Blog number 896. ಅಭಿನಂದನೆಗಳು. ನಮ್ಮ ಹಳ್ಳಿಯ ಪಕ್ಕದೂರಿನ ನಮ್ಮ ಗೆಳೆಯರಾದ ಕ್ರಷರ್ ರಾಜಶೇಖರ ಗೌಡರ ಪುತ್ರ ರಾಹುಲ್ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂನಲ್ಲಿ ಆರನೇ ರ್ಯಾಂಕ್ ಪಡೆದಿದ್ದಾರೆ, ನೂತನವಾಗಿ ಶಿವಮೊಗ್ಗದಲ್ಲಿ ATNCC ಸಂಜೆ ಕಾಲೇಜು ಪ್ರಾರಂಬಿಸಿದ ವರ್ಷದಲ್ಲಿಯೇ ರ್ಯಾಂಕ್ ಪಡೆದು ಸರ್ವಕಾಲಿಕ ದಾಖಲೆ ಮಾಡಿದ್ದಾರೆ.
#ಬಿಕಾಂನಲ್ಲಿ_ಆರನೇ_ರ್ಯಾ0ಕ್_ಗಳಿಸಿದ_ನಮ್ಮೂರ_ಪಕ್ಕದ_ಹುಡುಗ_ರಾಹುಲ್. #ಶಿವಮೊಗ್ಗದ_ರಾಷ್ಟ್ರೀಯ_ಶಿಕ್ಷಣಸಂಸ್ಥೆಯ_ಸಂಜೆ_ಕಾಲೇಜಿಗೆ_ಹಿರಿಮೆ. #ಬಟ್ಟೆಮಲ್ಲಪ್ಪದ_ಕ್ರಷರ್_ರಾಜಶೇಖರಗೌಡರ_ಪುತ್ರ #ಹಳ್ಳಿಗಾಡಿನ_ಈ_ಪ್ರತಿಭಾವಂತ_ವಿದ್ಯಾರ್ಥಿ_ಸಾಧನೆ_ಗ್ರಾಮೀಣ_ವಿದ್ಯಾರ್ಥಿಗಳಿಗೆ_ಪ್ರೇರಣೆಯಾಗಲಿ. #ಸಂಘ_ಸಂಸ್ಥೆಗಳು_ರಾಹುಲ್_ಸಾಧನೆ_ಗುರುತಿಸಿ_ಅಭಿನಂದಿಸಬೇಕು. ಬಟ್ಟೆಮಲ್ಲಪ್ಪದ ಕ್ರಷರ್ ರಾಜಶೇಖರ ಗೌಡರೆಂದೆ ಜನ ಕರೆಯುವ ಜಿಲ್ಲೆಯಾದ್ಯಂತ ಚಿರಪರಿಚಿತರಾದ ಈಗ ಜನರ ಆರೋಗ್ಯಕ್ಕಾಗಿ ಹೈಡ್ರೋ ವಾಟರ್ ಕಪ್ (ಆಲ್ಕಲೇನ್ ವಾಟರ್) ಅಧಿಕೃತ ಮಾರಾಟಗಾರರು. ಇವರ ಆರೋಗ್ಯ ಸಂಪೂರ್ಣ ಹದಗೆಟ್ಟು ನೋಡಿದವರೂ ರಾಜಶೇಖರ ಗೌಡರು ಬದುಕಲಾರರು ಎಂದು ತೀರ್ಮಾನಿಸಿದಾಗಲೆ ಗೌಡರು ಚೇತರಿಸಿಕೊಂಡಿದ್ದು ನಿತ್ಯ ಈ ಆಲ್ಕಲೇನ್ ನೀರು ಸೇವಿಸಿದ್ದರಿಂದ !!. ಇವರು ಸಾಗರ ತಾಲ್ಲೂಕಿನ ನನ್ನ ಯಡೇಹಳ್ಳಿ ಗ್ರಾಮ ಪಂಚಾಯತನ ಘಂಟಿನ ಕೊಪ್ಪದ ಊರಿನವರು, ನನ್ನ ಅಣ್ಣ ಕೆ ನಾಗರಾಜರ ಕ್ಲಾಸ್ ಮೇಟ್, ಇವರನ್ನು ಶಾಲಾ ದಿನದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದವರು, ಶಿಕ್ಷಕರು ಇವರಿಗೆ ಆರ್ಕಮಿಡಿಸ್ ಎಂದೇ ಕರೆಯುವಂತ ಬುದ್ದಿವಂತರು. ಘಂಟಿನ ಕೊಪ್ಪದ ಆ ಕಡೆ ದಿಂಬ ಎಂದು ಜನ ಕರೆಯುವ ಪ್ರದೇಶದ ಬಹುತೇಕ ಮನೆಗಳು ರಾಜಶೇಖರಗೌಡರ ಖುಷ್ಕಿ ಜಮೀನನಲ್ಲಿದೆ ಇವತ್ತಿಗೂ ಊರ ಜನರಿಗೆ ತೊಂದರೆ ಕೊಡದವರು. ಇವರ...