Blog number 1915. ಡಯಾಬಿಟೀಸ್ ರಿವರ್ಸಲ್ ಚಿಕಿತ್ಸೆ ಪ್ರಾರಂಭಿಸಿ ಸಾವಿರಾರು ಮದುಮೇಹಿ ರೋಗಿಗಳ ಜೀವನದಲ್ಲಿ ಆಶಾ ಕಿರಣ ಮೂಡಿಸಿರುವ ಶಿವಮೊಗ್ಗದ ಪ್ರಖ್ಯಾತ ವೈದ್ಯ ಡಾಕ್ಟರ್ ಪ್ರೀತಂ ಈ ಬಗ್ಗೆ ಪುಸ್ತಕ ಬರೆದಿದ್ದಾರೆ.
#ಮದುಮೇಹ_ರೋಗ_ಶಾಶ್ವತವಾಗಿ_ಗುಣಪಡಿಸಿ_ಕೊಳ್ಳುವ_ಸಾಧ್ಯತೆ_ಇದೆಯಾ?
#ಅದನ್ನೇ_ಡಯಾಬಿಟೀಸ್_ರಿವರ್ಸಲ್_ಎಂದು_ಕರೆಯುವುದು
#ಜಗತ್ತಿನಾದ್ಯಂತ_52_ಕೋಟಿ_ಮದುಮೇಹಿಗಳಿದ್ದಾರೆ_2021ರ_ಅಂಕಿ_ಅಂಶ
#ಭಾರತದಲ್ಲಿ_10_ಕೋಟಿ_ತಲುಪಿದೆ_2023ರ_ಅಂಕಿ_ಅಂಶದ_ಪ್ರಕಾರ
#ಶಿವಮೊಗ್ಗದ_ಪ್ರಖ್ಯಾತ_ವೈದ್ಯರಾದ_ಡಾಕ್ಟರ್_ಪ್ರೀತಮ್_ಮದುಮೇಹಿಗಳಿಗಾಗಿಯೇ_ಪುಸ್ತಕ_ಬರೆದಿದ್ದಾರೆ.
#ಭಾರತೀಯರು_ತಮ್ಮ_ತೂಕ_10_ಕಿಲೋ_ಇಳಿಸಿದರೆ_ಡಯಾಬಿಟೀಸ್_ಹಿಂದಕ್ಕೆ_ಹೋಗುತ್ತದೆ.
#ಸದ್ಯದಲ್ಲೇ_ಪ್ರಕಟವಾಗಲಿದೆ.
ಡಾಕ್ಟರ್ ಪ್ರೀತಮ್ ಕಳೆದ 15 ವರ್ಷಗಳ ಅವರ ನಿರಂತರ ವೈದ್ಯಕೀಯ ಸೇವೆಯಿಂದ ಪ್ರಖ್ಯಾತರಾಗಿದ್ದಾರೆ, ಇವರ ತಂದೆ ಸೊರಬ ಮೂಲದ ಡಾ. ಈಶ್ವರಪ್ಪನವರು ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸರಕಾರಿ ವೈದ್ಯರಾಗಿ ಹೆಸರುಗಳಿಸಿದವರು.
ನಿವೃತ್ತಿ ನಂತರವೂ ಜೈಲ್ ರಸ್ತೆಯಲ್ಲಿನ ಅವರ ಕ್ಲೀನಿಕ್ ಬಡವರ ದನ್ವಂತರಿ ಮಂದಿರ ಆಗಿತ್ತು, ಅವರು ಕೊನೆ ಉಸಿರು ಬಿಡುವ ತನಕ ಈ ಕ್ಲೀನಿಕ್ ತೆರೆದಿತ್ತು.
ಇವರ ಅಣ್ಣ ಡಾಕ್ಟರ್ ಚೇತನ್ ಪ್ರಖ್ಯಾತ ದಂತ ವೈದ್ಯರು, ಅವರ ಸಾನಿಧ್ಯ ಡೆಂಟಲ್ ಕ್ಲೀನಿಕ್ ಶಿವಮೊಗ್ಗದ ದರ್ಗಾ ಕಾಂಪ್ಲೆಕ್ಸ್ ನಲ್ಲಿದೆ ಹಿಂದೆ ಸುಬ್ಬಯ್ಯ ಡೆಂಟಲ್ ಕಾಲೇಜ್ ನಲ್ಲಿ ಪ್ರಾಂಶುಪಾಲರಾಗಿದ್ದವರು, ಅಪಘಾತಗಳಲ್ಲಿ ಮುಖದ ಸೌಂದರ್ಯ ಕಳೆದು ಕೊಂಡವರಿಗೆ ಅದನ್ನು ಪುನರ್ ಮಾರ್ಪಾಡು ಮಾಡುವ ಜಿಲ್ಲೆಯ ಏಕೈಕ ತಜ್ಞರು ಇವರು.
