Blog number 1929. ಶೃಂಗೇಶ್ ಸಂಪಾದಕತ್ವದ ಜಿಲ್ಲಾ ದೈನಿಕ ಪತ್ರಿಕೆಗೆ 20 ನೇ ವಾರ್ಷಿಕೊತ್ಸವ, ನಮ್ಮಿಬ್ಬರ ಗೆಳೆತನಕ್ಕೆ ಮೂರು ದಶಕ.
#ಶೃ೦ಗೇಶರ_ಜನಹೋರಾಟ_ದಿನ_ಪತ್ರಿಕೆಯ_ವಾರ್ಷಿಕೋತ್ಸವ
#ಇವತ್ತಿನ_ಪತ್ರಿಕೆ_20ನೇ_ವಷ೯ದ_ಮೊದಲ_ಪತ್ರಿಕೆ
#ಸಂಪಾದಕರಾದ_ಶೃಂಗೇಶ್_ಮತ್ತು_ಅವರ_ಪತ್ರಿಕಾ_ಬಳಗಕ್ಕೆ_ಅಭಿನಂದನೆಗಳು.
#ರವಿಬೆಳೆಗೆರೆ_ಅವರ_ಹಾಯ್_ಬೆಂಗಳೂರ್_ರೋವಿಂಗ್_ರಿಪೋರ್ಟರ್
#ನನ್ನ_ಎರೆಡು_ಪ್ರಸ್ತಕದ_ಮುದ್ರಕರು
#ನಮ್ಮ_ಸಂಸ್ಥೆಯ_ಎಲ್ಲಾ_ಮುದ್ರಣ_ಆಗುವುದು_ಇವರ_ಜನಹೋರಾಟಾ_ಪ್ರಿಂಟರ್ಸ್
ಶೃಂಗೇಶ್ ಸಂಪಾದಕತ್ವದ ಜಿಲ್ಲಾ ದಿನಪತ್ರಿಕೆ #ಜನಹೋರಾಟಕ್ಕೆ 19 ವರ್ಷ ತುಂಬಿತು ಇವತ್ತಿನ ಪತ್ರಿಕೆ ಇಪ್ಪತ್ತನೇ ವರ್ಷದ ಮೊದಲ ಪತ್ರಿಕೆ ಆಗಿದೆ.
ರವಿ ಬೆಳಗೆರೆ ಅವರ ಹಾಯ್ ಬೆಂಗಳೂರ್ ಪತ್ರಿಕೆಯ ರೋವಿಂಗ್ ರಿಪೋರ್ಟರ್ ಎಂದೇ ಸ್ವತಃ ರವಿ ಬೆಳೆಗೆರೆ ಇವರಿಗೆ ಬಿರುದು ನೀಡಿದ್ದರು.
ಜಿಲ್ಲಾ ಮಟ್ಟದ ಜನ ಹೋರಾಟ ಪತ್ರಿಕೆ ಜೊತೆ ಇವರು ಪ್ರಾರಂಬಿಸಿದ ಪ್ರಿಂಟಿಂಗ್ ಉದ್ಯಮ ಇವರ ಕೈ ಹಿಡಿದಿದೆ ಪ್ರತಿಷ್ಟಿತ ಸಂಸ್ಥೆಗಳ ಮುದ್ರಣ ಗುತ್ತಿಗೆ ಇವರದ್ದೇ ಸಂಸ್ಥೆ ನಡೆಸುತ್ತಿದೆ.
ಕಳೆದ 30 ವರ್ಷದಿಂದ ನನ್ನ ಮತ್ತು ಇವರ ಗೆಳೆತನ ನವನವೀನವಾಗಿ ಉಳಿದಿರುವುದು ನನಗೇ ಆಶ್ಚರ್ಯ ಹೆಚ್ಚಿನ ಗೆಳೆತನ ವ್ಯವಹಾರ ನಾನಾ ಕಾರಣಗಳಿಂದ ಹಳಸಿ ಹೋಗುವುದು ಸಾಮಾನ್ಯ.
ನನ್ನ ಸಂಸ್ಥೆಗೆ ಪ್ರಿಂಟಿಂಗ್ ಮಾಡಿ ಕೊಟ್ಟ ಬಿಲ್ ಹತ್ತಿರ ಹತ್ತಿರ ಒಂದು ಲಕ್ಷ ರೂಪಾಯಿ ನಾನು ಇವರಿಗೆ ಬಾಕಿದಾರ ಆದರೂ ಗೆಳೆತನ ನವ ನವೀನ.
ಸ್ವಂತ ಕೃಷಿಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ, ನನಗೆ ಅವರ ಪತ್ರಿಕೆಗೆ ಬರೆಯಲು ಒತ್ತಾಯಿಸಿ ನನಗೊಂದು ಕಾಲಂ ಕೊಟ್ಟು ಅವಕಾಶ ನೀಡಿದ್ದು ಮರೆಯಲಾರೆ, ಅವರ ಪ್ರೋತ್ಸಾಹವೇ ನನಗೆ ಹೆಚ್ಚು ಬರವಣಿಗೆ ಮಾಡಲು ಪ್ರೇರಣೆ ಆಯಿತು.
ಶೃ೦ಗೇಶ್ ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ಒಂದು ಹೊಸ ಆಯಾಮ ತಂದವರು ಅವರ ಜನ ಹೋರಾಟ ದಿನಪತ್ರಿಕೆಯ 20 ನೇ ವಾಷಿ೯ಕೋತ್ಸವಕ್ಕೆ ಶುಭ ಹಾರೈಕೆಗಳು.
Comments
Post a Comment