#ನಿನ್ನೆ_ಸಂಜೆ_ಲಾಡ್ಜ್_ಆಫೀಸ್_ತಲುಪಿದಾಗ.
#ಜರ್ಮನ್_ಅತಿಥಿ_ನಿಮ್ಮನ್ನು_ಕೇಳಿದರು_ರೂಂನಲ್ಲಿ_ಇದ್ದಾರೆ_ಅಂತ_ಸಿಬ್ಬಂದಿ_ಮಾಹಿತಿ
#ಅವರ_ಹೆಸರೇನು_ಎ೦ದೆ_Hopker_Edgar_ಅಂದಾಗ_ಗೊತ್ತಾಯಿತು
#ಅವರು_ಜರ್ಮನ್_ದೇಶದ_ಶಿಲ್ಪ_ಕಲಾವಿದ_ವಿನ್ಸಿ
https://youtu.be/c6QYpznBMyE?feature=shared
ಜರ್ಮನ್ ದೇಶದ ಶಿಲ್ಪ ಕಲಾವಿದ ವಿನ್ಸಿ ಅವರ ನಿಜ ನಾಮಧೇಯ ಹಾಪ್ ಕರ್ ಎಡ್ಗರ್ ಅವರ ಭಾರತ ಯಾತ್ರೆ 16ನೇ ಬಾರಿಯದ್ದು ಅದೂ ದಕ್ಷಿಣ ಭಾರತ ಮಾತ್ರ ಅವರ ಆಯ್ಕೆ.
ಇವರು ಜರ್ಮನ್ ಮತ್ತು ಫ್ರಾನ್ಸ್ ದೇಶದ ಅಂಚಿನ ನಿವಾಸಿಗಳು ಅಲ್ಲಿ ಸ್ನೋ ಪಾಲ್, ಮಂಜು ಮಳೆಯಿಂದ ಸೂರ್ಯನ ದರ್ಶನ ಅಪರೂಪ ಅವರಿಗೆ ಅವರ ಕೈಗಳು ದೇಹದಲ್ಲಿ ವಿಪರೀತ ನೋವು ಇರುವ ಕಾಯಿಲೆ ಇದು ಭಾರತದ ಅದರಲ್ಲೂ ದಕ್ಷಿಣ ಭಾರತದ ಗೋವಾ - ಕರ್ನಾಟಕ - ತಮಿಳುನಾಡು ಪ್ರವಾಸದಿಂದ ಈ ನೋವು ಮಾಯವಾಗುವುದರಿಂದ ಪ್ರತಿ ವರ್ಷ ಭಾರತದ ಪ್ರವಾಸ ಮಾಡುತ್ತಾರೆ.
ಐದು ಬಾರಿ ನಮ್ಮಲ್ಲಿ ಅತಿಥಿಗಳಾಗಿದ್ದರು ಇವರ ಗೆಳೆಯನಿಗೆ ನಮ್ಮ #ಚಂಪಕಾ_ಪ್ಯಾರಡೈಸ್_ನಾನ್_ವೆಜ್ ರೆಸ್ಟೋರೆಂಟ್ ನ #ಮಟ್ಕಾ_ದಮ್_ಬಿರಿಯಾನಿ ಇಷ್ಟ ಈ ಬಾರಿ ಇವರ ಗೆಳೆಯ ಭಾರತ ಪ್ರವಾಸ ಕೊನೆಯ ಕ್ಷಣದಲ್ಲಿ ಥ್ಯೆಲಾಂಡ್ ಆಯ್ಕೆ ಮಾಡಿಕೊಂಡಿದ್ದಾರೆ ಕಾರಣ ಅಲ್ಲಿ ದೂಮಪಾನಕ್ಕೆ ಭಾರತದಂತೆ ನಿರ್ಬಂದ ಇಲ್ಲವಂತೆ.
ವಿನ್ಸಿ ಗೆ ಹೃದಯಾಘಾತ ಆಗಿತ್ತಂತೆ ಕಳೆದ ವರ್ಷ, ಕಳೆದ ವರ್ಷ ರಾಜಸ್ತಾನದಲ್ಲಿ ಕಾಂಟ್ರಾಕ್ಟ್ ಅಗ್ರಿಮೆಂಟ್ ನಲ್ಲಿ ಖರೀದಿಸಿದ ರಾಯಲ್ ಎನ್ಫೀಲ್ಡ್ ಬೈಕ್ ಗೋಕರ್ಣದಲ್ಲಿ ಕಳ್ಳತನವಾಗಿ ನಂತರ ಪೋಲಿಸರು ಪತ್ತೆ ಮಾಡಿದರಂತೆ ನಂತರ ಅದನ್ನು ನ್ಯಾಯಾಲಯದಲ್ಲಿ ಬಿಡಿಸಿಕೊಂಡಿದ್ದ ಕಥೆ ಹೇಳಿದರು.
ನಮ್ಮಲಿಂದ ಶಿವಮೊಗ್ಗದ ರಾಯಲ್ ಎನ್ಫೀಲ್ಡ್ ಶೋ ರೂಂ ನಲ್ಲಿ ಸರ್ವಿಸ್ ಮಾಡಿಸಿ ಬೆಂಗಳೂರು ಮೈಸೂರು ಮೂಲಕ ತಮಿಳುನಾಡಿನ ಮಹಬಲಿಪುರಂ ತಲುಪಿ ಅಲ್ಲಿಂದ ಫೆಬ್ರುವರಿ 25 ಕ್ಕೆ ಜರ್ಮನ್ ಗೆ ಹಾರಲಿದ್ದಾರೆ.
ನನ್ನ ಆಫೀಸಿನಲ್ಲಿ ನಮ್ಮ ಮಲ್ಲಿಕಾ ವೆಜ್ ನ ಮಸಾಲೆ ದೋಸೆ ಮತ್ತು ಚಹಾದ ನನ್ನ ಅತಿಥ್ಯ ಸ್ವೀಕರಿಸಿದರು ಬೆಳಿಗ್ಗೆ ಉಪಮ ಕೇಸರಿ ಬಾತ್ ಮತ್ತು ಚಹಾ ಕಾಂಪ್ಲಿಮೆಂಟರಿ ಟಿಪನ್ ವಿದೇಶಿ ಅತಿಥಿಗಾಗಿ ನೀಡಲಾಯಿತು.
ಅವರು ಬಳಸುವ ಸಿಗರೇಟು ನೋಡಿದೆ ಸೆಲ್ಫ್ ಮೇಡ್ ಸಿಗರೇಟು ಇದು ಉತ್ಕೃಷ್ಟ ದರ್ಜೆಯ ಯುರೋಪಿನ ತಂಬಾಕು ಈ ದಿಡೀರ್ ಸಿಗರೇಟು ಮಾಡುವ ಫಿಲ್ಟರ್ ಇರುವ ಪೇಪರ್ ಒಳಗೆ ಸುತ್ತಿ ರೋಲ್ ಮಾಡಿ ಈ ಪೇಪರ್ ನಲ್ಲಿರುವ ಅಂಟಿಗೆ ಒತ್ತಿದರೆ ಸಿಗರೇಟು ರೆಡಿ.
Comments
Post a Comment