ಇಂತಹ ಖ್ಯಾತ ವೈದ್ಯ ಕುಟುಂಬದ ಹಿನ್ನೆಲೆಯ ಡಾಕ್ಟರ್ ಪ್ರೀತಂ ಬೈಕ್ ರೈಡಿಂಗ್, ಕಾರ್ ರೇಸಿಂಗ್ ಗಳಲ್ಲಿ ಹೆಚ್ಚು ಭಾಗವಹಿಸುತ್ತಾರೆ, ಬ್ಯಾಡ್ಮಿಂಟನ್ ಮತ್ತು ಕ್ರಿಕೆಟ್ ಇವರಿಗೆ ಅತ್ಯಂತ ಇಷ್ಟದ ಕ್ರೀಡೆ ಮತ್ತು ಮೊದಲ ದರ್ಜೆ ಕ್ರಿಕೆಟ್ ಅಂಪೈರಿಂಗ್ ತೆರ್ಗಡೆ ಹೊಂದಿದ ಅಹ೯ತೆ ಪಡೆದ ಅಂಪೈರ್ ಇವರು.
ಇವರ ಐಲೆಟ್ ಆಸ್ಪತ್ರೆ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿಯ ಆಟೋ ಕಾಂಪ್ಲೆಕ್ಸ್ ಎದರು, ದ್ವಾರಕಾ ಕಲ್ಯಾಣಮಂಟಪದ ಪಕ್ಕದಲ್ಲಿತ್ತು ಅದನ್ನು ಈಗ ಹೊಸ ವರ್ಷದ ಮೊದಲ ದಿನದಿಂದ ದುರ್ಗಿಗುಡಿ ವೃತ್ತದ ಸಿದ್ಧೋಜಿ ರಾವ್ ಸಿಂಗರ್ ಶೋ ರೂಂ ಸಮೀಪದಲ್ಲಿ ಜ್ಯೂವೆಲ್ ರಾಕ್ ಮತ್ತು ಜಿಲ್ಲಾ ಬಿಜೆಪಿ ಕಛೇರಿ ರಸ್ತೆಗೆ ಸಂಪರ್ಕಿಸುವ ಕಿರು ರಸ್ತೆಯ ಬಲಭಾಗದಲ್ಲಿ ಹೊಸದಾಗಿ ಪ್ರಾರಂಬಿಸಿದ್ದಾರೆ.
ಪ್ರತಿ ಕುಟುಂಬದಲ್ಲೂ ಮದುಮೇಹ ಇರುವವರು ಸಹಜ ಆದರೆ ಅವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿರುವುದಿಲ್ಲ ಅಥವ ಮದುಮೇಹಿಗಳು ಸರಿಯಾದ ಮಾಹಿತಿ ಪಡೆದಿರುವುದಿಲ್ಲ.
ಮದುಮೇಹ ಪರೀಕ್ಷೆ -ಮಾತ್ರೆ - ಇನ್ಸುಲಿನ್ ಇತ್ಯಾದಿಗಳಿಂದ ಹೆಚ್ಚಿನ ಲಾಭ ವೈದ್ಯರಿಗೆ ಇರುವಾಗ ಇದನ್ನು ಬಿಟ್ಟು ಮದುಮೇಹ ರಿವರ್ಸಲ್ ಸಾಧ್ಯವೆಂದು ಸ್ಪತಃ ಅನೇಕ ಪರೀಕ್ಷೆ ಸಂಶೋದನೆಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮದುಮೇಹಿ ರೋಗಿ ಮತ್ತು ಅವರುಗಳ ಕುಟುಂಬದಲ್ಲಿ ಆಶಾಕಿರಣ ಮೂಡಿಸಿದ್ದಾರೆ ಅದಕ್ಕಾಗಿ #ಡಯಾಬಿಟೀಸ್_ರಿವರ್ಸಲ್ ಅಭಿಯಾನ ಪ್ರಾರಂಬಿಸಿ ಯಶಸ್ವಿ ಆಗಿದ್ದಾರೆ ಇದರಿಂದ ವೈದ್ಯರಿಗೆ ನಷ್ಟವೇ ಆದ್ದರಿಂದ ಅನೇಕರು ಡಾಕ್ಟರ್ ಪ್ರೀತಂ ರ ಈ ಸಾಹಸಕ್ಕೆ ಬೆಂಬಲಿಸುವುದಿಲ್ಲ.
