Blog number 1918. 25 ವರ್ಷದ ಹಿಂದಿನ ಹವಳದ ಉಂಗುರದ ಕಥೆ... ಇವತ್ತಿನ ನವರತ್ನ ಉಂಗುರದ ಕಥೆ ... ಯಾರ ಹೃದಯದ ಬಾರ ಇಳಿಯಿತು? ..
#ಹವಳದ_ಉಂಗುರದ_ನಂತರದ_ನವರತ್ನ_ಉಂಗುರದ_ಕಥೆ_ಇದು.
#ಬಂಗಾರವೇ_ಧರಿಸಬಾರದೆಂಬ_ಶಫಥ_ಮಾಡಿದ_ನನಗೆ_ನವರತ್ನ_ಉಂಗುರದ_ಉಡುಗೊರೆ.
#ಈ_ಉಡುಗೊರೆ_ನೀಡಿ_ಹಗುರಾಗುವ_ವಸಂತ್_ಕುಮಾರ್
#ಇದನ್ನು_ಹೇಳಿ_ಹಗುರಾಗುವ_ನನ್ನ_ಮನಸ್ಸು
#ಯಾವುದು_ಸರಿ?
ಮೊನ್ನೆ ಗೆಳೆಯ ರೈತ ಹೋರಾಟದ ಮುಖಂಡ ಸಾಗರದ #ವಸಂತಕುಮಾರ್ ಬಂದಿದ್ದರು.ನಾನು ಇವರಿಂದಲೇ ಸಿದ್ದ ಸಮಾಧಿ ಯೋಗದ ಸಂಪರ್ಕ ಪಡೆದು ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಇವರು ಪ್ರಮುಖ ಕಾರಣಕರ್ತರು.
ನಾನು ಸಂಜೆಯ ವಾಕಿಂಗ್ ಗೆ ಹೋದಾಗ ಬಂದವರು ನನ್ನ ವಾಕಿಂಗ್ ಗೆ ಭಂಗ ಬರಬಾರದೆಂದು ನಾನು ವಾಕಿಂಗ್ - ಸ್ನಾನ ಮುಗಿಸಿ ಬರುವ ತನಕ ನನ್ನ ಕಚೇರಿಯಲ್ಲಿ ಕುಳಿತಿದ್ದರು.
ಬೇರೆ ಬೇರೆ ಗೆಳೆಯರು ಆ ಸಂದರ್ಭದಲ್ಲಿ ಬಂದಿದ್ದರು, ಎಲ್ಲರೂ ಸೇರಿ ಕಾಫಿ ಚಹಾ ಸೇವನೆ ಮಾಡಿದೆವು ನಂತರ ಅನೇಕ ವಿಚಾರಗಳ ಚರ್ಚೆ ಮುಂದುವರೆಯಿತು, ಗೆಳೆಯರೆಲ್ಲ ರಾತ್ರಿ 10 ಆಗುತ್ತಿದ್ದಂತೆ ಅವರವರ ಮನೆಗೆ ತೆರಳಿದರು ನಾವಿಬ್ಬರೇ ಉಳಿದೆವು, ಆಗಲೇ ಗೆಳೆಯ ವಸಂತ್ ಕುಮಾರ್ ನಿಮಗೊಂದು ಉಡುಗೊರೆ ತಂದಿದ್ದೇನೆ ಸ್ವೀಕರಿಸಬೇಕು ಎಂದರು.... ನನಗೆ ಕುತೂಹಲ ಆದರೆ ಅವರು ತೆಗೆದು ಉಡುಗೊರೆ ನೀಡಿದ ವಸ್ತು ನೋಡಿ ನನಗೆ ದಿಗ್ಭ್ರಮೆ ಆಯಿತು.
ಅದೊಂದು #ನವರತ್ನದ ಬಂಗಾರದ ಉಂಗುರ ಆಗಿತ್ತು... ತಕ್ಷಣ ನನ್ನ ಮೆದುಳಿನಲ್ಲಿ ಅಲಾರಂ ಬಾರಿಸಿತು "ವಸಂತ್ ಕುಮಾರ್ ಅವರೇ ಇದು ನಾನು ಸುಮಾರು 25 ವರ್ಷಗಳ ಹಿಂದೆ ನೀಡಿದ ಹವಳದ ಉಂಗುರದ ಬದಲಿಗಾಗ ಎಂದೆ?" ಅವರು ತಕ್ಷಣ "ಖಂಡಿತ ಆ ರೀತಿ ಯೋಚಿಸಬೇಡಿ ನಿಮ್ಮ ಉಪಕಾರವನ್ನು,ಉಪಕಾರ ಮಾಡಿದ ಆ ಸಮಯವನ್ನು ನಾನು ಜೀವಮಾನ ಪೂರ್ತಿ ಮರೆಯುವಂತಿಲ್ಲ ಮತ್ತು ಆ ಉಪಕಾರವನ್ನು ನಾನು ತೀರಿಸಲು ಸಾಧ್ಯವಿಲ್ಲ" ಅಂದರು.
