#ಇವತ್ತಿನ_ನನ್ನ_ಅತಿಥಿ_ಪರಿಸರ_ಹೋರಾಟಗಾರ_ಲೇಖಕ
#ಅಖಿಲೇಶ್_ಚಿಪ್ಪಳಿ_ದಂಪತಿಗಳು
#ಶಿಕಾರಿಪುರದ_ಗಾಮದಲ್ಲಿ_ಕಾಯ೯ಕ್ರಮದ_ಅತಿಥಿಗಳಾಗಿ_ಹೋಗುವ_ಮಾರ್ಗ_ಮಧ್ಯ
#ನನ್ನ_ಕಛೇರಿಗೆ_ಬಂದಿದ್ದರು.
#ಶರಾವತಿ_ನದಿ_ನೀರು_ಲಿಂಗನಮಕ್ಕಿ_ಡ್ಯಾಂನಿಂದ_ಬೆಂಗಳೂರಿಗೆ_ಹರಿಸುವ_ಯೋಜನೆ_ವಿರೋದಿ_ಹೋರಾಟದ_ಮುಂಚೂಣಿಯಲ್ಲಿದ್ದವರು
#ಆಗಿನ_ಮುಖ್ಯಮಂತ್ರಿ_ಯಡೂರಪ್ಪ_ಜಿಲ್ಲೆಯ_ಜನರ_ವಿರೋದಕ್ಕೆ_ಗೌರವಿಸಿ_ಯೋಜನೆ_ವಾಪಾಸು_ಪಡೆದಿದ್ದರು.
#ಈಗಿನ_ಕಾಂಗ್ರೇಸ್_ಸರ್ಕಾರ_ಪುನಃ_ಈ_ಯೋಜನೆ_ಜಾರಿಗೆ_ಮುಂದಾಗಿದೆ
ಅಖಿಲೇಶ್ ಚಿಪ್ಪಳಿ ಪರಿಸರ ಹೋರಾಟಗಾರರು ಮತ್ತು ಲೇಖಕರಾಗಿ ನಾಡಿನಾದ್ಯಂತ ಪ್ರಖ್ಯಾತರಾಗಿದ್ದಾರೆ. ಇವರು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಬರೆಯುವ ಅಂಕಣಗಳು ಹೆಚ್ಚು ಪ್ರಸಿದ್ಧಿ ಪಡೆದಿದೆ ಮತ್ತು ಇವರಿಗೆ ಅಪಾರ ಪರಿಸರ ಸ್ನೇಹಿ ಅಭಿಮಾನಿ ವರ್ಗ ಸೃಷ್ಟಿ ಆಗಿದೆ.
ಇವತ್ತು ಅಖಿಲೇಶ್ ಚಿಪ್ಪಳಿಯವರನ್ನು ಶಿಕಾರಿಪುರದ ಗಾಮಾ ಎಂಬ ಊರಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸಿದ್ದಾರೆ, ವಿಶೇಷ ಎಂದರೆ ಈ ಕಾರ್ಯಕ್ರಮದ ವೇದಿಕೆಗೆ ಇತ್ತೀಚಿಗೆ ಕಾಡಾನೆ ದಾಳಿಗೆ ಬಲಿಯಾದ ನಾಡಿನ ಪ್ರಖ್ಯಾತ ಅಂಬಾರಿ ಆನೆ #ಅರ್ಜುನ ನ ನಾಮಕರಣ ಮಾಡಿದ್ದಾರೆ ಗಾಮ ಊರಿನ ಪರಿಸರಾಸಕ್ತ ಯುವಕರು.
ಅಲ್ಲಿ ಅಖಿಲೇಶ್ ಚಿಪ್ಪಳಿ ಅಂಬಾರಿ ಆನೆ ಬಲಿಯಾದ ಕಾರಣ, ಪರಿಸರದ ವೈಪರಿತ್ಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಜೊತೆಯಲ್ಲಿ ಅವರ ಪತ್ನಿ ಕೂಡ ಹೋಗುತ್ತಿದ್ದಾರೆ.
ಮೊನ್ನೆ ಶಿವಮೊಗ್ಗದಲ್ಲಿನ ಕರ್ನಾಟಕ ಸಂಘದಲ್ಲಿ ನಡೆದ ನಾ.ಡಿಸೋಜರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಸಮಾರಂಭಕ್ಕೆ ಹೋಗುವಾಗ ನಮ್ಮಲ್ಲಿಗೆ ಬಂದಿದ್ದರಂತೆ ನಾನು ಇರಲಿಲ್ಲ ಆದ್ದರಿಂದ ನಮ್ಮಿಬ್ಬರ ಬೇಟಿ ಸಾಧ್ಯವಾಗಲಿಲ್ಲ ಇವತ್ತು ನನ್ನ ಬೇಟಿ ಮಾಡಿಯೇ ಹೋಗುವ ತೀಮಾ೯ನದಿಂದ ಬಂದೆ ಅಂದರು , ಇವರ ಆಗಮನ ನನಗೆ ತುಂಬಾ ಇಷ್ಟವಾಯಿತು.