ಆದರೆ ಲೋಕ ಕಲ್ಯಾಣದ ಈ ಕೆಲಸ ಪ್ರಾರಂಬಿಸಿರುವ ಡಾಕ್ಟರ್ ಪ್ರೀತಂ ರಿಗೆ ನನ್ನ ವೈಯಕ್ತಿಕ ಪ್ರಣಾಮಗಳನ್ನು ಅರ್ಪಿಸುತ್ತೇನೆ,ಈಗಾಗಲೇ ಸಾವಿರಾರು ಜನ ಮದುಮೇಹ ರೋಗದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ವಿಮುಕ್ತಿ ಪಡೆದಿದ್ದಾರೆ ನನ್ನದೇ ಕುಟುಂಬದಲ್ಲಿ ಇದು ಸಾಧ್ಯವಾಗಿದೆ.
ಇಂತಹ ಸೇವಾ ಮನೋಭಾವದ ವೈದ್ಯರಾದ ಡಾಕ್ಟರ್ ಪ್ರೀತಂ ಮದುಮೇಹಿ ರೋಗಿಗಳಿಗೆ ಅವರ ಕುಟುಂಬದವರಿಗಾಗಿ ಸದ್ಯದಲ್ಲೇ ಉಪಯುಕ್ತವಾದ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.
ಈ ಪುಸ್ತಕ ಡಯಾಬಿಟೀಸ್ ರೋಗದಿಂದ ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ ಎಂಬ ಉಪಯುಕ್ತ ಮಾಹಿತಿ ರೋಗಿಗಳ ಜೀವನದಲ್ಲಿ ಆಶಾಕಿರಣ ಮೂಡಿಸಲಿದೆ.
ಈ ಪುಸ್ತಕದ ಕರಡು ಪ್ರತಿ ಡಾಕ್ಟರ್ ಪ್ರೀತಂ ಅವರ 15 ವರ್ಷದ ಹಳೆಯ ಮದುಮೇಹಿ ರೋಗಿ ಆದ ನನಗೆ ಓದಲು ಅವಕಾಶ ನೀಡಿದ್ದರಿಂದ ಈ ಪುಸ್ತಕದ ಮಾಹಿತಿ ಪಡೆದೆ.
ಡಾಕ್ಟರ್ ಪ್ರೀತಂ ಬರಹದ ಶೈಲಿ ಮತ್ತು ನಮೂದಿಸಿರುವ ಮಾಹಿತಿ ಸ್ವತಃ ಡಯಾಬಿಟೇಸ್ ರೋಗಿ ಆಗಿ ಈಗ ಅವರ ಡಯಾಬಿಟೀಸ್ ರಿವರ್ಸಲ್ ಪ್ರಯೋಗದ ಫಲಾನುಭವಿ ಆಗಿ ಇಷ್ಟವಾಯಿತು.
ಪ್ರತಿಯೊಬ್ಬ ಡಯಾಬಿಟೀಸ್ ರೋಗಿ ಮತ್ತು ಅವರ ಕುಟುಂಬದವರು ಈ ಪುಸ್ತಕ ಓದಬೇಕು ಮತ್ತು ಅವರ ಮನೆಗಳಲ್ಲಿ ಇಟ್ಟುಕೊಳ್ಳಬೇಕು.
ಡಯಾಬಿಟೀಸ್ ಎಂದರೆ ಭಯ ಪಡುತ್ತಿದ್ದ ಕಾಲ ಬದಲಾಗಲಿದೆ, ಡಾಕ್ಟರ್ ಪ್ರೀತಂ ಡಾಕ್ಟರಾಗಿ, ಕ್ರೀಡಾಪಟುಗಳಾಗಿ ಯಶಸ್ವಿ ಆಗಿದ್ದಂತೆ ಅತ್ಯುತ್ತಮ ವೈದ್ಯ ಲೋಕದ ಬರಹಗಾರರೂ ಆಗಲಿದ್ದಾರೆ.
ಈ ಪುಸ್ತಕದ ಮುನ್ನುಡಿ ಇವರ ಡಯಾಬಿಟೀಸ್ ರಿವರ್ಸಲ್ ನಿಂದ ಸಂಪೂರ್ಣವಾಗಿ ಮದುಮೇಹ ರೋಗದಿಂದ ಗುಣವಾಗಿರುವ ಬೆಂಗಳೂರಲ್ಲಿ ನೆಲೆಸಿರುವ ಖ್ಯಾತ ಸಾಹಿತಿಗಳು ಬರೆದಿದ್ದಾರೆ.
https://www.facebook.com/share/p/3RQc5wgCYz48JVsc/?mibextid=qi2Omg
#ಸದ್ಯದಲ್ಲೇ_ಇವರು_ಬರೆದ #ಡಯಾಬಿಟೀಸ್_ರಿವರ್ಸಲ್_ಪುಸ್ತಕ_ಲೋಕಾರ್ಪಣೆ_ಆಗಲಿದೆ.
Comments
Post a Comment