Skip to main content

Posts

Showing posts with the label Guru Purnime

4106.ವ್ಯಾಸ_ಪೂರ್ಣಿಮೆ. ಈ ದಿನವನ್ನು 'ವೇದ ವ್ಯಾಸರ' ಜನ್ಮದಿನವಾಗಿಯೂ ಆಚರಿಸಲಾಗುತ್ತದೆ.​"ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ |ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||"​ಗುರು ಪೂರ್ಣಿಮೆಯು ಕೇವಲ ಒಂದು ದಿನದ ಹಬ್ಬವಲ್ಲ ಅದು ಪ್ರತಿಯೊಬ್ಬರ ಜೀವನದಲ್ಲೂ ಜ್ಞಾನದ ಮೌಲ್ಯವನ್ನು ಮತ್ತು ಗುರುವಿನ ಸ್ಥಾನವನ್ನು ನೆನಪಿಸುವ ಪವಿತ್ರವಾದ ಆಚರಣೆ.

ವ್ಯಾಸ_ಪೂರ್ಣಿಮೆ.   ಈ ದಿನವನ್ನು 'ವೇದ ವ್ಯಾಸರ' ಜನ್ಮದಿನವಾಗಿಯೂ ಆಚರಿಸಲಾಗುತ್ತದೆ. ​"ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||" ​ಗುರು ಪೂರ್ಣಿಮೆಯು ಕೇವಲ ಒಂದು ದಿನದ ಹಬ್ಬವಲ್ಲ ಅದು ಪ್ರತಿಯೊಬ್ಬರ ಜೀವನದಲ್ಲೂ ಜ್ಞಾನದ ಮೌಲ್ಯವನ್ನು ಮತ್ತು ಗುರುವಿನ ಸ್ಥಾನವನ್ನು ನೆನಪಿಸುವ ಪವಿತ್ರವಾದ ಆಚರಣೆ. ಜನ್ಮ ನೀಡಿದ ತಾಯಿ ಮತ್ತು ತಂದೆಯನ್ನು ಮೊದಲ ಗುರುಗಳೆಂದು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.   ನಾಲ್ಕು ವೇದಗಳನ್ನು ವಿಭಾಗಿಸಿ, ಮಹಾಭಾರತ, ಅಷ್ಟಾದಶ ಪುರಾಣಗಳನ್ನು ರಚಿಸಿದ ಮಹರ್ಷಿ ವೇದವ್ಯಾಸರನ್ನು ಜಗತ್ತಿನ ಪ್ರಥಮ ಗುರು ಎಂದು ಪರಿಗಣಿಸಿ ಈ ದಿನ ಅವರಿಗೆ ನಮನ ಸಲ್ಲಿಸಲಾಗುತ್ತದೆ.  ​ಗುರು ಪೂರ್ಣಿಮೆ ಎಂದರೆ ನಮಗೆ ತಕ್ಷಣ ನೆನಪಾಗುವುದು ಮಹರ್ಷಿ ವೇದವ್ಯಾಸರು ಅವರು ಸನಾತನ ಧರ್ಮದ ಜ್ಞಾನ ಪರಂಪರೆಗೆ ವೇದವ್ಯಾಸರು ನೀಡಿದ ಕೊಡುಗೆ ಅಪಾರ ಮತ್ತು ಅಪ್ರತಿಮ.   ​ಅಷ್ಟಕ್ಕೂ ವೇದವ್ಯಾಸರು ಯಾರು? ಅವರ ಮಹತ್ವವೇನು? ಇಲ್ಲಿದೆ ಒಂದು ಕಿರು ನೋಟ... ​   ​ವೇದವ್ಯಾಸರ ಮೂಲ ಹೆಸರು 'ಕೃಷ್ಣ ದ್ವೈಪಾಯನ' ​ಇವರು ಮಹರ್ಷಿ ಪರಾಶರ ಮತ್ತು ಸತ್ಯವತಿಯ ಪುತ್ರ.     ​ಒಮ್ಮೆ ಪರಾಶರರು ಯಮುನಾ ನದಿಯನ್ನು ದಾಟಬೇಕಾದಾಗ, ದೋಣಿ ನಡೆಸುತ್ತಿದ್ದ ಸತ್ಯವತಿಯನ್ನು (ಮತ್ಸ್ಯಗಂಧಿ) ಭೇಟಿಯಾಗುತ್ತಾರೆ.  ...