Blog number 1922. ನಮ್ಮ ಸಂಸ್ಥೆಯ ನೆಚ್ಚಿನ ಆಡಿಟರ್ ರವೀಶರಿಗೆ ದುಃಖ ತಡೆಯುವ ಶಕ್ತಿ ದೇವರು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
#ನಮ್ಮ_ಸಂಸ್ಥೆಯ_ನೆಚ್ಚಿನ_ಆಡಿಟರ್_ಶಿವಮೊಗ್ಗದ_ರವೀಶ್
#ಇವರಿಗೆ_ದುಃಖ_ತಡೆಯುವ_ಶಕ್ತಿ_ದೇವರು_ದಯಪಾಲಿಸಲಿ.
ಸಾಗರದಲ್ಲೇ ಓದಿ ಶಿವಮೊಗ್ಗದಲ್ಲಿ ದುರ್ಗಿಗುಡಿಯ ಶನೀಶ್ವರ ದೇವಾಲಯದ ಹಿಂಬಾಗದ ಸಹಕಾರಿ ಭವನದ ಮೊದಲ ಮಹಡಿಯಲ್ಲಿ ತಮ್ಮ ಆಡಿಟರ್ ಕಛೇರಿಯಿಂದ ಕಾರ್ಯನಿರ್ವಹಿಸುವ ಆಡಿಟರ್ ರವೀಶ್ ಕಳೆದ 12 ವರ್ಷಗಳಿಂದ ನಮ್ಮ ಸಂಸ್ಥೆಯ ಆಡಿಟರ್ ಆಗಿದ್ದಾರೆ.
ತುಂಬಾ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾ ಮತ್ತು ಉಪಯುಕ್ತ ಮಾಹಿತಿ ಸಲಹೆ ನೀಡುವ ಹಸನ್ಮುಖಿಗಳು.
ಸಾಗರ ಮಾರ್ಗವಾಗಿ ಪ್ರಯಾಣ ಮಾಡುವಾಗ ನನ್ನ ಕಛೇರಿಗೆ ಒಂದು ಬೇಟಿ ಇರುತ್ತದೆ ಅನೇಕ ಬಾರಿ ಪತ್ನಿ ಮತ್ತು ಇಬ್ಬರು ಪುತ್ರಿಯರ ಜೊತೆ ನಮ್ಮ ಕಛೇರಿಗೆ ಬಂದಿದ್ದ ನೆನಪುಗಳು.
ಇವತ್ತು ಬೆಳಿಗ್ಗೆ ಪತ್ರಕರ್ತರಾದ ಶೃಂಗೇಶ್ ಫೋನ್ ನಲ್ಲಿ ತಿಳಿಸಿದ ಸುದ್ದಿ ಅನಿರಿಕ್ಷಿತವಾಗಿತ್ತು, ತಮ್ಮದೇ ಕಾರಿನಲ್ಲಿ ರವೀಶರ ಸಂಸಾರ ಚಿಕ್ಕಮಗಳೂರಿಗೆ ಹೋಗಿ ವಾಪಾಸು ಶಿವಮೊಗ್ಗಕ್ಕೆ ಬರುವಾಗ ಕಡೂರು ಸಮೀಪ ಮರಕ್ಕೆ ಡಿಕ್ಕಿಯಾಗಿ ಇಬ್ಬರೂ ಆಸ್ಪತ್ರೆಯಲ್ಲಿದ್ದರು ಇವತ್ತು ಬೆಳಿಗ್ಗೆ ರವೀಶರ ಪತ್ನಿ ಇಹಲೋಕ ತ್ಯಜಿಸಿದ್ದಾರೆ ಎಂದು.
ಇಬ್ಬರು ತುಂಬಾ ಚಿಕ್ಕ ಹೆಣ್ಣು ಮಕ್ಕಳ ತೊರೆದು ಹೋದ ರವೀಶರ ಪತ್ನಿ ಚಿಕ್ಕ ವಯಸ್ಸಿನವರು ಅನೋನ್ಯವಾಗಿದ್ದ ಈ ಪುಟ್ಟ ಸಂಸಾರದಲ್ಲಿ ಈ ಅಪಘಾತ ಸಂಭವಿಸಿದೆ.
ನನ್ನ ಅನೇಕ ಗೆಳೆಯರಿಗೆ ವಿನಂತಿ... ಪ್ರಯಾಣದಲ್ಲಿ ಸೀಟ್ ಬೆಲ್ಟ್ ಕಡ್ಡಾಯ ಧರಿಸಿ, ನೀವೇ ಸ್ವತಃ ಡ್ರೈವಿಂಗ್ ಮಾಡಿ ಪ್ರಯಾಣ ಮಾಡುವುದು ಕಡಿಮೆ ಮಾಡಿ, ಸೂರ್ಯೋದಯದ ನಂತರ ಪ್ರಯಾಣ ಪ್ರಾರಂಬಿಸಿ ಸೂರ್ಯಾಸ್ತದ ಒಳಗೆ ತಲುಪುವಂತೆ ಪ್ರಯಾಣದ ಸಮಯ ನಿಗದಿ ಮಾಡಿಕೊಳ್ಳಿ, ದೂರ ಪ್ರಯಾಣದಲ್ಲಿ ಒಳ್ಳೆಯ ಹೊಸ ಟ್ಯಾಕ್ಸಿಗಳನ್ನು ಬಾಡಿಗೆ ಪಡೆದು ಪ್ರಯಾಣಿಸಿ, ಚಾಲಕರು ವಾಹನ ಚಾಲನೆಯಲ್ಲಿ ಸೆಲ್ ಫೋನ್ ಬಳಸದಂತೆ ನೋಡಿಕೊಳ್ಳಿ.
Comments
Post a Comment