Blog number 1047. ಕೆಳದಿ ರಾಜ ವೆಂಕಟಪ್ಪ ನಾಯಕರು ಮತ್ತು ರಂಗೋಲಿ ಪ್ರವೀಣೆ ಚಂಪಕಾಳ ದುರಂತ ಪ್ರೇಮದ ಸ್ಮಾರಕ ತಾಜ್ ಮಹಲ್ ಗೂ ಮೊದಲೇ ನಿರ್ಮಿಸಿದ ಚಂಪಕ ಸರಸ್ಸು ನಾಲ್ಕುನೂರನೆ ವರ್ಷಾಚಾರಣೆಯ ಹೊಸ್ತಿಲಲ್ಲಿ ಸಂಸದರು ಶಾಸಕರಿಂದ ಈ ಸ್ಮಾರಕ ಪ್ರವಾಸಿ ತಾಣ ಮಾಡುವ ಶಪಥ ಅಭಿನಂದನೀಯ.
#ಪ್ರವಾಸೋದ್ಯಮ_ತಾಣ_ಮಾಡುವ_ಪಣ_ತೊಟ್ಟ_ಶಿವಮೊಗ್ಗ_ಸಂಸದ_ರಾಘವೇ೦ದ್ರ_ಮತ್ತು_ಶಾಸಕ_ಹರತಾಳು_ಹಾಲಪ್ಪರಿಗೆ #ಅಭಿನಂದನೆಗಳು. #ನಿರ್ಮಾಣವಾಗಿ_ನಾಲ್ಕು_ನೂರು_ವರ್ಷಕ್ಕೆ_ಜನರ_ಗಮನ_ಸೆಳೆಯಿತು #ಡಿಸೆಂಬರ್_24ಕ್ಕೆ_2024ಕ್ಕೆ_ನಾಲ್ಕುನೂರನೇ_ವಷಾ೯ಚಾರಣೆ #ಉದ್ದೇಶ_ಪೂರ್ವಕವಾಗಿ_ಮುಚ್ಚಲ್ಪಟ್ಟ_ಕೆಳದಿ_ರಾಜ_ವೆಂಕಟಪ್ಪ_ನಾಯಕರು_ನಿರ್ಮಿಸಿದ_ಸ್ಮಾರಕ #ನಾನು_ಬರೆದು_ಪ್ರಕಟಿಸಿದ_ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ #ಬೆಸ್ತರ_ರಾಣಿ_ಚಂಪಕಾ_ಕಾದಂಬರಿ_ಸ್ಮಾರಕದ_ಅಭಿವೃದ್ದಿ_ಸಂಶೋದನೆಗೆ_ಕಾರಣವಾಗುತ್ತಿರುವುದು_ಆಶ್ಚಯ೯ ಒಂದು ಪುಸ್ತಕ ಇಷ್ಟೆಲ್ಲ ಪರಿಣಾಮ ಬೀರಬಲ್ಲದಾ? ಗೊತ್ತಿಲ್ಲ, ಸರ್ಕಾರ ಜನರ ನಿರ್ಲಕ್ಷ್ಯದಿಂದ ಆತ್ಮಹತ್ಯಾ ತಾಣ, ಬೂತ ಪ್ರೇತ ಇದೆ ಎಂಬ ಭಯ ಹುಟ್ಟಿಸಿದ್ದ, ಚಂಪಕಾ ಎಂಬ ಸೂಳೆಗಾಗಿ ರಾಜ ನಿರ್ಮಿಸಿದ್ದಾರೆ ಎಂಬ ಜನರ ಬಾಯಲ್ಲಿ ಬರುತ್ತಿದ್ದ ಚಂಪಕಾ ಸರಸ್ಸು ನಿಮಿ೯ಸಿದ್ದಾದರು ಏಕೆ?. ನಾನು ಸ್ಥಳಿಯ ಜನಪದದಲ್ಲಿ ಇದ್ದ ಕಥೆಯ ಎಳೆ ಹಿಡಿದು ನಂತರ ಈಗ ಅಳಿಸಿ ಹೋದ ಲಾವಣಿಯಲ್ಲಿ ಕೇಳಿ, ಇಟಲಿ ಪ್ರವಾಸಿ ಡೊಲ್ಲಾ ವಲ್ಲೆ 1624 ರ ನವೆಂಬರ್ 8ಕ್ಕೆ ಕೆಳದಿ ರಾಜ ವೆಂಕಟಪ್ಪರ ಬೇಟಿ ಇಕ್ಕೇರಿಯಲ್ಲಿ ಮಾಡಿದಾಗ ನಮೂದಿಸಿದ ಪತ್ರ, ಇತಿಹಾಸಕಾರ ಹೆಚ್.ಎಲ್.ನಾಗೇಗೌಡರ ಸಂಪಾದಕತ್ವದ ಪ್ರವಾಸಿ ಕಂಡ ಇಂಡಿಯಾ ಮತ್ತು ಗೆಜೆಟಿಯರ್ ಮೂಲಗಳನ್ನು ಆದರಿಸಿ ಈ ಪುಸ್ತಕ ಬರೆದಿದ್ದೆ. ...