Skip to main content

Posts

Showing posts with the label Firstcrope of Arasalu tender mango of 2024

Blog number 2005. ಈ ವರ್ಷದ 2024ರ ಮೊದಲ ಅರಸಾಳಿನ ಮಾವಿನ ಮಿಡಿ

#ಮಾವಿನ_ಮಿಡಿ_ಮಲೆನಾಡಿಗರಿಗೆ_ಪಂಚಪ್ರಾಣ #ಕಳೆದ_ವರ್ಷ_ಮಾವಿನಮಿಡಿಗೆ_ಬರ_ಬಂದಿತ್ತು_ವಿಪರೀತ_ಇಬ್ಬನಿ #ಈ_ವರ್ಷ_ವಿಪರೀತ_ಬಿಸಿಲು_ಮಲೆನಾಡಿನ_ಉಪ್ಪಿನಕಾಯಿ_ಬಳಕೆದಾರರ #ಪ್ರಖ್ಯಾತ_ಬ್ರಾಂಡ್_ಅರಸಾಳು_ಅಪ್ಪೆಮಿಡಿ_ಈ_ವರ್ಷವೂ_ಕಷ್ಟ. https://youtube.com/shorts/LAMU1ZaEakY?feature=shared   ಪಶ್ಚಿಮಘಟ್ಟದ ಮಲೆನಾಡು ಪರಿಸರ ನನ್ನ ಹುಟ್ಟೂರು ಆದ್ದರಿಂದ ನನಗೆ ಈ ಪ್ರದೇಶದಲ್ಲಿ ಕಾಲಕಾಲಕ್ಕೆ ಬರುವ ಕಣ್ಣು ಕಾಯಿ ಸವಿಯದಿದ್ದರೆ ಮನಸ್ಸು ಒಪ್ಪುವುದಿಲ್ಲ ಅದಕ್ಕಾಗಿ ಹೇಗಾದರೂ ಮಾಡಿ ಯಾರಿಂದಲಾದರೂ ಅವುಗಳನ್ನು ತರಿಸಿ ತಿನ್ನೋ ಬಯಕೆ ನನ್ನದು.   ಮಾವಿನ ಮರದಲ್ಲಿ ಹೂವು ಕಾಯಿ ಕಚ್ಚಿದಾಗ ಎಳೆಯದಾದ ಮಾವಿನ ಮಿಡಿಗಳನ್ನು ಕೆಜಿಗಟ್ಟಲೆ ತಿನ್ನುವುದು, ಸ್ವಲ್ಪ ಹುಳಿ ಬಂದಾಗ ಊಟದ ಜೊತೆ ಅನ್ನದ ಪ್ರಮಾಣ ಮೀರಿ ಮಾವಿನ ಮಿಡಿ ತಿನ್ನುವುದು, ಮಾವಿನ ಮಿಡಿ ಕಾಯಿ ಆಗಿ ಹುಳಿ ರೂಪ ಪಡೆದಾಗ ಉಪ್ಪು ಮೆಣಸಿನ ಪುಡಿಯೊಂದಿಗೆ ತಿನ್ನುವುದು ಆಗ ಊರಂಚಿನ ಮಾವಿನ ಮರಗಳನ್ನು ಎಡತಾಕುತ್ತಿದ್ದೆವು.      ಮಾವು ಹಣ್ಣು ಆದಾಗ ವಿಧವಿಧವಾದ ಹಣ್ಣಿನ ರಸ ಸ್ವಾದನೆಗಾಗಿ ಸಿರ್ಸಿ - ಕುಮುಟಾ -ಅಂಕೋಲಾ -ಕಾರವಾರದ ತನಕ ಹುಡುಕಿ ಹೋಗುವ ಪರಿಪಾಠ ಇತ್ತು.   ವರ್ಷ ಪೂರ್ತಿಉಪ್ಪಿನಕಾಯಿ ನನಗೆ ಬೇಕೇ ಬೇಕು ಅದು ಒಂದು ರೀತಿ ಅಲ್ಲ ಕನಿಷ್ಠ 15 ರಿಂದ 20 ರೀತಿ ಉಪ್ಪಿನಕಾಯಿ ನನಗೆ ಇಷ್ಟ.    ನಾನೊಬ್ಬನೇ ಅ...