ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ. ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ. ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವವರು, 2015ರಲ್ಲಿ ಇವರು ಕನಾ೯ಟಕಕ್ಕೆ ಬಂದಾಗ ಬೆಳಗಾಂ ಜಿಲ್ಲೆಯ ಖಾನಾಪುರದ ದಟ್ಟ ಅರಣ್ಯದಲ್ಲಿ ಚಾತುಮಾ೯ಸ ನಡೆಸಿದಾಗ ಅನೇಕ ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಇವರ ಬೇಟಿಗೆ ಬಂದಿದ್ದರು, ಜೈನ ಪ್ರಮುಖರಾದ ದಮ೯ ಸ್ಥಳದ ವೀರೇ೦ದ್ರ ಹೆಗ್ಗೆಡೆಯವರಿಗೂ ಇವರ ದಶ೯ನ ಸಿಕ್ಕಿಲ್ಲ ಅಂತ ಮಹಾರಾಷ್ಟ್ರದ ಸತಾರದ ಜೈನ ಪ್ರಮುಖರು ಹೇಳಿದರು. ಅವಾಗ ಅವರನ್ನ ಸಂದಶಿ೯ಸಿದ ಪತ್ರಿಕೆ ಮತ್ತು ಪೋಟೋ ನೋಡಿದ ಅವರು ನನಗೆ ನೀವೇ ಪುಣ್ಯವಂತರು ಅಂದರು. ನನಗೆ ಇಂತ ಅವಕಾಶ ಯಾಕೆ ಸಿಗುತ್ತೆ ಗೊತ್ತಿಲ್ಲ ಆದರೆ ...