"ಸಣ್ಣ ಮಗ ದುಬೈನಲ್ಲಿ ದುಡಿಯುತ್ತಿದ್ದಾನೆ, ಮಧ್ಯದವನು ಬೆಂಗಳೂರಿನಲ್ಲಿ ಬೇಕರಿ ಪ್ರಾರಂಭಿಸಿದ್ದಾನೆ, ನಾನು ಸಾಗರದಲ್ಲಿ ನಾಲ್ಕು ಎಕರೆ ಸೈಟುಗಳನ್ನು ರಚಿಸಿ ಅಭಿವೃದ್ಧಿ ಮಾಡುತ್ತಿದ್ದೇನೆ, ಈಗ ನನ್ನಅಡಿಕೆ ತೋಟ ಪಸಲು ಬರುತ್ತಿದೆ... 2019ರ ನವೆಂಬರ್ ನಲ್ಲಿ ನಡೆದ ನಿಮ್ಮ ಮಗಳಾದ ನಿಶಾಳ ವಿವಾಹದಲ್ಲಿ ನಾನು ಇಂತಹ ಒಂದು ಉಡುಗೊರೆ ನೀಡಬೇಕೆಂದು ಬಯಸಿದ್ದೆ ಆದರೆ ಅವತ್ತು ನನಗೆ ಹಣ ಹೊಂದಾಣಿಕೆ ಆಗಲಿಲ್ಲ ಇವತ್ತು ಕೈಯಲ್ಲಿ ಹಣವಿದ್ದರಿಂದ ಇದನ್ನು ನಿಮಗೆ ನೀಡಲೇಬೇಕೆಂಬ ಸಂಕಲ್ಪದಿಂದ ಬಂದಿದ್ದೇನೆ ದಯಮಾಡಿ ನಿರಾಕರಿಸಬೇಡಿ" ಎಂದರು.
ಅವರ ಜೊತೆ ಮಾತನಾಡುತ್ತಲೇ ನನ್ನ ಆಪ್ತರಿಗೆ ಈ ಪ್ರಶ್ನೆಯನ್ನು ವಾಟ್ಸಪ್ ಮೂಲಕ ಕಳಿಸಿದೆ ...ಈ ಉಂಗುರ ಸ್ವೀಕರಿಸ ಬಹುದಾ? ಅಂತ ಅದಕ್ಕೆ ಉತ್ತರಕ್ಕಾಗಿ ಕಾಯುತ್ತಿದ್ದೆ.. ನಂತರ ಬಂದ ಅವರ ವಾಟ್ಸಪ್ ಉತ್ತರ ಬಂಗಾರದ ಆಭರಣ ಉಡುಗೊರೆಯಾಗಿ ಯಾರೇ ನೀಡಿದರು ತಿರಸ್ಕಾರ ಮಾಡಬಾರದು ಎಂದು ಅವರ ಉತ್ತರವಾಗಿತ್ತು.
ವಸಂತ ಕುಮಾರ್ "ಉಂಗುರ ನಿಮ್ಮ ಬೆರಳಿಗೆ ಸರಿ ಹೊಂದುತ್ತದಾ? ನೋಡಿ ಸರಿಯಾಗದಿದ್ದರೆ ಮತ್ತೆ ಬದಲಾಯಿಸಿ ತರುತ್ತೇನೆ" ಅಂದಾಗ ವಸಂತಕುಮಾರ್ ಅವರಿಗೆ ವಿನಂತಿ ಮಾಡಿದೆ ನಾನು ಬಂಗಾರ ಬೆಳ್ಳಿ ಧರಿಸುವುದಿಲ್ಲ ಮಗನು ಬಂಗಾರ ಧರಿಸುವುದಿಲ್ಲ ಪತ್ನಿಗೂ ಅದರ ಬಗ್ಗೆ ವ್ಯಾಮೋಹ ಇಲ್ಲ ಏನು ಮಾಡಲಿ ಇದನ್ನು? .....
