ್ಬರೂ ತುಂಬಾ ಆತ್ಮೀಯರಾಗಿದ್ದರು, ಅವರು 2014ರಲ್ಲಿ ದೇಹಾಂತ್ಯಕ್ಕೆ ಮೊದಲು ಅವರ ಸೇವೆ ಮಾಡಿದವರು ಇವರು.
ಅವತ್ತು ಗುರುಗಳು ತಕ್ಷಣ ಬರಲು ಅವರ ಆಪ್ತರಿಂದ ಪೋನ್ ಮಾಡಿಸಿದ್ದರಿಂದ ರಾಜು ಹೊಸನಗರದಿಂದ ಹೊಸಂಗಡಿ ತಲುಪಿ ಅಲ್ಲಿಂದ ಬಲಕ್ಕೆ ಹೊರಳಿ ಯಡಮೊಗೆಯ ಕೊಡಚ್ಚಾದ್ರಿ ಸಿದ್ದ ಪೀಠ ತಲುಪುವಾಗ ಗುರುಗಳು ಜೀವ ತ್ಯಾಗ ಮಾಡಿ ಆಗಿತ್ತು.
ಗುರುಗಳನ್ನು ನಾಥ ಪಂಥದ ಸಂಪ್ರದಾಯದಂತೆ ಕುಳ್ಳಿರಿಸಿ ಕೆಳ ದವಡೆ ಮತ್ತು ಶಿರದ ನೆತ್ತಿಗೆ ಬಟ್ಟೆ ಕಟ್ಟಿದ್ದರು... ಗುರುಗಳು ಬರಲು ಹೇಳಿದ್ದರಿಂದ ವೇಗವಾಗಿ ಬಂದರೂ ಅವರನ್ನು ಜೀವಂತ ಬೇಟಿ ಸಾಧ್ಯವಾಗಲಿಲ್ಲ ಎಂಬ ದುಃಖದಿಂದ ರಾಜು ಸಾಷ್ಟಾಂಗ ನಮಸ್ಕಾರ ಮಾಡಿ ಏಳುತ್ತಿರುವಾಗ ಅಲ್ಲೊಂದು ಪವಾಡ ನಡೆಯುತ್ತದೆ ಅದಕ್ಕೆ ಅಲ್ಲಿದ್ದ ಕೆಲವರು ಸಾಕ್ಷಿ ಆಗುತ್ತಾರೆ ಅದೇನೆಂದರೆ ಜೀವ ತ್ಯಾಗ ಮಾಡಿದ ಫೀರ್ ಸೋಮನಾಥಜೀ ಎರೆಡೂ ಕಣ್ಣು ತೆರೆಯುತ್ತಾರೆ ಕೆಲ ಕ್ಷಣದ ನಂತರ ಕಣ್ಣು ಮುಚ್ಚುತ್ತಾರೆ ಈ ಮೂಲಕ ತನ್ನ ಶಿಷ್ಯನಾದ ರಾಜುಗೆ ಸಾಕ್ಷಾತ್ಕಾರದ ದರ್ಶನ ನೀಡುತ್ತಾರೆ.
ಕಳೆದ 10 ವರ್ಷದಲ್ಲಿ ಇವರ ಭೇಟಿ ಆಗಿರಲಿಲ್ಲ ಮೊನ್ನೆ ನನ್ನ ಕಛೇರಿಗೆ ಬಂದಿದ್ದರು ಬಂದ ಅತಿಥಿಗಳಿಗೆ ಕಾಫಿಯೊಂದಿಗೆ ನನ್ನ ಪುಸ್ತಕ ನೀಡಿದೆ.
ಶಿಕಾರಿಪುರದ ರಾಜು ಮತ್ತು ಗೆಳೆಯರು ಆ ಕಾಲದಲ್ಲಿ ಶಿಕಾರಿಪುರದಲ್ಲಿ ಪಡುವಾರಳ್ಳಿ ಪಾಂಡವರಾಗಿದ್ದವರು ಗುಂಡೂರಾವ್ ಸರ್ಕಾರದಲ್ಲಿ ಆಹಾರ ಮಂತ್ರಿ ಆಗಿದ್ದ ಶಿಕಾರಿಪುರದ ವೆಂಕಟಪ್ಪನವರ ವಿರುದ್ದ ಆಗ ಶಿಕಾರಿಪುರದಲ್ಲಿ ಪುರಸಭಾ ಸದಸ್ಯರಾಗಿದ್ದ ಯಡೂರಪ್ಪನವರು ಜನಾಂದೋಲ ಶುರು ಮಾಡಿದ್ದರು ಅವರಿಗೆ ಬೆಂಬಲವಾಗಿ ಈ ಪಡುವಾರಳ್ಳಿ ಪಾಂಡವರು ಮಂತ್ರಿ ವೆಂಕಟಪ್ಪರ ಮನೆ ಮೇಲೆ ದಾಳಿ ಮಾಡುತ್ತಾರೆ ಇದು ಆ ಕಾಲದ ಪ್ರಬಲ ಮಾಧ್ಯಮವಾದ ರೇಡಿಯೋದಲ್ಲಿ ವೈರಲ್ ಸುದ್ದಿ... ಮರುದಿನ ಪ್ರಜಾವಾಣಿ ಮುಖಪುಟದ ಸುದ್ದಿ ಆಗಿತ್ತು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2023/03/blog-number-1345-27-2023-43.html
ಸರಕಾರಕ್ಕೆ ಅವಮಾನವಾದ ಈ ಘಟನೆಗೆ ಕಾರಣರಾದ ಪಡುವಾರಳ್ಳಿ ಪಾಂಡವರನ್ನು ಸದೆ ಬಡೆದ ಪೋಲಿಸರು ಬಳ್ಳಾರಿ ಜೈಲಿಗೆ ಅಟ್ಟಿದರು ಘಟನೆಗೆ ಪ್ರೇರಕರಾದ ಯಡೂರಪ್ಪನವರು ಇವರನ್ನು ಬಿಡಿಸಲು ಬರಲೇ ಇಲ್ಲ, ಕಾಂಗ್ರೇಸಿನ ನಗರದ ಮಹಾದೇವಪ್ಪ ಜಾಮೀನು ನೀಡಿ ಬಿಡಿಸಿದರು.
ನಂತರ ಚುನಾವಣೆಯಲ್ಲಿ ಯಡೂರಪ್ಪ ಜನ ಸಂಘದಿಂದ ಶಿಕಾರಿಪುರದ ಶಾಸಕರಾದರು.
Comments
Post a Comment