Skip to main content

Posts

Showing posts with the label Mr Subbarao near villager of Ballibylu was merit student

ಭಾಗ -35 ಆನಂದಪುರಂ ಇತಿಹಾಸ. ಆನಂದಪುರಂ ಸಮೀಪದ ಬಳ್ಳಿಬೈಲು ಗ್ರಾಮದ ಕೊಂಗನಾಸಳ್ಳಿ ಸುಬ್ಬರಾವ್ ವಿದ್ಯಾರ್ಥಿ ಜೀವನದಲ್ಲಿ ಆನಂದಪುರಂನ ಪಿಯುಸಿ ಪ್ರಪ್ರಥಮ ಬ್ಯಾಚ್ ನಲ್ಲಿ ಸೈನ್ಸ್ ವಿಭಾಗದಲ್ಲಿ ಉತ್ತೀರ್ಣ ಆದ ಮೊದಲ ಪ್ರತಿಭಾವಂತರು ನಂತರ ಸುಬ್ಬಣ್ಣ ನಾಯಕರ ರೈತ ಬಂದು ಎಂಬ ಬೃಹತ್ ಉದ್ಯಮದಲ್ಲಿ ಉದ್ಯೋಗಿ ಆಗಿ ನಂತರ ಇಡೀ ರೈತ ಬಂದು ಸಂಸ್ಥೆ ಖರೀದಿಸಿ ಅಭಿವೃದ್ದಿ ಮಾಡಿದ ಸಾದನೆ ಸಾಮಾನ್ಯವಲ್ಲ.

#ಭಾಗ_35. #ಆನಂದಪುರಂ_ಇತಿಹಾಸ. #ಸುಬ್ಬಣ್ಣನಾಯಕರ_ಶಿಷ್ಯನಾಗಿ_ಸುಬ್ಬಣ್ಣನಾಯಕರ_ಆಸ್ತಿ_ಖರೀದಿಸಿದ_ಸುಬ್ಬರಾವ್ . #ಆನ೦ದಪುರಂ_ಸಮೀಪದ_ಬಳ್ಳಿಬೈಲ್_ಎಂಬ_ಹಳ್ಳಿಯವರು. #ಬದರಿನಾರಾಯಣ್_ಅಯ್ಯಂಗಾರರು_ಮಂಜೂರು_ಮಾಡಿಸಿದ್ದ #ಪಿಯುಸಿ_ಮೊದಲ_ಬ್ಯಾಚಿನಲ್ಲಿ_ಸಯನ್ಸನಲ್ಲಿ_ಉತ್ತೀರ್ಣರಾದ_ಏಕೈಕ_ಪ್ರತಿಭಾವಂತ_ವಿದ್ಯಾರ್ಥಿ #ರೈತಬಂದು_ಹೆಸರು_ಸಂತೋಷ್_ಎ೦ದು_ಬದಲಿಸಿ_ಯಶಸ್ವಿ_ಉದ್ದಿಮೆದಾರದವರು. #ಉದ್ಯಮದಲ್ಲಿ_ಅನೇಕ_ಕನಸು_ನನಸಾಗುವ_ಮೊದಲೆ_ಇಹಲೋಕ_ತ್ಯಜಿಸಿದ್ದು_ವಿಷಾದನೀಯ.     ದುಗ೯ಮ ಹಳ್ಳಿಯಲ್ಲಿ ಜನಿಸಿ ದೊಡ್ಡ ಉದ್ದಿಮೆದಾರರಾಗಿ ಆನಂದಪುರಂನ ಘನತೆ ಹೆಚ್ಚಿಸಿದ್ದ ಸುಬ್ರಾವ್ ಆನಂದಪುರಂನ ಸಂತೋಷ್ ರೈಸ್ ಇಂಡಸ್ಟ್ರಿಸ್ ಬೃಹತ್ ಅಕ್ಕಿ ಅವಲಕ್ಕಿ ಗಿರಣಿ ಮತ್ತು ಸಂತೋಷ್ ಆಗ್ರೋ ಎಂಬ ಬೃಹತ್ ಕೋಲ್ಡ್ ಸ್ಟೋರೇಜ್ ಗಳ ಮಾಲಿಕರಾದ ಶ್ರೀ ಸುಬ್ಬ ರಾವ್ ಇವತ್ತು ಇಲ್ಲ.   ಇವರ ಜೀವನದ ಹಾದಿ ಅತ್ಯಂತ ದುಗ೯ಮ, ಸಾಗರ ತಾಲ್ಲೂಕಿನ ಆನ೦ದಪುರಂ ಹೋಬಳಿಯ ಬಳ್ಳಿ ಬೈಲು ಗ್ರಾಮದ ಕೊಂಗನಾಸಳ್ಳಿ ಎಂಬ ಹಳ್ಳಿಯ ಮಧ್ಯಮ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಇವರು ಆನಂದಪುರಂನಲ್ಲಿ ವಿದ್ಯಾ ಮಂತ್ರಿ ಬದರಿನಾರಾಯಣ್ ಅಯ್ಯOಗಾರ್ ಕುಟುಂಬದವರು ಪ್ರಾರಂಬಿಸಿದ ಪಿಯುಸಿ ತರಗತಿಯ ಪ್ರಥಮ ಬ್ಯಾಚ್ ನಲ್ಲಿ ಸೈನ್ಸ್ ನಲ್ಲಿ ಉತ್ತಿಣ೯ರಾದ ಏಕೈಕ ವಿದ್ಯಾಥಿ೯ ಸುಬ್ಬ ರಾವ್.    ಕೊಂಗನಾಸಳ್ಳಿಯಿ೦ದ ಆನಂದಪುರಕ್ಕೆ ...