ಭಾಗ -38, ಆನಂದಪುರಂ ಇತಿಹಾಸ, ಶಿವಮೊಗ್ಗ ಜಿಲ್ಲೆಯ ರಕ್ತಸಿಕ್ತ ಈಸೂರು ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷ್ ಸರ್ಕಾರದ ಕಣ್ಣು ತಪ್ಪಿಸಿ ಭೂಗತರಾಗಲು ಬದರಿನಾರಾಯಣ ಅಯ್ಯ೦ಗಾರರ ಶಿಪಾರಸ್ಸಿನಂತೆ ಸಹಾಯ ಮಾಡಿದ ಆನಂದಪುರಂ ಸ್ವಾತಂತ್ರ್ಯ ಹೋರಾಟಗಾರ ಎ.ರಾಮರಾವ್
#ಭಾಗ_38. #ಆನಂದಪುರಂ_ಇತಿಹಾಸ. #ಸ್ವಾತಂತ್ರ_ಹೋರಾಟದಲ್ಲಿ_ಆನಂದಪುರಂ #ಬದರಿನಾರಾಯಣ್_ಅಯ್ಯ೦ಗಾರರ_ಶಿಪಾರಸ್ಸಿನಂತೆ_ರಾಮರಾವ್_ಈಸೂರು_ಹೋರಾಟಗಾರರಿಗೆ_ಸಹಾಯ_ಮಾಡುತ್ತಾರೆ. #ಸ್ವಲ್ಪ_ರಹಸ್ಯ_ಸೋರಿದ್ದರೂ_ರಾಮರಾವ್_ನೇಣಿಗೆ_ಕೊರಳು_ಕೊಡಬೇಕಾಗಿದ್ದ_ಸಂದರ್ಭ #ಇತಿಹಾಸದಲ್ಲಿ_ದಾಖಲಾಗದ_ರಹಸ್ಯ_ಕಾರ್ಯಾಚರಣೆ_ಈಸೂರು_ಸ್ವಾತಂತ್ರ_ಹೋರಾಟದಲ್ಲಿ #ಭಾಗವಹಿಸಿದವರಿಗೆ_ಭೂಗತರಾಗಲು_ಆನಂದಪುರ೦_ಅಯ್ಯ೦ಗಾರ್_ಕುಟುಂಬದ_ಸಹಾಯ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ ಚಳವಳಿ) 1942 ರಲ್ಲಿ ತೀವ್ರವಾಗಿ ಆಗಸ್ಟ್ 9-1942 ರಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟದ ನೇತಾರರೆಲ್ಲ ಜೈಲು ಸೇರಿದ್ದರು ಆಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಈಸೂರಿನಲ್ಲಿ ಸಾಹುಕಾರ್ ಬಸವಣ್ಯಪ್ಪರ ಮುಂದಾಳತ್ವದಲ್ಲಿ ಪ್ರತಿನಿತ್ಯ ಪ್ರಭಾತ್ ಪೇರಿ ನಡೆಯುತ್ತಿರುತ್ತದೆ. ಇದು ಬ್ರಿಟೀಶ್ ಸರ್ಕಾರದ ಸ್ಥಳಿಯ ಅಧಿಕಾರಿಗಳಿಗೆ ಅಪತ್ಯ ಆಗುತ್ತದೆ ಈ ಬಿನ್ನಾಭಿಪ್ರಾಯ ದೊಡ್ಡದಾಗಿ 25- ಸೆಪ್ಟೆಂಬರ್-1942 ರಲ್ಲಿ ಈಸೂರಿನ ನಿವಾಸಿಗಳು "ಈಸೂರು ಸ್ವಾತಂತ್ರ್ಯ" ವಾಯಿತೆಂದು ಘೋಷಿಸುತ್ತಾರೆ, ರಾಷ್ಟ್ರದ್ವಜ ಹಾರಿಸುತ್ತಾರೆ ಇದರಿಂದ ಮರುದಿನ ಅಂದರೆ 28- ಸೆಪ್ಟೆಂಬರ್ - 1942 ರಂದು ಈಸೂರಿಗೆ ಬಂದ ಅಮಲ್ದಾರ್ ಚನ್ನಕೃಷ್ಣಪ್ಪ ಮತ್ತು ಪೋಲಿಸ್ ಅಧಿಕಾರಿ ಕೆಂಚೆ ಗೌಡರ ಹತ್ಯೆಯಾಗುತ್ತದೆ. ಇದರಿಂ...