#ಸ್ವರ್ಗದ_ಬಾಗಿಲು_ಎಲ್ಲಿದೆ?
#ನಾವಿದ್ದಲ್ಲೇ_ಸ್ವರ್ಗ_ಸೃಷ್ಟಿ_ಮಾಡಿಕೊಳ್ಳ_ಬಹುದು
#ಹಾಗೇ_ನರಕ_ಸೃಷ್ಟಿಯೂ_ಕೂಡ
#ನಿತ್ಯ_ಏಳು_ಸಾವಿರ_ಹೆಜ್ಜೆಯ_ವಾಕಿಂಗ್
#ಮೂರು_ವರ್ಷದ_ನಿರಂತರ_ಸ್ವಪ್ರಯೋಗ
#ಮನೆ_ಎದುರಿನ_ಹತ್ತು_ಹೆಜ್ಜೆಯ_ಜಾಗವೇ_ಸಾಕು.
ನನ್ನ ವಾಕಿಂಗ್ ನೋಡಿದ ನಮ್ಮ ಲಾಡ್ಜ್ ಲ್ಲಿ ತಂಗಿದ್ದ ಸಿನಿಮಾ ನಿರ್ದೇಶಕ ಗೆಳೆಯರು " ನೀವಿದ್ದಲ್ಲೇ ಸ್ಪರ್ಗ ಸೃಷ್ಟಿಸಿಕೊಂಡಿದ್ದೀರಿ" ಅಂದರು ನನಗೆ ಅರ್ಥವಾಗಲಿಲ್ಲ ಅವಾಗ ಅವರೇ ನೆನಪಿಸಿದ್ದು ನನ್ನದೇ ಡೈಲಾಗ್ "ನಾವಿದ್ದಲ್ಲೇ ಸ್ವರ್ಗ ಸೃಷ್ಟಿಸಿ ಕೊಳ್ಳಬೇಕು" ಅವರು ನನ್ನ ನಿತ್ಯದ ಲೇಖನ ಓದುವವರು.
ಬೆಳಿಗ್ಗೆ ಒಂದು ಗಂಟೆಯ 5000 ಹೆಜ್ಜೆಗಳಿಗೆ ಸಾಥ್ ನೀಡುವವ ನನ್ನ ಪ್ರೀತಿಯ ಶಂಭೂರಾಮ ಎಂಬ ರಾಟ್ ವೀಲರ್ ಸಂಜೆಯ 2500 ರಿಂದ 3000 ಹೆಜ್ಜೆಗೆ ಮಗಳು ಬೀದಿಯಿಂದ ತಂದು ಸಾಕಿ ನಮಗೆ ಬಿಟ್ಟು ಹೋದ ಜಾನ್ಸಿ ಮತ್ತು ಅವಳ ಮಗಳು ಕಾಳು.
ಅವರು ಹೇಳಿದ್ದು ಸತ್ಯ ನಾನು ನನ್ನ ಜೀವನದ ಪರಿಸ್ಥಿತಿ ಮತ್ತು ಪರಿದಿಯಲ್ಲಿ ಸಂತೃಪ್ತ ಧನಾತ್ಮಕವಾಗಿ ಜೀವನ ಸಾಗಿಸಲು ನನ್ನ ಖಾಸಾಗಿ ಜೀವನದಲ್ಲಿ ಚೌಕಟ್ಟು ಹಾಕಿ ಕೊಂಡಿದ್ದೇನೆ.
ನಿತ್ಯ ವಾಕಿಂಗ್ ಮಾಡಲು ಟ್ರೆಡ್ ಮಿಲ್ ಖರೀದಿಸುವ ಆಸೆ ಇತ್ತು, ಪಂಜಾಬ್ ನ ಜಲಂದರ್ ಗೆ ಹೋಗಿದ್ದಾಗ ಅಲ್ಲಿನ ಟ್ರೆಡ್ ಮಿಲ್ ಉತ್ಪಾದಕರಿಂದ ಹಿರಿಯ ಗೆಳೆಯರಾದ ಅಬಕಾರಿ ಗುತ್ತಿಗೆದಾರರಾದ ನಾರಾಯಣ ರಾವ್ ಅವರಿಗೆ ಟ್ರೆಡ್ ಮಿಲ್ ಖರೀದಿಸಿದ್ದೆವು.
ನನ್ನ ಸಣ್ಣಕ್ಕನ ಮನೆಯಲ್ಲಿ ಟ್ರೆಡ್ ಮಿಲ್ ಇದೆ, ಅನೇಕ ಗೆಳೆಯರು ಖರೀದಿಸಿದ್ದಾರೆ ಆದರೆ ಅವರಾರು ಬಳಸುತ್ತಿಲ್ಲ.
