4109. ಗೋರೊಚನ_ನಿಮಗೆ_ಗೊತ್ತಾ? ಗೋರೋಚನ ಎಂಬುದು ಮುಖ್ಯವಾಗಿ ಗೋವಿನ (ಆಕಳ) ಪಿತ್ತಕೋಶದಲ್ಲಿ ರೂಪಗೊಳ್ಳುವ ಒಂದು ಅಪರೂಪದ ಹಳದಿ-ಕಿತ್ತಳೆ ಬಣ್ಣದ ಪದಾರ್ಥ. ಇದನ್ನು ಆಯುರ್ವೇದ, ಪೂಜಾವಿಧಿಗಳು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನದಿಂದ ನೋಡಲಾಗುತ್ತದೆ.
ಗೋರೊಚನ_ನಿಮಗೆ_ಗೊತ್ತಾ?
ಗೋರೋಚನ ಎಂಬುದು ಮುಖ್ಯವಾಗಿ ಗೋವಿನ (ಆಕಳ) ಪಿತ್ತಕೋಶದಲ್ಲಿ ರೂಪಗೊಳ್ಳುವ ಒಂದು ಅಪರೂಪದ ಹಳದಿ-ಕಿತ್ತಳೆ ಬಣ್ಣದ ಪದಾರ್ಥ.
ಇದನ್ನು ಆಯುರ್ವೇದ, ಪೂಜಾವಿಧಿಗಳು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನದಿಂದ ನೋಡಲಾಗುತ್ತದೆ.
ಆನೆ, ಗೋವು ಮತ್ತು ಹಿಮಾಲಯದ ಯಾಕ್ ನಲ್ಲಿ ಮಾತ್ರ ಲಭ್ಯ.
ಮಲೆನಾಡು ಗಿಡ್ಡ ತಳಿಯ ಗೋವುಗಳಲ್ಲಿ ಇದು ಹೆಚ್ಚು ಲಭ್ಯ.
ಇದು ಪ್ರಾಣಿಜನ್ಯ ಆಯುರ್ವೇದ,
ಶುದ್ದ ಗೋರೋಚನದ ಬೆಲೆ ಗ್ರಾಮಿಗೆ ಎರೆಡು ಸಾವಿರ!!..
ಔಷದಿಯಾಗಿ, ಸುವಾಸನ ದ್ರವ್ಯದಲ್ಲಿ, ತಂತ್ರವಿದ್ಯೆಯ ವಶೀಕರಣದಲ್ಲಿ, ಅದೃಷ್ಟ ಎಂಬ ನಂಬಿಕೆಯಲ್ಲಿ ಬಳಕೆ.
ಆದುನಿಕ ವೈದ್ಯಕೀಯ ಶಸ್ತ್ರಚಿಕಿತ್ಸಾ ವಿಧಾನ ಬಳಕೆಯ ಸಾವಿರಾರು ವರ್ಷದ ಹಿಂದೆಯೇ
ಭಾರತೀಯರಿಗೆ ಇದೆಲ್ಲದರ ಅರಿವು ಇತ್ತು ಮತ್ತು ಅದರ ಬಳಕೆ ಗೊತ್ತಿರುವುದು ಸೋಜಿಗದ ವಿಷಯ.
ಮೊದಲ ದರ್ಜೆಯ ಗೋರೊಚನ ಆನೆಯ ಮೆದುಳಿನಿಂದ ಪಡೆಯುತ್ತಿದ್ದರೆಂದು ಪುರಾತನ ಕಾಲದಿಂದಲೂ ನಂಬಿಕೆ ಇದೆ.
ಇದನ್ನು ಬಿಟ್ಟರೆ ಗೋವಿನ ಪಿತ್ತ ಕೋಶದಿಂದ ಪಡೆಯುವುದು ಸದ್ಯದ ಬಳಕೆಯ ಮಾರ್ಗವಾಗಿದೆ.
ಹಿಮಾಲಯ ತಪ್ಪಲಲ್ಲಿ ಮತ್ತು ನೇಪಾಳದಲ್ಲಿ ಯಾಕ್ ಪ್ರಾಣಿಯಲ್ಲಿ ಮತ್ತು ಗೋವುಗಳಲ್ಲಿ ಸಿಗುತ್ತದೆ ಆದರೆ ಎಲ್ಲಾ ಗೋವುಗಳಲ್ಲಿ ಗೋರೋಚನ ಇದು ಸಿಗುವುದಿಲ್ಲ.
