Skip to main content

4113.ತಮಿಳು_ಚಿತ್ರರಂಗದ_ಯಶಸ್ವಿ_ನಿರ್ಮಾಪಕ_ನಟ_ಪಿರಮಿಡ್_ನಟರಾಜ್


ತಮಿಳು_ಚಿತ್ರರಂಗದ_ಯಶಸ್ವಿ_ನಿರ್ಮಾಪಕ_ನಟ_ಪಿರಮಿಡ್_ನಟರಾಜ್

  ನನ್ನ ರೆಸ್ಟೋರೆಂಟ್ ಉದ್ಯಮಕ್ಕೆ ಪ್ರೇರಕರು ಅವರು, ನನಗೆ ಅವರಿಂದ ಅನೇಕ ಪ್ರೋತ್ಸಾಹ ದೊರೆತಿತ್ತು, ಅವರು ಒಬ್ಬ ವಿಶೇಷ ಕ್ರಿಯಾಶೀಲ ವ್ಯಕ್ತಿ

 ಖ್ಯಾತ ನಿಧೇ೯ಶಕ ಕೆ. ಬಾಲಚಂದರ್ ಮತ್ತು ಇವರ ಜೋಡಿ ನೀಡಿದ ಸೂಪರ್ ಹಿಟ್ ಸಿನಿಮಾಗಳು,ಇವರ ತಮಿಳು ಚಿತ್ರ ಅವಲ್ ಒರು ಥೋಡರ್ ಕತೈ ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾ.

  ಪಿರಮಿಡ್ ನಟರಾಜ್ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಇವರು 1997 ರಲ್ಲಿ ಸ್ಥಾಪಿಸಿದ ಪಿರಮಿಡ್ ಎಂಟರ್ ಟೈನ್ ಮೆಂಟ್ ಲಿ. ಸಂಸ್ಥೆಯ ಪ್ರಖ್ಯಾತಿ ನಟರಾಜ್ ಹೆಸರಿಗೆ ಪಿರಮಿಡ್ ಸೇರಲು ಕಾರಣ.

    ಪ್ರಖ್ಯಾತ ನಿಧೇ೯ಶಕ ಕೆ.ಬಾಲಚಂದರ್ ಜೊತೆ ಕವಿತಾಲಯ ಸಂಸ್ಥೆ ಪೋಷಕರಾಗಿ ಅನೇಕ ಯಶಸ್ಸಿಗೆ ಕಾರಣರಾದರು.

  ​ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಮತ್ತು ಕೆಲವು ತೆಲುಗು ಸಿನಿಮಾಗಳಲ್ಲಿ ಇವರು ನಾಯಕನ ತಂದೆಯಾಗಿ, ಖಳನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ನಟನಾಗಿ 
​ಅಲೈಪಾಯುದೆ  ಮಣಿರತ್ನಂ ನಿರ್ದೇಶನದ ಈ ಸೂಪರ್‌ಹಿಟ್ ಸಿನಿಮಾದಲ್ಲಿ ನಾಯಕ ಮಾಧವನ್ ಅವರ ತಂದೆಯ (ವರದರಾಜನ್) ಪಾತ್ರದ ಮೂಲಕ ಇವರಿಗೆ ದೊಡ್ಡ ಬ್ರೇಕ್ ಸಿಕ್ಕಿತು.

 ​ಫ್ರೆಂಡ್ಸ್ ನಲ್ಲಿ ವಿಜಯ್ ಮತ್ತು ಸೂರ್ಯ ನಟನೆಯ ಈ ಸಿನಿಮಾದಲ್ಲಿ ಗೌತಮ್ (ವಿಜಯ್) ತಂದೆಯ ಪಾತ್ರ.

  ​ವಿರುಮಾಂಡಿ ಕಮಲ್ ಹಾಸನ್ ಅವರ ಈ ಪ್ರಸಿದ್ಧ ಸಿನಿಮಾದಲ್ಲಿ 'ವೈದ್ಯನಾಥನ್' ಎಂಬ ಪ್ರಮುಖ ಪಾತ್ರ.

  ​ಶಿವಾಜಿ ದಿ ಬಾಸ್ರಜನಿಕಾಂತ್ ಅಭಿನಯದ ಈ ಬ್ಲಾಕ್‌ಬಸ್ಟರ್ ಸಿನಿಮಾದಲ್ಲಿ ವಕೀಲರ ಪಾತ್ರ.

   ​ತುಳ್ಳುವದೊ ಇಳಮೈ ಧನುಷ್ ಅವರ ಮೊದಲ ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರ.

​ವಿಲನ್ ಅಜಿತ್ ಕುಮಾರ್ ನಟನೆಯ ಈ ಸಿನಿಮಾದಲ್ಲಿ ಸಚಿವರ  ಪಾತ್ರ.