ನನ್ನ ಮೂರು ವರ್ಷದ ಹಿಂದಿನ 140 ಕೇಜಿ ತೂಗುವ ನನ್ನ ದೇಹದ ತೂಕಕ್ಕೆ ಬೇಕಾದ ಟ್ರೆಡ್ ಮಿಲ್ ಬೆಲೆ ಹತ್ತಿರ ಹತ್ತಿರ ಒಂದರಿಂದ ಒಂದೂವರೆ ಲಕ್ಷ ಆದ್ದರಿಂದಲೇ ನಾನು ಈ ಮೊತ್ತದ ಹಣದಲ್ಲಿ ಪೇವರ್ಸ್ ಹಾಕಿಸಿ ನನ್ನದೇ ಖಾಸಾಗಿ ವಾಕಿಂಗ್ ಟ್ರಾಕ್ ನಿರ್ಮಿಸಿಕೊಂಡಿದ್ದೇನೆ.
ವಾಕಿಂಗ್ ಟ್ರಾಕ್ ಎರಡೂ ಬದಿಯಲ್ಲಿ ಹೂವಿನ ಗಿಡಗಳ ಪಾಟ್ ಇಟ್ಟಿದ್ದೇನೆ ಶಂಭೂರಾಮ, ಜಾನ್ಸಿ , ಕಾಳು ಎಂಬ ನಂಬಿಕೆಯ ಸಾಕು ಪ್ರಾಣಿಗಳ ಜೊತೆ 7000 ಹೆಜ್ಜೆಯ ಗುರಿಯ ವಾಕಿಂಗ್ ಮತ್ತು ಗಾರ್ಡನ್ ಗಿಡಗಳಿಗೆ ನಿತ್ಯ ನೀರುಣಿಸುವ ನಿರಂತರ ಮೂರು ವರ್ಷದ ಸಾಧನೆ ನನಗೆ ನೆಮ್ಮದಿ ಆರೋಗ್ಯದ ಸ್ವರ್ಗ ಸುಖ ನೀಡಿದೆ, ತೂಕ ಸುಮಾರು 35 ಕಿಲೋ ಇಳಿದಿದೆ, ಬಿಪಿ ನಾರ್ಮಲ್ ಆಗಿದೆ, ಡಯಾಬಿಟೀಸ್ ರಿವರ್ಸಲ್ ಹಾದಿಯಲ್ಲಿ ಇದೆ ಇದನ್ನೇ ನಾನು ಹೇಳುವ ನಮಗೆ ನಾವೇ ಸೃಷ್ಟಿ ಮಾಡಿಕೊಳ್ಳುವ #ಸ್ವಗ೯.
ಇದರ ವಿರುದ್ದ ದಿಕ್ಕಿನ ದುರಾಸೆಗೆ, ನಕಾರಾತ್ಮಕ ಚಿಂತನೆಗೆ, ಅಮಲು ಪದಾರ್ಥಗಳ ದಾಸರಾದರೆ, ದ್ವೇಷ ಸಾಧನೆಗೆ, ಪರ ನಿಂದನೆಗೆ, ಹೊಟ್ಟೆಕಿಚ್ಚು, ಹಣದ ದಾಹಕ್ಕೆ ದಾಸರಾದರೆ... ನರಕವೂ ಸೃಷ್ಠಿ ಆಗುತ್ತದೆ.
ನಿತ್ಯ ವಾಕಿಂಗ್ ಬಗ್ಗೆ ಅನೇಕರ ಅನೇಕ ರೀತಿಯ ಅಭ್ಯಾಸಗಳಿದೆ ಆದರೆ ನನಗೆ ಮನೆಯಿಂದ ಹೊರ ಹೋಗಿ ವಾಕಿಂಗ್ ಮಾಡಲು ಮೊದಲಿಂದಲೂ ಇಷ್ಟ ಇಲ್ಲ.
ವಾಕಿಂಗ್ ಸಮಯದಲ್ಲಿ ದಾರಿಯಲ್ಲಿ ಎದುರಾಗುವ ಕೆಲವರು ಅವರ ಸಮಸ್ಯೆ ಹೇಳುತ್ತಾ ಇರುತ್ತಾರೆ ಇದರಿಂದ ನಿತ್ಯ ವಾಕಿಂಗ್ ಗೆ ತಡೆ ಆಗುವುದು ಒ0ದು ಕಾರಣ, ಇನ್ನೊಂದು ಬೆಳಗಿನ ರಸ್ತೆಗಳು ಪಾದಚಾರಿಗಳಿಗೆ ಸುರಕ್ಷಿತವೂ ಅಲ್ಲ.