ಪಶ್ಚಿಮ ಘಟ್ಟಗಳ ಮಲೆನಾಡು ಗಿಡ್ಡ ತಳಿಯಲ್ಲಿ ಗೋರೋಚನ ಹೆಚ್ಚು ಸಿಗುತ್ತದೆ ಎಂಬ ನಂಬಿಕೆ ಸತ್ತ ಗೋವಿನ ಚರ್ಮ ಸುಲಿಯುವವರಲ್ಲಿ ಮತ್ತು ಅದನ್ನು ಖರೀದಿಸುವರಲ್ಲಿ ಇತ್ತು.
ಗೋವಿನ ಪಿತ್ತ ಕೋಶದ ಮೇಲೆ ದೊಡ್ಡ ಗಾತ್ರದ ಅಡಿಕೆಯಂತ ಗಂಟುಗಳು ಅಥವ ಕಲ್ಲುಗಳ ರಚನೆಯೇ ಗೋರೋಚನ.
ಹಳದಿ ಮೇಣದ ರೂಪದ ಇದು ಒಣಗಿದ ನಂತರ ಗಟ್ಟಿಯಾಗಿ ಕೆಂಪು ಮತ್ತು ಕಂದು ಬಣ್ಣವಾಗುತ್ತದೆ.
ಇದು ಪುರಾತನ ಕಾಲದಿಂದಲೂ ಭಾರತೀಯ ಆಯುರ್ವೇದ ಔಷದಿ ಆಗಿ ಬಳಕೆಯಲ್ಲಿದೆ.
ಮನೋವೈದ್ಯಕೀಯ ಅಸ್ವಸ್ಥತೆಗೆ ಮತ್ತು ವಿಷಕ್ಕೆ ಪ್ರತಿ ವಿಷವಾಗಿ ಗೋರೋಚನ ಬಳಸುತ್ತಿದ್ದರು.
ಚರ್ಮದ ಕಾಂತಿಯನ್ನು ಹೆಚ್ಚಿಸಲು, ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಅಲರ್ಜಿಗಳನ್ನು ಶಮನಗೊಳಿಸಲು ಬಳಸಲಾಗುತ್ತದೆ.
ಆಯುರ್ವೇದದಲ್ಲಿ ಇದನ್ನು ಜ್ವರ, ವಿಷಾಪಹಾರಿ ಚಿಕಿತ್ಸೆ ಮತ್ತು ನರಮಂಡಲಕ್ಕೆ ಸಂಬಂಧಿಸಿದ ಕೆಲವು ಕಾಯಿಲೆಗಳಿಗೆ ಬಳಸಲಾಗುವ ಔಷಧಗಳಲ್ಲಿ ಉದಾಹರಣೆಗೆ ಗೋರೋಚನಾದಿ ಗುಳಿಕ ಒಂದು ಪ್ರಮುಖ ಘಟಕವಾಗಿ ಬಳಸುತ್ತಾರೆ.
ಇದನ್ನು ಪರಿಮಳ ದ್ರವ್ಯ ತಯಾರಿಕೆಗೆ ಮತ್ತು ತಂತ್ರ ವಿದ್ಯೆಯಲ್ಲನ ವಶೀಕರಣಕ್ಕೆ ಬಳಸುತ್ತಿದ್ದರಂತೆ.
ಇದು ಎಲ್ಲಾ ಗೋವುಗಳಲ್ಲೂ ಸಿಗುವುದಿಲ್ಲ ಎಂಬುದು ಮತ್ತು ಈ ಪ್ರಾಣಿಜನ್ಯ ಆಯುರ್ವೇದ ಅಪರೂಪ ಎಂಬ ಕಾರಣದಿಂದ ಇದಕ್ಕೆ ಹೆಚ್ಚು ಬೆಲೆ ಇದೆ.