 ​ಇತರ ಗಮನಾರ್ಹ ಚಿತ್ರಗಳು ಉದಯ (ವಿಜಯ್ ನಟನೆ), ಚಾರ್ಲಿ ಚಾಪ್ಲಿನ್, ಸಮುದ್ರಂ, ಅಳಗಿ, ಅಳಗಿಯ ತೀಯೇ, ಕರುಮೇಗಂಗಳ್ ಕಲೈಗಿಂದ್ರನ (2023).

  ನಿರ್ಮಾಪಕರಾಗಿ ಪಿರಮಿಡ್ ಎಂಟರ್‌ಟೇನ್‌ಮೆಂಟ್' ಬ್ಯಾನರ್ ಅಡಿಯಲ್ಲಿ ಇವರು ಹಲವು ಜನಪ್ರಿಯ ಸಿನಿಮಾಗಳನ್ನು ನಿರ್ಮಿಸಿದ್ದಾರೆ ಹಾಗೂ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ:

  ​ರಿಧಮ್  ಅರ್ಜುನ್ ಸರ್ಜಾ ಮತ್ತು ಮೀನಾ ಅಭಿನಯದ ಪ್ರಸಿದ್ಧ ಸಿನಿಮಾ.

  ​ಸಂಗಮಮ್ ಎ.ಆರ್. ರಹಮಾನ್ ಸಂಗೀತ ಸಂಯೋಜನೆಯ ಹಿಟ್ ಸಿನಿಮಾ.

  ​ಪಿಸ್ತಾ ಕಾರ್ತಿಕ್ ಅಭಿನಯದ ಹಾಸ್ಯ ಪ್ರಧಾನ ಚಿತ್ರ.

   ​ಲವ್ ಬರ್ಡ್ಸ್ ಪ್ರಭುದೇವ ನಟನೆಯ ಸಿನಿಮಾ.

   ​ಉದಯ  ಮತ್ತು ಎಟ್ಟುಪಟ್ಟಿ ರಾಸ (1997).

  ಪಿರಮಿಡ್ ನಟರಾಜರು 60 ಕ್ಕೂ ಹೆಚ್ಚು ಚಲನ ಚಿತ್ರ ನಿರ್ಮಾಣ ಮಾಡಿದ್ದಾರೆ ಇವರ ನಿರ್ಮಾಣದಲ್ಲಿ ಕೆ.ಬಾಲಚಂದರ್ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿದ್ದ ಅವಲ್ ಒರು ಥೋಡರ್ ಕತೈ ಸಿನಿಮಾ ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಆಗಿ ಪ್ರಖ್ಯಾತಿ ಆಗಿದ್ದು ಇತಿಹಾಸ.

 2015ರಲ್ಲಿ ಪಿರಮಿಡ್ ನಟರಾಜ್ ಇನ್ನೊಬ್ಬ ನಿರ್ಧೇಶಕ ವೆಂಕಟ್ ಜೊತೆ ಅನೇಕ ಭಾರಿ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನ ವಿಕ್ಟೋರಿಯಾ ಕಾಟೇಜಿನಲ್ಲಿ ತಂಗುತ್ತಿದ್ದರು ಅವಾಗ ಅವರು ತಮ್ಮ ಉಪಹಾರ ಊಟಕ್ಕೆ ನಮ್ಮ ಮಲ್ಲಿಕಾ ವೆಜ್  ಬಳಸುತ್ತಿದ್ದರು.

 ಯಶಸ್ವೀ ಉದ್ಧಿಮೆದಾರರಾದ ಇವರು ಇವರದ್ದೇ ಸ್ವಂತ #ಮಾವುಡು_ಇನ್ ಎಂಬ ಪ್ರಸಿದ್ದ ಹೋಟೆಲ್ ಹೊಂದಿದ್ದಾರೆ, ಇಂತವರ ಮಾತು ಹೊಸದಾಗಿ ಹೋಟೆಲ್ ಉದ್ಯಮ ವೃತ್ತಿ ಪ್ರಾರಂಬಿಸಿದ ನನ್ನಂತವರು ಪಾಲಿಸದೇ ಇರುವುದೆಂತು ... ಆದ್ದರಿಂದಲೇ ನಾನು ಅವರು ತಿಳಿಸಿದ ಅನೇಕ ಸಲಹೆ ನನ್ನ ಹೋಟೆಲ್ ಉದ್ಯಮದಲ್ಲಿ ಅಳವಡಿಸಿದ್ದೇನೆ.

  ಇವತ್ತು ಫೇಸ್ ಬುಕ್ 2015ರ ಜುಲೈ 29ರಂದು ಪಿರಮಿಡ್ ನಟರಾಜ್ ಮತ್ತು ವೆಂಕಟ್ ಜೊತೆ ನಮ್ಮ ಕಾಟೇಜ್ ಎದರು ನಾನು ತೆಗೆಸಿಕೊಂಡ ಪೋಟೋ ಆ ದಿನದ ನೆನಪು ಮಾಡಿಸಿತು.

#pyramidnataraj #TamilFilmIndustry #tamilcinema #filmdirector #tamilfilmdirectorvenkat #venkattamil

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...