Blog number 1919. ಆನಂದಪುರಂನ ರಂಗನಾಥ ದೇವಾಲಯದಲ್ಲಿ ಗರುಡ ಗಂಭದ ಬುಡದಲ್ಲಿ 517 ವರ್ಷಗಳ ಹಿಂದೆ ಹೊಸಗುಂದ ಸೀಮೆಯ ನಾಯಕರು ದೇವರ ಹರಿವಾಣ ಸೇವೆಗೆ ಎರೆಡು ಗ್ರಾಮಗಳನ್ನು ದತ್ತಿ ನೀಡಿದ ಶಿಲಾ ಶಾಸನ.
#ಆನಂದಪುರಂನ_ರಂಗನಾಥ_ಸ್ವಾಮಿ_ದೇವಾಲಯಕ್ಕೆ_ಕ್ರಿ_ಶ_1507ರಲ್ಲಿ_ಹರಿವಾಣ_ಸೇವೆಗೆ
#ಆಗ_ಈ_ದೇವರು_ಕೋಯಿಪುರದ_ತಿರುವೆಂಗಲನಾಥ
#ನಂತರ_ಕೋದಂಡರಾಮ_ಟಿಪ್ಪು_ಸುಲ್ತಾನ್_ಆನಂದಪುರಂ_ಕೋಟೆಗೆ_ಬರುವ_ಹಿಂದಿನ_ದಿನ
#ರಂಗನಾಥನೆಂದು_ಮರು_ನಾಮಕರಣ
#ಎರೆಡು_ಗ್ರಾಮಗಳನ್ನು_ದತ್ತಿ_ಕೊಟ್ಟಿರುವ_ಶಿಲಾಶಾಸನ
#ಶಿಲಾಶಾಸನದಲ್ಲಿ_ದಾಖಲಾಗಿರುವ_ವಿವರ
#ಆನಂದಪುರಂ_ರಂಗನಾಥದೇವಾಲಯದ_ಗರುಡಗಂಭದಲ್ಲಿ_ಉಲ್ಲೇಖ_ಆಗಿರುವುದು.
#ದೇವಾಲಯದ_ನವೀಕರಣದಲ್ಲಿ_ಶಿಲಾಶಾಸನ_ಸ್ಥಳಾಂತರವಾಗಿದೆ
#ಈ_ಶಿಲಾಶಾಸನದ_ಪಕ್ಕದಲ್ಲಿ_ಕಾಲಮಾನ_ಮಹತ್ವ_ಮತ್ತು_ಅದರಲ್ಲಿನ_ಉಲ್ಲೇಖ_ಕನ್ನಡದಲ್ಲಿ_ಮಾಹಿತಿ_ಪಲಕ_ಇಡಬೇಕು.
#ಈ_ಶಿಲಾಶಾಸನದ_ಸಂರಕ್ಷಣೆಗೆ_ಹೆಚ್ಚಿನ_ಒತ್ತು_ನೀಡಬೇಕು.
ಸ್ಥಳಿಯ ಇತಿಹಾಸ ಆಸಕ್ತರು ನಮ್ಮ #ಆನಂದಪುರಂನ_ರಂಗನಾಥ ದೇವಾಲಯದ ಬಗ್ಗೆ ಮಾಹಿತಿ ಕೇಳಿದ್ದಾರೆ ಅವರಿಗಾಗಿ ಈ ಮಾಹಿತಿ ಮತ್ತು ಇದು ಸದ್ಯದಲ್ಲೇ_ಬಿಡುಗಡೆ_ಆಗಲಿರುವ ನನ್ನ #ಆನಂದಪುರಂ_ಇತಿಹಾಸ ಪುಸ್ತಕದಲ್ಲಿ ದಾಖಲು ಆಗಿದೆ.
1) ಎಪಿಗ್ರಾಪಿಯ ಕ್ರ.ಸಂ. 107,ಕಾಲಮಾನ ಕ್ರಿ.ಶ.1507AD ಆನಂದಪುರಂನ ರಂಗನಾಥ ದೇವಸ್ಥಾನದ ಪ್ರಕಾರದಲ್ಲಿರುವ ಗರುಡ ಗಂಬದ ಕೆಳಗಿನ ಶಿಲಾಶಾಸನ.
ಈ ಗರುಡಗಂಭ 3.5 ಅಡಿ ಎತ್ತರ ಮತ್ತು 2 ಅಡಿ ಅಗಲ ಇದೆ, 18 ಸಾಲಿನಲ್ಲಿ ಅಕ್ಷರಗಳಿದೆ.
ಒಂದು ಕಾಲದಲ್ಲಿ ಶ್ರೀ ರಂಗನಾಥ ದೇವಾಲಯದ ಒಳ ಆವರಣದಲ್ಲಿ ದೇವಾಲಯದ ದ್ವಜ ಸ್ಥಂಭದ ಕೆಳಬಾಗದಲ್ಲಿದ್ದ ಗರುಡಗಂಭದಲ್ಲಿ ಗರುಡನ ಶಿಲ್ಪವು ಆಕರ್ಷವಾಗಿದ್ದು ಒಂದು ಕೈಯಲ್ಲಿ ಸರ್ಪವಿದೆ.