ಗೋರೊಚನ ಇರುವ ಗೋವುಗಳು ನಿದ್ದೆಯಲ್ಲಿ ಗೊರಕೆ ಹೊಡೆಯುತ್ತದೆ, ಅದು ಶ್ರೇಷ್ಠ ಎಂಬ ಭಾವನೆ ಇದೆ.
ಆದರೆ ಆಧುನಿಕ ವೈದ್ಯಶಾಸ್ತ್ರದಲ್ಲಿ ಯಾವ ಗೋವಿನ ಪಿತ್ತಕೋಶದಲ್ಲಿ ಲಿವರ್ ಸೊರ್ಯಾಸಿಸ್ ಆಗಿರುತ್ತದೆ ಅಲ್ಲಿ ಅದನ್ನು ಗುಣಪಡಿಸಲು ಪ್ರತಿ ಔಷದವಾಗಿ ಗೋರೋಚನದ ಗಡ್ಡೆಗಳು ಉತ್ಪತಿ ಆಗುತ್ತದೆ ಎನ್ನುತ್ತಾರೆ.
ಶಸ್ತ್ರಚಿಕಿತ್ಸಾ ವಿಧಾನ ಬಳಕೆಗೂ ಮೊದಲೇ ಸಾವಿರಾರು ವರ್ಷಗಳಿಂದ ಭಾರತೀಯರಿಗೆ ಈ ಗೋವಿನ ಪಿತ್ತಕೋಶದ ಗೋರೋಚನದ ಬಳಕೆ ಗೊತ್ತಿರುವುದು ಸೋಜಿಗ ವಿಷಯವೇ ಆಗಿದೆ.
ಇದನ್ನು ಇಂಗ್ಲೀಷ್ ಭಾಷೆಯಲ್ಲಿ Cowstone/ Axegall ಅಂತ ಕರೆಯುತ್ತಾರೆ.
ಭಾರತೀಯ ಹಿಂದೂ ಪೂಜಾ ಪದ್ದತಿಯಲ್ಲಿ ಗೋರೊಚನ ಬಳಕೆ ಇದೆ, ಹಿಂದೂ ಪುರೋಹಿತರಿಗೆ ಇದರ ಮಾಹಿತಿ ಇದೆ ಮತ್ತು ಭಾರತೀಯ ಆಯುರ್ವೇದದ ವೈದ್ಯರಿಗೆ ಇದರ ಬಳಕೆ ಗೊತ್ತಿದೆ.
ಇದನ್ನು ಅತ್ಯಂತ ಪವಿತ್ರ ಹಾಗೂ ಧನಾತ್ಮಕ ಶಕ್ತಿ ನೀಡುವ ದ್ರವ್ಯವೆಂದು ಪರಿಗಣಿಸಲಾಗುತ್ತದೆ.
ಮನೆ ಅಥವಾ ಪೂಜೆಗಳಲ್ಲಿ ಗೋರೋಚನವನ್ನು ಚಂದನ ಅಥವಾ ಕುಂಕುಮದೊಂದಿಗೆ ಬೆರೆಸಿ ಹಣೆಗೆ ತಿಲಕವಾಗಿ ಹಚ್ಚಿಕೊಳ್ಳುವ ಸಂಪ್ರದಾಯವಿದೆ.
ಇದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಗೋರೊಚನ ಮನೆಯಲ್ಲಿದ್ದರೆ ಅದೃಷ್ಟ ಎಂಬ ಭಾವನೆ ಕೂಡ ಇದೆ, ಇದನ್ನು ಮನೆಯ ದೇವರ ಕೋಣೆಯಲ್ಲಿ ಅಥವಾ ಲಾಕರ್‌ನಲ್ಲಿ ಇಡುವುದರಿಂದ ಅದೃಷ್ಟ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಜನಪದದಲ್ಲಿದೆ.
ಶುದ್ಧ ಗೋರೊಚನದ ಇವತ್ತಿನ ಬೆಲೆ ಗ್ರಾಮಿಗೆ ಎರೆಡು ಸಾವಿರ ಅಂದರೆ ಒಂದು ಕಿಲೋ ಗೋರೊಚನದ ಇವತ್ತಿನ ಬೆಲೆ 20 ಲಕ್ಷ !?...
#Cowstone #Axegall #elephant #malenadugidda #ferfume #ayurveda #puja
Comments
Post a Comment