ಕೇಶವಪುರದ ದಸ್ತಗೀರ್ ಸಾಬರು, ಹಲ್ಲೇ ಕಟ್ಟೊ ಸಾಬರು ಎಂಬ ಅನ್ವರ್ಥನಾಮದ ನನ್ನ ಅತ್ಯಾಪ್ತ ಗೆಳೆಯರು 2011ರ ನನ್ನ ಎತ್ತಿನಗಾಡಿ ಯಾತ್ರೆ ಯಶಸ್ವಿಗೆ ಕಾರಣಕರ್ತರು.
#ಕೇಶವಪುರದ_ದಸ್ತಗೀರು_ಸಾಬರು #ಇವರನ್ನು_ಎತ್ತಿನ_ಹಲ್ಲೇ_ಕಟ್ಟೋ_ಸಾಬರೆಂತಲೆ_ಜನ_ಕರೆಯುವುದು. #ಈಬಾಗದ_ಜನರ_ವಿಶ್ವಾಸ_ಪ್ರೀತಿಗಳಿಸಿದ_ಸಾಹೇಬರು #ನನ್ನ_2011ರ_ಎತ್ತಿನಗಾಡಿ_ಯಾತ್ರೆಗೆ_ಇವರ_ಸಹಾಯ_ಮರೆಯಲುಂಟೆ? 2014 ರಿಂದ ಸಾರ್ವಜನಿಕ ಜೀವನದಿಂದ ವಿಮುಕ್ತನಾದ ಮೇಲೆ ಆವರೆಗಿನ ಅನೇಕ ರಾಜಕಾರಣದ ಗೆಳೆಯರ ಸಂಪರ್ಕವೇ ಇಲ್ಲವಾಗಿದೆ. ಕೇಶವಪುರದ ಮೂಲ ಹೆಸರು ದರೋಡೆಕಾನು ಈ ಹೆಸರು ಬರಲು ಹೊಸನಗರ ಮತ್ತು ಬಟ್ಟೆಮಲ್ಲಪ್ಪದ ರಸ್ತೆ ದಟ್ಟ ಕಾಡಿನ ಮಧ್ಯದಲ್ಲಿ ಶರಾವತಿಗೆ ಸೇರುವ ದೊಡ್ಡ ಹಳ್ಳ ಇಲ್ಲಿದೆ, ಎರೆಡೂ ಭಾಗದಲ್ಲಿ ತುಂಬಾ ಹೆಚ್ಚು ಎನ್ನುವ ಇಳಿಜಾರು ಮತ್ತು Z ಆಕಾರದ ತಿರುವು ಇಲ್ಲಿತ್ತು ಆ ಕಾಲದಲ್ಲಿ ಸರಕು ಸಾಗಾಣಿಕೆಯ ಎತ್ತಿನಗಾಡಿಗಳನ್ನು ಇಲ್ಲಿ ಲೂಟಿ ಮಾಡುವ ಜನ ಈ ಆಯಾ ಕಟ್ಟಿನ ಜಾಗದಲ್ಲಿ ತಮ್ಮ ಕಾಯಾ೯ಚರಣೆ ಮಾಡುತ್ತಿದ್ದರಿಂದ ಈ ಹೆಸರು. ಈಗಿನ ಯುವಕರು ತಮ್ಮ ಈ ಕಳಂಕದ ಹೆಸರನ್ನು #ಕೇಶವಪುರ ಅಂತ ಬದಲಿಸಿದ್ದಾರೆ, ಬ್ರಿಟಿಷರ ಕಾಲದ ಹಳೇ ಸೇತುವೆ ತೆಗೆದು ದೊಡ್ಡ ಸೇತುವೆ ಆಗುವಾಗ ತಿರುವು ತಿದ್ದಿದ್ದಾರೆ ಇಳಿಜಾರು ಗೊತ್ತಾಗುವುದಿಲ್ಲ, ರಸ್ತೆ ಬದಿಯಲ್ಲಿ ಸಾಲು ಮನೆಗಳು, ಬಸ್ ನಿಲ್ದಾಣ ಸಮೀಪದಲ್ಲಿ ರೈತರ ಕಬ್ಬು ಬೆಲ್ಲ ಮಾಡುವ ಕಾರ್ಖಾನೆ ಹೀಗೆ ಅಲ್ಲಿ #ದರೋಡೆಕಾನ್ ಎಂಬುದು ಇತ್ತು ಎನ್ನುವ ಕುರುಹು ಈಗಿಲ್ಲ ಮತ್ತು ಆ ದಿನದ ನೆನಪು ಈಗ ಇಲ್ಲಿರುವ ಹೊಸಬರಿಗೆ ಗೊತ್ತೂ ಇಲ್ಲ. ಇಲ್ಲಿಯೇ ರಸ್ತೆ ಬದಿಯ...