ಸಾಗರದ ಖ್ಯಾತ ಸ್ಪಂದನ ನರ್ಸಿಂಗ್ ಹೋಂನಲ್ಲಿ ಅಖಿಲೇಶ್ ಚಿಪ್ಪಳಿ ಪಿಸಿಯೋ ಥೆರಪಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ನನ್ನ ಪತ್ನಿಗೆ ಇವರು ಚಿಕಿತ್ಸೆ ನೀಡಿದವರು.
ಪರಿಸರದ ಬಗ್ಗೆ, ವನ್ಯಜೀವಿಗಳ ಬಗ್ಗೆ ಅಖಿಲೇಶರದ್ದು ರಾಜಿ ಇಲ್ಲದ ಇವರ ಕಠೋರ ಮಾತುಗಳು ಮತ್ತು ಲೇಖನಗಳಿಂದ ನಷ್ಟ ಪಡುವ ಮಾಫಿಯಾದ ಫಲಾನುಭವಿಗಳಿಗೆ ಅಖಿಲೇಶ್ ಚಿಪ್ಪಳಿ ಅಂದರೆ ಆಗುವುದಿಲ್ಲ ಮತ್ತು ಇವರೆಂದರೆ ಭಯ ಇದೆ.
ಇವರು ಮಾತಿನಲ್ಲಿ ಬರಹದಲ್ಲಿ ಮಾತ್ರ ಆದರ್ಶವಾದಿ, ಪರಿಸರವಾದಿಯಲ್ಲ ಇವರ ವೈಯಕ್ತಿಕ ಜೀವನ ಕೂಡ, ಇವರ ತಂದೆಯವರು ತಮ್ಮ ದೇಹ ಆಸ್ಪತ್ರೆಗೆ ಸಮರ್ಪಿಸಿ ಕೊಂಡವರು, ಇವರು ಕೆರೆಗಳ ಪುನಶ್ಚೇತನ ಮಾಡಿದ್ದಾರೆ, ಸಾಗರ ತಾಲೂಕಿನಲ್ಲೇ ನೈಸರ್ಗಿಕ ಅರಣ್ಯ ಬೆಳೆಸಿದ್ದಾರೆ, ಸರ್ಕಾರದ ಯೋಜನೆಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಸಂದರ್ಭದಲ್ಲಿ ಅದರ ಬಗ್ಗೆ ಹೋರಾಟ ರೂಪಿಸಿದವರು, ಶರಾವತಿ ನದಿ ನೀರು ಬೆಂಗಳೂರು ನಗರಕ್ಕೆ ಕುಡಿಯುವ ನೀರಾಗಿ ಬಳಸಲು ಒಯ್ಯುವ ರಾಜ್ಯ ಸರ್ಕಾರದ ಯೋಜನೆ ಪರಿಸರ ನಾಶಕ್ಕೆ ಕಾರಣ ಎಂದು ಅದನ್ನು ರದ್ದು ಮಾಡಲು ಶಿವಮೊಗ್ಗ ಜಿಲ್ಲೆಯ ಬಂದ್ ಆಚರಣೆ ಮತ್ತು ಪ್ರತಿಭಟನೆಗಳಿಗೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಮಣಿದು ಶರಾವತಿ ನೀರು ಬೆಂಗಳೂರು ನಗರಕ್ಕೆ ಒಯ್ಯುವ ಯೋಜನೆ ವಾಪಾಸು ಪಡೆದಿದ್ದರು.
ಏಕಾಂಗಿ ಆಗಿ ಎಸ್.ಆರ್.ಹಿರೇಮಠರ ರೀತಿ ಜನ ಜಾಗೃತಿ ಮೂಲಕ ನ್ಯಾಯಾಂಗದ ಮೂಲಕ ಪರಿಸರ ಹೋರಾಟ ಮಾಡುತ್ತಿರುವ ಅಖಿಲೇಶ್ ಚಿಪ್ಪಳಿ ದಂಪತಿಗಳ ಜೊತೆ ಸಂಜೆಯ ಕಾಫಿ ಜೊತೆ ಅನೇಕ ವಿಚಾರ ಮಾತಾಡಿದೆವು.
ಅವರಿಗೆ ನಾನು ಬರೆದ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಮತ್ತು ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ಹಾಗೂ ಹೊಸ ವರ್ಷದ ಟೇಬಲ್ ಕ್ಯಾಲೆಂಡರ್ ನೀಡಿ ಬೀಳ್ಕೊಟ್ಟೆ.
ಕೊನೆಯಲ್ಲಿ ಅವರಾಡಿದ ಮಾತು ಹಸಿದವನ ಮುಂದೆ ಬಂಗಾರ ತುಂಬಿದ ತಟ್ಟೆ ಮತ್ತು ಅನ್ನ ತುಂಬಿದ ತಟ್ಟೆ ಇಟ್ಟರೆ ಅವನು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ?.... ಮುಂದಿನ ದಿನಗಳಲ್ಲಿ ಅಂತ ಪರಿಸ್ಥಿತಿ ಬರುತ್ತದೆ ಎಂಬುದು ಕಿವಿಯಲ್ಲಿ ಗುಂಯ್ ಗುಡುತ್ತಿದೆ...
Comments
Post a Comment