Skip to main content

Posts

Showing posts with the label Constructed varasiddi Vinayaka temple for my village.

ನಮ್ಮ ಊರಿಗಾಗಿ ವರಸಿದ್ಧಿ ವಿನಾಯಕ ದೇವಸ್ಥಾನ ಕಟ್ಟಿಸಿದ್ದು.

    ಅದೊಂದು ಅಕಸ್ಮಿಕವಾದ ಅವಕಾಶ, ಈಗ ಯೋಚಿಸಿದರೆ ಹೀಗೂ ಆಯಿತಾ ಅನ್ನಿಸುತ್ತೆ.     ತಿಳಿದವರು ಇದಕ್ಕಾಗಿ ಹೇಳುತ್ತಾರೆ ಜನ್ಮಾoತರವಾದ ಯಾವುದೊ ಸಂಪಕ೯ ಕಾರಣ ಹಾಗೂ ತಂದೆ, ತಾಯಿ ಆಶ್ರೀ ವಾದ ಕಾರಣ ಅಂತ ಇದು ಸರಿ ಅಂತ ಬಾವಿಸುತ್ತೇನೆ, ಹಣ, ಆಸ್ತಿ ಅಧಿಕಾರಕ್ಕಾಗಿ ಹೋರಾಡುವ ಮನಸ್ಸಿನ ಶಾಶ್ವತ ಗುಣಗಳನ್ನ ಮೆಟ್ಟಿ ಊರಿಗಾಗಿ, ಪಾರಮಾಥಿ೯ಕ ನೆಮ್ಮದಿಗಾಗಿ ಹಣ ವಿನಿಯೋಗಿಸುವ ಮನಸ್ಸು ನನಗೆ ಬಂದಿದ್ದಾರು ಹೇಗೆ? ಇದೆ ಅಲ್ಲವೆ ಆಗೋಚರ ಶಕ್ತಿಯ ಕಾರಣ? ಇದನ್ನೆ ದೇವರು ಅನ್ನಲೆ?     ಒಮ್ಮೆ ಯಡೇಹಳ್ಳಿಯ ಶಾಂತಿ ನಗರದ ಲಾರಿ ಡ್ರೈವರ್ ಸೋಮ ಶೇಖರ್ (ಈಗ 2 ಲಾರಿ ಮಾಲಿಕರು ಹಾಗು ನಮ್ಮ ದೇವಾಲಯದ ಪ್ರಧಾನ ಪಾರುಪತ್ತೆದಾರರು) ಬಂದು ನಮ್ಮ ಊರಲ್ಲಿ ಹಿಂದು ದಮ೯ದವರಿಗೆ ಪ್ರಾಥ೯ನೆಗೆ ದೇವಾಲಯವಿಲ್ಲ, ಮುಸ್ಲಿ೦ ಜನಾ೦ಗದವರು ಮಸೀದಿ ಕಟ್ಟಿದ್ದಾರೆ, ಕ್ರಿಶ್ಚಿಯನ್ನರು 2 ಚಚ್೯ ಕಟ್ಟಿದ್ದಾರೆ ಹಾಗಾಗಿ ನಾವೆಲ್ಲ ಸೇರಿ ಒಂದು ಗಣಪತಿ ದೇವಸ್ಥಾನ ಕಟ್ಟಿಸ ಬೇಕೆಂದು ತೀಮಾ೯ನಿಸಿದ್ದೇವೆ, ನೀವು ದಾರಾಳವಾಗಿ ಸಹಾಯ ಮಾಡಬೇಕಾಗಿ ಕೇಳಿದರು.      ಆಗ ನನ್ನ ಪರಿಸ್ಥಿತಿ ಆಥಿ೯ಕವಾಗಿ ಹೀನಾಯ ಸ್ಥಿತಿಗೆ ಬಂದಿತ್ತು.ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದಾಗ (1995) ಇದ್ದ ಕಾರು, ಬೈಕ್ 2000ನೆ ಇಸವಿಗೆ ಇರಲಿಲ್ಲ, ಇದ್ದ ರೈಸ್ ಮಿಲ್ ಸಾಲ ಪಾವತಿ ಮಾಡಲಾಗದೆ ಕೆ.ಎ...