#ಕೆಳದಿ_ರಾಜರ_ಕೊಡುಗೆ.
#ಒಂದು_ಸುಸಜ್ಜಿತ_ಪಟ್ಟಣವನ್ನು_ತನ್ನ_ಅಜ್ಜನ_ನೆನಪಿಗಾಗಿ_ನಿರ್ಮಿಸಿದ_ಐತಿಹಾಸಿಕ_ದಾಖಲೆ
#ಈಗಿನ_ಸಾಗರಕ್ಕೆ_ಇದೆ
#ಇಲ್ಲಿ_ನಡೆಯುವ_ಅದ್ದೂರಿ_ಮಾರಿ_ಜಾತ್ರೆ_ರಾಜ್ಯದಲ್ಲೇ_ಪ್ರಸಿದ್ದಿ_ಪಡೆದಿದೆ
#ಯುದ್ದ_ಗೆದ್ದು_ಬಂದ_ಕೆಳದಿ_ರಾಜ_ಮಾರಿಕಾಂಬೆಯ_ಊರ_ಹೊರಗಿದ್ದ_ಪಾದಗಳನ್ನು_ಊರೊಳಗೆ_ಸ್ಥಾಪಿಸುತ್ತಾರೆ
#ಸಾಗರ_ಪಟ್ಟಣ_ಕೆರೆ_ಮಾರಿಕಾಂಬ_ಗದ್ದುಗೆ_ನಿರ್ಮಿಸಿದ_ಕೆಳದಿ_ರಾಜ_ವೆಂಕಟಪ್ಪನಾಯಕರ_ಪುನರ್_ಸ್ಮರಣೆ_ಆಗಲಿ
#ಸಾಗರ_ಪಟ್ಟಣದ_ಹೆಸರು_ನಾಲ್ಕು_ಶತಮಾನದ_ಹಿಂದೆ_ಸದಾಶಿವಸಾಗರ
#ಈಗಿನ_ಗಣಪತಿಕೆರೆಯೆ_ಸದಾಶಿವಸಾಗರ_ಎಂಬ_ಸರೋವರ.
#ಸಾಗರ_ಪಟ್ಟಣ_ನಿರ್ಮಿಸಿದ_ರಾಜ_ಹಿರಿಯವೆಂಕಟಪ್ಪನಾಯಕರ_ಒಂದೂ_ಸ್ಮಾರಕ_ಸಾಗರದಲ್ಲಿ_ಇಲ್ಲ
ಈಗ #ಸಾಗರ ಎಂಬ ನಮ್ಮ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಕೇಂದ್ರ ಸುಮಾರು ನಾಲ್ಕುನೂರು ವರ್ಷದ ಹಿಂದೆ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರು ತಮ್ಮ ಅಜ್ಜ ಸದಾಶಿವ ನಾಯಕರ (ಆಳಿದ ಕಾಲ ಮಾನ 1530 - 1566) ಸ್ಮರಣಾರ್ಥ ಅವರ ಹೆಸರಲ್ಲಿ ಅಂದರೆ #ಸದಾಶಿವಸಾಗರ ಎಂದು ನಾಮಕರಣ ಮಾಡಿ ನಿರ್ಮಿಸಿದ ಆ ಕಾಲದ ಸುಂದರ ಪಟ್ಟಣ ಆಗಿತ್ತು.
ಇದೇ ಹೆಸರಿನ ಸುಂದರ ಸರೋವರ ಗಣಪತಿ ದೇವಸ್ಥಾನದ ಕೆಳಗೆ ನಿಮಿ೯ಸಿದ್ದರು ಕಾಲಾಂತರದಲ್ಲಿ ಈ ಸದಾಶಿವ ಸಾಗರ ಎಂಬ ಸರೋವರ ಗಣಪತಿ ಕೆರೆ ಎಂದಾಗಿದೆ.
ಕೆಳದಿ ರಾಜರಲ್ಲಿ ಹಿರಿಯ ವೆಂಕಟಪ್ಪ ನಾಯಕರು ದೀಘ೯ ಕಾಲದ 43 ವಷ೯ಆಡಳಿತ ಮಾಡಿದವರು(ಆಳಿದ ಕಾಲ ಮಾನ 1586-1629). ಹೆಚ್ಚು ರಾಜ್ಯ ವಿಸ್ತಾರ ಮಾಡಿದ್ದಾರೆ, ಇವತ್ತಿನ ಸಾಗರ ಪಟ್ಟಣ (ಸದಾಶಿವ ಸಾಗರ) ಕಟ್ಟಿದವರು, ಆನಂದಪುರ ಎಂದು ನಾಮಕರಣ, ಆನಂದಪುರಂ ಚಂಪಕ ಸರಸ್ಸು ನಿಮಿ೯ಸಿದ ರಾಜ ಹಿರಿಯ ವೆಂಕಟಪ್ಪ ನಾಯಕರು ಕೆಳದಿ ಇತಿಹಾಸದಲ್ಲಿ ಅಗ್ರಶ್ರೇಯಾಂಕದಲ್ಲಿ ಇದ್ದರೂ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿ ಏಕೆ ಆಗಲಿಲ್ಲ?... ಎಂಬ ಬಗ್ಗೆ ಸಂಶೋದನೆ ಆಗಬೇಕಾಗಿದೆ.
