Skip to main content

Posts

Showing posts with the label Famous advocate of Shimoga with humanity

ಮದು ಲಾಯರ್ ಶಿವಮೊಗ್ಗದ ಪ್ರಖ್ಯಾತ ವಕೀಲರು ಮತ್ತು ಆಪತ್ಬಾ೦ದವರು

#ಶಿವಮೊಗ್ಗದ_ಪ್ರಖ್ಯಾತ_ವಕೀಲರಾದ_ಮದುಲಾಯರ್.    ಇವತ್ತು ಅವರು FBಯಲ್ಲಿ ತಮ್ಮ ಮತ್ತು ತಮ್ಮ ಶ್ರೀಮತಿಯೊಂದಿಗಿನ ಬಾವ ಚಿತ್ರ ಹಾಕಿದ್ದು ನೋಡಿ ನನ್ನ ನೆನಪು 25 ವರ್ಷದ ಹಿಂದಕ್ಕೆ ಓಡಿತು.   ನನ್ನ ಅನೇಕ ಸಂಕಷ್ಟಗಳಿಗೆ ಆಗ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ ಕಾರಣ ಆಗಿತ್ತು.   ಬಂಗಾರಪ್ಪನವರು ನನಗೆ ನೀಡಿದ ಪ್ರೋತ್ಸಾಹ ಕಾಗೋಡು ತಿಮ್ಮಪ್ಪರನ್ನ ಕೆರಳಿಸಿತು ಅವರ ಸುತ್ತಲೂ ಇದ್ದವರು ನನ್ನ ಮೇಲೆ ಮುರುಕೊಂಡು ಬಿದ್ದ ಪರಿ ಇತ್ತಲ್ಲ ಅದನ್ನು ಜೀವಮಾನದಲ್ಲಿ ಮರೆಯಲಾರದ ದಿನಗಳು.    ಮಂತ್ರಿಗಳ ಅಧಿಕಾರ ಅವರ ಹಿಂಬಾಲಕರು ಬಳಸಿಕೊಂಡು ದ್ವೇಷ ಸಾಧನೆ ಮಾಡಿದರೆ ಅದಕ್ಕೆ ಅಧಿಕಾರಿಗಳೂ ಒಲೈಸುವ ಲಾಭ ಪಡೆಯಲು ಅವರವರಲ್ಲೇ ಪೈಪೋಟಿ ಉಂಟಾಗಿ ನನ್ನ ಮತ್ತು ನನ್ನ ಸಂಗಡಿಗರ ಮೇಲೆ ವಿವಿದ 22 ಕೇಸ್ ಸಾಗರದಲ್ಲಿ, ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ 4 ಕೇಸ್ ಗಳು,ರೌಡಿ ಶೀಟರ್ ದಾಖಲೆ, ವ್ಯವಹಾರಗಳಲ್ಲಿ ತೊಂದರೆ ಇದರಿಂದ ನನ್ನ ವ್ಯವಹಾರ ನೆಲ ಕಚ್ಚಿತ್ತು.    ರೈಸ್ ಮಿಲ್ ಕೆ.ಎಸ್.ಪ್ ಸಿ ಹರಾಜಿಗೆ ತಂದಿತ್ತು ಅಲ್ಲಿ ವ್ಯವಸ್ಥಾಪಕ ಆದವರು ನನ್ನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾಮಾನ್ಯ ಕುಟುಂಬದ ಪ್ರತಿಭಾವಂತ ಯುವಕ ಆದರೆ ಆತನನ್ನು ವಿರೋದಿಗಳು ಬಳಸಿಕೊಂಡಿದ್ದರಿಂದ ಇಲ್ಲದ ತೊಂದರೆ ಅವಮಾನ ಆತ ಸತತವಾಗಿ ನೀಡಿದ ಇದಕ್ಕಾಗಿ ಸಕಾ೯ರದ ಜೀಪನ್ನು ಬಳಸುತ್ತಿದ್ದರು.   ಮನೆ ಸಾಗರದ SBI ಜಪ್ತಿಗೆ...