ಇದರಿಂದ ಮನೆ ಎದುರಿನ 10 ಹೆಜ್ಜೆ ಹಾಕುವ ಪಾರ್ಕಿಂಗ್ ಜಾಗದಲ್ಲೇ ವಾಕಿಂಗ್ ಮಾಡುತ್ತಿದ್ದೆ,ಈಗ ಮನೆ ಹಿಂಬಾಗದಲ್ಲಿನ ಓಣಿಯಲ್ಲಿ ಪೇವಸ್೯ ಅಳವಡಿಸಿದ್ದರಿಂದ ಅಲ್ಲಿ 25 ಹೆಜ್ಜೆ ಹಾಕುವಷ್ಟು ಆಯಿತು, ಅಲ್ಲಿ ಸಣ್ಣ ಸಣ್ಣ ಪಾಟ್ ಗಳಿಟ್ಟು ಸಣ್ಣ ಗಾರ್ಡನ್ ಮಾಡಿ ಅದರ ಮಧ್ಯ ಬೆಳಿಗ್ಗೆ ಒಂದು ಗಂಟೆ ಅವಧಿ ವಾಕಿಂಗ್ 5000 ಹೆಜ್ಜೆ ಮತ್ತು ಸಂಜೆ ಅರ್ದ ಗಂಟೆ ಅವಧಿ ವಾಕಿಂಗ್ 2500 ಹೆಜ್ಜೆ ಅಂದರೆ ಪ್ರತಿ ನಿತ್ಯ 7 ರಿಂದ 8 ಸಾವಿರ ಹೆಜ್ಜೆ ಪೂರೈಸುತ್ತೇನೆ.
ಒಟ್ಟು ದಿನಕ್ಕೆ 7000 ಹೆಜ್ಜೆ ಅಂದರೆ 5 ರಿಂದ 6 ಕಿ.ಮಿ. ಆಗುತ್ತದೆ, 3000 ಹೆಜ್ಜೆಗೆ 30 ನಿಮಿಷ ಬೇಕು, 1300 ರಿಂದ 1500 ಹೆಜ್ಜೆಗೆ 1 ಕಿ.ಮಿ. ಆಗುತ್ತೆ ಆದ್ದರಿಂದ ವಾಕಿಂಗ್ ಮಾಡಲು ಉದ್ಯಾನವನ ಅಥವ ಹೆದ್ದಾರಿ ಹುಡುಕಿ ಹೋಗಬೇಕಾಗಿಲ್ಲ.
7000 ಹೆಜ್ಜೆಯ ವಾಕಿಂಗ್ ಅನುಕೂಲದ ಬಗ್ಗೆ ಸಂಶೋದನೆ ಮಾಡಿದ ಯುನಿವರ್ಸಿಟಿ ಆಫ್ ಮೆಸ್ಸಾಚ್ಯೂಟ್ಸ್ ಆಮ್ಸ್ಟೆ ಯ ಸಂಶೋದಕ ಆಮಾಂಡ್ ಪಲೂಚರ ಪ್ರಯೋಗಕ್ಕೆ ವಿಶ್ವದಾದ್ಯಂತ ಪ್ರಶಂಸೆಗಳಿದೆ.
ನಾನು ಇದನ್ನು ಅಳವಡಿಸಿ ಕೊಂಡು ಹತ್ತಿರ ಹತ್ತಿರ ಮೂರು ವರ್ಷ ಆಯಿತು, ನನಗೆ ಇದರಿಂದ ಅನೇಕ ಅನುಕೂಲ ಆಗಿದೆ, ವಿಶೇಷವಾಗಿ ತೂಕ ಇಳಿದದ್ದು, ಶುಗರ್ ನಾರ್ಮಲ್ ಆಗಿದ್ದು ಜೊತೆಗೆ ಲವಲವಿಕೆ.
ಒಂದು ಹೊತ್ತು ಅಥವ ಕೆಲವೊಮ್ಮೆ ಒ0ದರೆಡು ದಿನ ವಾಕಿಂಗ್ ಮಾಡಲಾಗದಿದ್ದರೂ ತೊಂದರೆ ಇಲ್ಲ ಆದರೆ ವಾಕಿಂಗ್ ಸಂಪೂರ್ಣ ತ್ಯಜಿಸಬೇಡಿ.
ಇದು ಸ್ಥೂಲಕಾಯದ ಸ್ತ್ರಿಯರಿಗೂ ವರದಾನ ಆದ್ದರಿಂದ ನಮ್ಮ ಆರೋಗ್ಯಕ್ಕಾಗಿ ಕನಿಷ್ಟ ಇದನ್ನು ಅಳವಡಿಸಿಕೊಳ್ಳಬಹುದು.
Comments
Post a Comment