ಈಗಲೂ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರು ಕಟ್ಟಿದ ಸಾಗರ ಪಟ್ಟಣದಲ್ಲಿ ಅವರ ಹೆಸರಿನ ರಸ್ತೆ, ಉದ್ಯಾನವನ ಅಥವ ಅವರ ನೆನಪಿಸುವ ಒಂದೇ ಒಂದು ಪ್ರತಿಮೆಯೂ ಇಲ್ಲ.
ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರು ಎಲ್ಲಿಯೂ ಸ್ಮಾರಕವಾಗಿ ಸಾಗರದಲ್ಲೇ ಇಲ್ಲ!!... ಇದನ್ನು ನಾಲ್ಕು ಶತಮಾನದ ನಂತರ ವಾದರೂ ಸರಿ ಪಡಿಸಲು ಸಾಗರದ ಜನಪ್ರತಿನಿದಿಗಳು ಮುಂದಾಗಬೇಕು ಅವರಿಗೆ ಸಾಗರದ ಜನತೆ ಕೈ ಜೋಡಿಸಬೇಕು.
ಮುಂದಿನ ದಿನದಲ್ಲಿ ಇತಿಹಾಸ ಸಂಶೋದಕರು, ಶಾಲಾ ಕಾಲೇಜುಗಳಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ.
ಇಟಲಿಯ ಪ್ರವಾಸಿ ಡಲ್ಲೊವಿಲ್ಲಾ ಇಕ್ಕೇರಿಯಲ್ಲಿ ರಾಜ ವೆಂಕಟಪ್ಪ ನಾಯಕರ ಬೇಟಿ ಮಾಡಿದ ಬಗ್ಗೆ ದಾಖಲೆಯಲ್ಲಿದೆ,ರಾಣಿ ಅಬ್ಬಕ್ಕ, ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ, ಬಿದನೂರಿನ ರಾಣಿ ಅಮ್ಮಿದೇವಮ್ಮ ವೆಂಕಟಪ್ಪ ನಾಯಕರಿಂದ ಸಹಾಯ ಕೇಳಿ ರಾಜ್ಯ ಕಳೆದುಕೊಂಡದ್ದು ಇತಿಹಾಸದಲ್ಲಿ ದಾಖಲೆ ಆಗಿದೆ.
ತನ್ನ ಅಜ್ಜ ರಾಜ ಸದಾಶಿವ ನಾಯಕರ ಹೆಸರು ಚಿರಸ್ಥಾಯಿ ಮಾಡಲು ಸದಾಶಿವ ಸಾಗರ ನಿರ್ಮಿಸಿದ್ದು ಇತಿಹಾಸದಲ್ಲಿ ದಾಖಲೆ ಆಗಿದೆ ಆದರೆ ಇವರಿಬ್ಬರನ್ನು ಮರೆತಿದ್ದೇವೆ, ಸದಾಶಿವ ಸಾಗರ ಎಂಬ ಹೆಸರಲ್ಲಿನ ಸದಾಶಿವ ಇಲ್ಲವಾಗಿದ್ದು ಬರೀ ಸಾಗರವಾಗಿದೆ.
ಸಾಗರ ತಾಲ್ಲೂಕಿನಲ್ಲಿ #ಕೆಳದಿ_ಉತ್ಸವ ವಿಜೃಂಬಣೆಯಲ್ಲಿ ನಡೆಯಲಿದೆ ಇದಕ್ಕಾಗಿ ರಾಜ್ಯ ಸರ್ಕಾರದಿಂದ 50 ಲಕ್ಷ ಅನುದಾನ ದೊರೆಯುವುದಾಗಿ ಘೋಷಿಸಿದ್ದರು, ಈ ಉತ್ಸವ ಈಗಿನ ಶಾಸಕರಾದ #ಬೇಳೂರು_ಗೋಪಾಲಕೃಷ್ಣ ಮತ್ತು ಈಗಿನ ಸರ್ಕಾರದ ಜಿಲ್ಲಾ ಮಂತ್ರಿ #ಮದು_ಬಂಗಾರಪ್ಪ ಮುಂದುವರಿಸಬಹುದು ಇಂತಹ ಸಂದರ್ಭದಲ್ಲಿ ಇಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಸಂಬಂದ ಪಟ್ಟವರು ಗಣನೆಗೆ ತೆಗೆದುಕೊಂಡು ಕೆಳದಿ ಉತ್ಸವ ಅರ್ಥಪೂರ್ಣವಾಗಿ ಮಾಡಬಹುದಾಗಿದೆ.
Comments
Post a Comment