Blog number 1904.ಬೆತ್ತದ ಬುಟ್ಟಿಗೆ ಹೆಡಗೆ ಎಂಬ ಹೆಸರಿದೆ ಈ ಬಳ್ಳಿ ಗೆಣಸಿಗೆ ಹೆಡಗೆ ಗೆಣುಸು ಎಂಬ ಅನ್ವರ್ಥ ನಾಮವಿದೆ.
https://youtube.com/shorts/uY6XMSxdMe0?feature=shared
#ಹೆಡಗೆ_ಗೆಣೆಸು_ಎಂಬ_ಹೆಸರು_ಬಂದಿದ್ದಾದರೂ_ಹೇಗೆ
#ನಮ್ಮ_ಮನೆಯ_ಒಂದು_ಬಳ್ಳಿಯಲ್ಲಿ_ಒಂದು_ಬುಟ್ಟಿ_ತುಂಬಾ_ಈ_ಗೆಣಸು_ಸಿಕ್ಕಿದೆ
#ಮಳೆನೀರಿನ_ಆಶ್ರಯದಲ್ಲಿ_ಗೊಬ್ಬರ_ಔಷದಿ_ಇಲ್ಲದೆ_ಬರುವ_ಪಸಲು
#ಹೆಡಗೆ_ಅಂದರೆ_ಬೆತ್ತದ_ಬುಟ್ಟಿ
#ಒಂದು_ಬಳ್ಳಿಯಲ್ಲಿ_ಒಂದು_ಬುಟ್ಟಿ_ತುಂಬುವ_ಪ್ರಮಾಣದಲ್ಲಿ_ಗೆಣಸು_ಸಿಗುವುದರಿಂದ
#ಈ_ಗೆಣಸಿಗೆ_ಹೆಡಗೆ_ಗೆಣಸು_ಎಂಬ_ಹೆಸರು_ಬಂದಿದೆ.
#ಅದೇ_ತಳಿ_ಆದರೆ_ಗೆಣಸು_ತುಂಬುವ_ಬುಟ್ಟಿ_ಮಾತ್ರ_ಪ್ಲಾಸ್ಟಿಕ್_ಬುಟ್ಟಿ.
ಬೇಲಿ ಸಾಲಿನಲ್ಲಿ ಸಣ್ಣ ಜಾಗದಲ್ಲಿ ಮಣ್ಣಿನಲ್ಲಿ ಆಳವಾಗಿ ಬೆಳೆಯುವ ಈ ಬಳ್ಳಿ ಗೆಣಸಿಗೆ ಹೆಡಗೆ ಗೆಣಸು ಎಂದು ಕರೆಯುತ್ತಾರೆ ಯಾವ ಕಾಲದಿಂದ ಈ ಹೆಸರು ಬಂತೋ ಗೊತ್ತಿಲ್ಲ ಆದರೆ ಬೆತ್ತದ ಬುಟ್ಟಿಗೆ ಹೆಡಗೆ ಅನ್ನುತ್ತಾರೆ.
ಈ ಬಳ್ಳಿ ಗೆಣಸಿನ ಸುಗ್ಗಿ ಮಾಡಿದರೆ ಬುಟ್ಟಿ (ಹೆಡಗೆ) ತುಂಬಾ ಸಿಗುವುದು ಸತ್ಯ ಆದ್ದರಿಂದಲೇ ಇದಕ್ಕೆ ಅನ್ವರ್ಥನಾಮವಾಗಿ ಹೆಡಗೆ ಗೆಣಸು ಎಂಬುದು ಸೂಕ್ತವಾಗಿದೆ.
ಮಳೆಗಾಲದ ಮಳೆ ನೀರಿನ ಆಶ್ರಯದಲ್ಲಿ ಬೆಳೆಯುವ ಈ ಬಳ್ಳಿ ಗೆಣಸಿಗೆ ಗೊಬ್ಬರ ಔಷಧ ಬೇಕಾಗಿಲ್ಲ ಡಿಸೆಂಬರ್ ಜನವರಿ ತಿಂಗಳಲ್ಲಿ ಬಳ್ಳಿ ಒಣಗಿದಾಗ ಬುಡದ ಮಣ್ಣು ಗೆಣಸಿನ ತಳದ ತನಕ ಸುತ್ತಲೂ ಬಿಡಿಸುತ್ತಾರೆ ನಂತರ ಗೆಣಸಿನ ಬುಡದ ಸಣ್ಣ ತುಂಡು ಅಲ್ಲೇ ಬಿಟ್ಟು ಸ್ವಲ್ಪ ಮಣ್ಣು ಮುಚ್ಚಿ ಮೇಲೆ ಒಣ ಎಲೆ ಇತ್ಯಾದಿ ತೆಗೆದ ಮಣ್ಣಿನ ಜೊತೆ ಸೇರಿಸಿ ಈ ಗೆಣಸಿನ ಕುಣಿ ತಪ್ಪದೇ ಮುಚ್ಚುವ ಶಾಸ್ತ್ರ ಸಂಪ್ರದಾಯ ಇದೆ ಕಾರಣ ಮುಂದಿನ ವರ್ಷದ ಪಸಲು ಸಿಗಲಿ ಎಂಬುದು, ಮುಂಗಾರು ಮಳೆ ಬಿದ್ದಾಗ ಕುಣಿಯಲ್ಲಿ ಬಿಟ್ಟಿರುವ ಗೆಣಸಿನ ತುಂಡು ಮೊಳಕೆ ಬಂದು ಚಿಗುರಿ ಬಳ್ಳಿಯಾಗಿ ಬೆಳೆದು ಗೆಣಸಾಗುವ ಪರಿಸರದ ಚಕ್ರದ ಚಲನೆ ಇದು.
ಈ ಹೆಡಗೆ ಗೆಣಸಿನಿಂದ ಪಲ್ಯ - ಸಾಂಬಾರು ಇತ್ಯಾದಿ ತಯಾರಿಸುತ್ತಾರೆ ಇದರಲ್ಲಿ ಸ್ಟಾರ್ಚ್ ಜಾಸ್ತಿ ಆದ್ದರಿಂದ ಇದನ್ನು ಕುದಿಯುವ ನೀರಲ್ಲಿ ಹುಳಿ ಉಪ್ಪು ಹಾಕಿ ಬೇಯಿಸಿ ನಂತರ ಆ ನೀರನ್ನು ತೆಗೆದು ಅಡುಗೆ ಮಾಡುವ ಪದ್ದತಿ ಇದೆ.
Comments
Post a Comment