ಕಾಲ ಕಾಲಕ್ಕೆ ದೇವಾಲಯದ ನವೀಕರಣ ಕಾಲದಲ್ಲಿ ಸ್ಥಳ ಬದಲಾಗಿ ಈಗ ದೇವಸ್ಥಾನದ ಮು೦ಬಾಗದ ಗೋಡೆಯ ಎಡಭಾಗದಲ್ಲಿ ಸುರಕ್ಷಿತವಾಗಿ ರಕ್ಷಿಸಿಡಲಾಗಿದೆ.
ಕ್ರಿ.ಶ.1507 AD ಕಾಲ ಮಾನದ ಈ ಗರುಡ ಸ್ಥಂಭಕ್ಕೆ ಈಗ 517 ವರ್ಷಗಳಾಗಿದೆ.
517 ವರ್ಷಗಳ ಹಿಂದಿನ ಅಂದರೆ 5 ಶತಮಾನದ ಈ ಶಿಲಾ ಶಾಸನ ತುಂಬಾ ಮಹತ್ವದ್ದಾಗಿದೆ ಮತ್ತು ಮುಂದಿನ ದಿನದಲ್ಲಿ ಈ ಶಿಲಾ ಶಾಸನ ಅತ್ಯಂತ ಜಾಗೃತಿಯಿಂದ ಮುಂದಿನ ತಲೆಮಾರಿಗಾಗಿ ಸಂರಕ್ಷಿಸಬೇಕಾಗಿದೆ.
ಈ ಶಿಲಾ ಶಾಸನದ ಮಹತ್ವ, ಕಾಲ ಮಾನ ಮತ್ತು ಇದರಲ್ಲಿ ಉಲ್ಲೇಖಿಸಿರುವ ವಿಷಯ ಕನ್ನಡ ಬಾಷೆಯಲ್ಲಿ ಬರೆದ ಮಾಹಿತಿ ಪಲಕ ಈ ಶಿಲಾ ಶಾಸನದ ಪಕ್ಕದಲ್ಲಿ ಸ್ಥಾಪಿಸಿದರೆ ದೇವಾಲಯಕ್ಕೆ ಬರುವ ಭಕ್ತರಿಗೆ ಶಿಲಾಶಾಸನದ ಮಾಹಿತಿ ದೊರೆಯುತ್ತದೆ.
ಇದರಲ್ಲಿ ಕಾಲಮಾನ ದಾಖಲೆ ಉಲ್ಲೇಖದ ಮತ್ತು ದಾನ ನೀಡುವವರ ಬಗ್ಗೆ ಸ್ಥಳದ ಬಗ್ಗೆಯ ಮಾಹಿತಿಯ ಜೊತೆ ಉಲ್ಲೇಖಿಸಿರುವ ವಿಚಾರ
" ಬೆಯಕೊಪ್ಪ ಕಲ್ಲಪ್ಪ ನಾಯಕನ ಪುತ್ರ ಚಿಕ್ಕಣ್ಣ ನಾಯಕ ತನ್ನ ಮನೆ ವರ ದೇವರಾದ ಸ್ವಸ್ತಿಶ್ರೀ ಜಯಂತಿಪುರ ವರದಿಶ್ವರ ಶ್ರೀ ಮಹಾಲಕ್ಷ್ಮಿ - ಕುಚಕುಂಕುಮ ಲೋಲಾ .. ಕೋಯಿಪುರದ ತಿರುವೆಂಗಲನಾಥನ ಹರಿವಾಣ ನೈವೇದ್ಯಕ್ಕೆ ತಮ್ಮ ನಾಯಕ ತನಕೆ ಸಲ್ಲುವ ತಮ್ಮ ಹೊಸಗುಂದ ಸೀಮೆಯೊಳಗಿನ ಕೋಟಿ ಶೆಟ್ಟಿ ಕೊಪ್ಪ ..... ನೋಗೂಟಪುರವನ್ನು.. ಕಾಲ ಕಾಲಮ್ ಪ್ರತಿ ಸ್ವಾಮಿಯ ಅಂಗ - ರಂಗ-ಬೋಗಾಂಗ ನೈವೇಧ್ಯಕ್ಕೆ ಸಲಿಸಿ ಸ್ವಾಮಿಯ .... ವನು ಕೊಂಡು ಕೃತಾರ್ಥರ ಆಹುದೆಂದು ಬಿಟ್ಟ ಪುರ"
ಎಂದಿದೆ.
ಈ ಶಿಲಾಶಾಸನದಲ್ಲಿ ರಂಗನಾಥ ದೇವರ ಹೆಸರು ಆ ಕಾಲದಲ್ಲಿ ತಿರುವೆಂಗಲನಾಥ ಎಂದು ಈ ದೇವಾಲಯದ ಪ್ರದೇಶದ ಹೆಸರು ಕೊಯಿಪುರ ಅಂತಿದೆ.
Comments
Post a Comment