Skip to main content

Posts

Showing posts with the label Why discontinue to walking track

Blog number 1990. ವಾಕಿಂಗ್ ಟ್ರ್ಯಾಕ್ ನಿಂದ ವಿಮುಖರಾಗುವುದು ಏಕೆ?

#ಹೆಚ್ಚಿನವರು_ವಾಕಿಂಗ್_ಟ್ರಾಕ್_ನಿಂದ_ವಿಮುಖರಾಗುತ್ತಾರೆ #ಯಾಕೆ? #ನನ್ನ_ಅನುಭವದ_ವಾಕಿಂಗ್_ಟಿಪ್ಸ್_ಇಲ್ಲಿದೆ. #ನನ್ನ_ಸಲಹೆ_ಪಡೆದವರಲ್ಲಿ_ನೂರಕ್ಕೆ_ಒಬ್ಬರೂ_ಅದನ್ನು_ಪಾಲಿಸುವುದಿಲ್ಲ. #ಪ್ರಾರಂಭದಲ್ಲೆ_ವಿಪರೀತ_ಮಾಡಲು_ಪ್ರಯತ್ನಿಸಿ_ವಿಪಲರಾಗುತ್ತಾರೆ #ಹತಾಶೆಯನ್ನೆ_ಸಮರ್ಥಿಸುವ_ಮಾತುಗಳು_ವಾಕಿಂಗ್_ಜಾಗ_ಅಕ್ರಮಿಸಿರುತ್ತದೆ. https://youtu.be/SSd-Dvp-6Yk?feature=shared ನನ್ನ ತೂಕ 140 ಕಿಲೋ ದಾಟುತ್ತಿರುವಾಗ ನನಗೆ ಯಾವುದರಲ್ಲೂ ಆಸಕ್ತಿ ಕಿಂಚಿತ್ತೂ ಇರಲಿಲ್ಲ ಸ್ಥೂಲಕಾಯ ನಿಯಂತ್ರಣ ತಪ್ಪಿದಾಗ ಇರಲೂ ಸಾಧ್ಯವಿರಲಿಲ್ಲ.   ನನ್ನ ಸ್ವಭಾವ ಅಜಗರ ಪ್ರವೃತ್ತಿ ಏನೆಂದರೆ ಹೆಬ್ಬಾವಿನಂತೆ ಆದ್ದರಿಂದ ತೂಕ ಇಳಿಸಲು ಸುಲಭ ಮಾರ್ಗ ಹುಡುಕುವುದು ಒಂದೆರೆಡು ದಿನ ಮಾಡುವುದು ನಂತರ ಅದನ್ನು ಕೈಬಿಟ್ಟು ನನ್ನದೇ ಆದ ಸಮರ್ಥನೆ ಕೊಟ್ಟು ಕೊಳ್ಳುತ್ತಿದ್ದೆ.   ನಾನು ನನ್ನ ನಿತ್ಯ ಕೆಲಸದಲ್ಲೇ ಕಡಿಮೆ ಓಡಾಡುತ್ತೀನಾ ? ಇದಕ್ಕಿಂತ ಹೆಚ್ಚಿನ ವಾಕಿಂಗ್ ಬೇಕಾ....    ಜರ್ಮನ್ ರಷ್ಯಾದಲ್ಲಿ 150 - 200 ಕಿಲೋ ತೂಕದವರು ಇಲ್ಲವಾ......   ಬೇರೆ ದೇಶಗಳಲ್ಲಿ ಅಂತವರಿಗಾಗಿಯೇ ಎಕ್ಸ್ ಕ್ಲೂಸೀವ್ ಎಕ್ಸಟ್ರಾ ಲಾರ್ಜ್ ರೆಡಿಮೇಡ್ ಶಾಪ್ ಗಳು ಇರುತ್ತದೆ...    ನಾನು ಇರುವುದೇ ಹೀಗೆ ನನಗೆ ಯಾರ ಉಪದೇಶವೂ ಬೇಡ.....    ಇಂತಹ ತೀರ್ಮಾನಕ್ಕೆ ತೂಕ ಇಳಿಸಿಕೊಳ್ಳಲಾಗದ ಹತಾಶೆಯೇ ಕಾರಣವಾದರೂ ಬೇರೆ ವ...