ಬಂಗಾರ ಆಭರಣ ದರಿಸದ, ಹಣ ಕೈಯಲ್ಲಿ ಮುಟ್ಟದ. ಜೀವಾ ವಿಮೆ ಮಾಡಿಸದ, ಟೀವಿ ಚಾನಲ್ ನೋಡದ, ಪತ್ರಿಕೆ ಓದದ, ಪ್ಯಾಂಟ್ ದರಿಸದ, ಸ್ವಂತ ಕ್ಷೌರ ಮಾಡಿಕೊಳ್ಳುವ, ರಾತ್ರಿ ಊಟ ಮಾಡದ, ಸನ್ಮಾನ -ಸತ್ಕಾರ ಸ್ವೀಕರಿಸದ, ಮತದಾನ ಮಾಡದ, ಸಭೆ ಸಮಾರಂಭದಲ್ಲಿ ಭಾಗವಹಿಸದ, ಹೊಗಳುವವರಿಂದ ಹಾಗೂ ತೆಗಳುವವರಿಂದ ಅಂತರ ಕಾಪಾಡಿಕೊಂಡು, ನನ್ನ ಸಹಾಯದ ಹೆಸರು ಬಹಿರಂಗ ಮಾಡದ ನನ್ನ ಶಫಥಗಳು ನನ್ನ 58 ನೇ ವಯಸ್ಸಿನ ತನಕ ಮುಂದುವರಿದಿದೆ ಇದೆಲ್ಲ ಮುಂದಿನ ನನ್ನ ವಾನಪ್ರಸ್ಥಾಶ್ರಮದ ನನ್ನ ತಯಾರಿಗಳು ....
ವಸಂತ್ ಕುಮಾರ್ ನೀಡಿದ ನವರತ್ನದ ಉಂಗುರ ನನ್ನ ಬಳಿ ಈಗ ಇದೆ ಅದನ್ನ ನಾವು ಯಾರು ಧರಿಸುತ್ತಿಲ್ಲ ...ಅದು ಮುಂದಿನ ದಿನದಲ್ಲಿ ಯಾವ ರೀತಿ ಬಳಕೆಗೆ ಬರುತ್ತದೊ ಗೊತ್ತಿಲ್ಲ.
#ಇದು ನವರತ್ನ ಉಂಗುರದ ಕಥೆ.
https://arunprasadhombuja.blogspot.com/2022/11/blog-number-1080.html
https://arunprasadhombuja.blogspot.com/2023/11/blog-number-1836.html
ಭವಿಷ್ಯ ಗೆಳೆಯ ವಸಂತಕುಮಾರ ಅವರಿಗೆ ಹವಳದ ಉಂಗುರದ ಕಥೆ ಇಷ್ಟವಾಗಲಿಲ್ಲವೋ ಅಥವಾ ತನ್ನ ಆರ್ಥಿಕ ಸಂಕಷ್ಟಗಳು ಕಳೆದಿದ್ದರಿಂದ ಈ ನವರತ್ನದ ಉಂಗುರ ನನಗೆ ನೀಡಿ ಹಗುರಾಗಬೇಕೆಂಬ ಭಾವನೆಯೋ ಗೊತ್ತಿಲ್ಲ.
ರಾತ್ರಿ ತಡವಾದ್ದರಿಂದ ಅವರು ಸಾಗರ ಸೇರಿ ಅವರೇ ಅಡುಗೆ ಮಾಡಿ ಊಟ ಮಾಡುವ ಪ್ರವೃತ್ತಿ ನನಗೆ ಗೊತ್ತಿದ್ದರಿಂದ ನಮ್ಮ ಮಲ್ಲಿಕಾ ವೆಜ್ ನಿಂದ ತಂದೂರಿ ರೋಟಿ ಮತ್ತು ಪನ್ನೀರ್ ಬಟರ್ ಮಸಾಲ ಅವರಿಗೆ ಪಾರ್ಸೆಲ್ ಮಾಡಿಕೊಟ್ಟು ಅವರಿಗೆ ವಿದಾಯ ಹೇಳಿದೆ.
ಮನಸ್ಸಿನಲ್ಲಿ ಕೊರೆಯುವ ಈ ನವರತ್ನ ಉಂಗುರದ ಉಡುಗೊರೆ ನಿಮ್ಮೊಡನೆ ಹಂಚಿ ಹಗುರಾಗುವ ಬಯಕೆ ನನ್ನದು.
Comments
Post a Comment