Blog number 1899. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಏಕೆ? 766 C ಆನಂದಪುರಂ ಬಟ್ಟೆಮಲ್ಲಪ್ಪ ರಾ.ಹೆ.ಯಲ್ಲಿ ರಸ್ತೆ ಮಧ್ಯದ ಮರಗಳನ್ನು ಸೇರಿಸಿ ಡಾಂಬರಿಕರಣ ಪ್ರಜಾವಾಣಿ 4- ಜನವರಿ -2024ರ ವರದಿ.
#ಇವತ್ತಿನ_ಪ್ರಜಾವಾಣಿ_ಪತ್ರಿಕೆ_ವರದಿ
#ರಾಣಿಬೆನ್ನೂರು_ಬೈಂದೂರು_ರಾಷ್ಟ್ರೀಯ_ಹೆದ್ದಾರಿ
#ರಸ್ತೆಯಲ್ಲಿನ_ಮರ_ಸೇರಿಸಿ_ಡಾಂಬರೀಕರಣ
#ರಾಷ್ಟ್ರೀಯ_ಹೆದ್ದಾರಿ_ಕಾಮಗಾರಿ_ಈ_ರೀತಿನಾ?
#ಒಂದು_ಕಿ_ಮಿ_ರಾಷ್ಟ್ರೀಯ_ಹೆದ್ದಾರಿ_ನಿಮಾ೯ಣ_ವೆಚ್ಚ_ಎಷ್ಟು .
ನಮ್ಮ ಆನಂದಪುರಂನ ಪ್ರಜಾವಾಣಿ ದಿನ ಪತ್ರಿಕೆಯ ಯುವ ವರದಿಗಾರ ಮಲ್ಲಿಕಾಜು೯ನ ಮುಂಬಾಳು ಮಾಡಿರುವ ವರದಿ ಈ ದಿನಗಳಲ್ಲಿ ಸರ್ಕಾರದ ಕಾಮಗಾರಿಗಳು ನಡೆಯುವ ವೈಖರಿಗೆ ಕನ್ನಡಿ ಆಗಿದೆ.
ಒಂದು ಕಿ.ಮಿ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸರ್ಕಾರ ನಿಗದಿ ಪಡಿಸಿದ ಹಣ ಎಷ್ಟು? ಈ ಹಣದ ವಿನಿಯೋಗ ಸರಿಯಾಗಿ ಆಗುತ್ತಿದೆಯಾ? ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಣೆ ಮಾಡುವವರು ತಜ್ಞ ಇಂಜಿನಿಯರ್ ಗಳಾ? ... ಎಂಬ ಪ್ರಶ್ನೆಗಳು ಸಹಜ.
ಜೊತೆಗೆ ಇದಕ್ಕೆ ಉತ್ತರದಾಯಿತ್ವ ಯಾರದ್ದು?... ಲೋಕ ಸಭಾ ಸದಸ್ಯರದ್ದಾ?... ಜಿಲ್ಲಾ ಉಸ್ತುವಾರಿ ಸಚಿವರದ್ದಾ .... ಸ್ಥಳಿಯ ಶಾಸಕರದ್ದಾ?....
ಈ ಸಚಿತ್ರ ವರದಿ ನೋಡಿ ಸಂಬಂದ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗುವುದು ಇದಿಯಾ?.... ಕೈಗೊಂಡರೆ ಏನು ಕ್ರಮ ತೆಗೆದು ಕೊಂಡಿದ್ದಾರೆ ಎಂಬ ಪೂರಕ ವರದಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾರಾ?....
ಇಂತಹ ಅಪರಾ ತಪರಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ ಎಂಬ ಖಾತ್ರಿ ಇದಿಯಾ? ....
#ಇದೆಲ್ಲಾ_ಚಂದಮಾಮ_ಕಥಾ_ಪುಸ್ತಕದ_ಬೇತಾಳನ_ಪ್ರಶ್ನೆಗಳು.
Comments
Post a Comment