Skip to main content

Posts

Showing posts with the label SNAKE CATCHING RENOMERATION IS FEEDING FOR ORPHANAGE HOMES.

#ಹಾವು ಹಿಡಿದು ಅನಾಥ ಆಶ್ರಮ ನಡೆಸುವ ಪ್ರಭಾಕರ#

#Snake ಪ್ರಬಾಕರ್ ಹೊಸನಗರ ಜೀನಿ ಎಂಬಲ್ಲಿ ಅನಾಥ ಆಶ್ರಮ ನಡೆಸುತ್ತಿದ್ದಾರೆ#        ವಿಷಪೂರಿತ ಹಾವು ಮನೆಯಲ್ಲಿ ಬಂದರೆ ಅದನ್ನ ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡುತ್ತಾರೆ. ಅನಾಥರನ್ನ ಇವರು ಜೋಪಾನ ಮಾಡುತ್ತಾರೆ, ದಲಿತ ವಗ೯ಕ್ಕೆ ಸೇರಿದ ಇವರು ಮಾಡುವ ಸೇವೆಯನ್ನ ಅನೇಕರು ಟೀಕಿಸುತ್ತಾರೆ, ಇವರ ವೇಷ ಭೂಷಣ ನೋಡಿ ಗೇಲಿ ಮಾಡುತ್ತಾರೆ.       ಗೆಳೆಯರಾದ ಇವರು ಮೊನ್ನೆ ಬಂದಾಗ ಮದ್ಯಾಹನ ಮನೆಗೆ ಊಟಕ್ಕೆ ಕರೆದೊಯ್ದಗ ಗೊತ್ತಾಗಿದ್ದು ಇವರು ಸಸ್ಯಹಾರಿ ಅಂತ, ಮದ್ಯ, ತಂಬಾಕು, ಸಿಗರೇಟು ಕೂಡ ಇಲ್ಲ. ಊಟದ ಮಧ್ಯೆ ಜನರು ಇವರ ಬಗ್ಗೆ ಇವರ ಹಿಂದೆ ಆಡಿ ಕೊಳ್ಳುತ್ತಿದ್ದ ಕುಹಕದ ಸತ್ಯ ಅರಿಯಲು ಅನೇಕ ನನ್ನ ಪ್ರಶ್ನೆಗೆ ಅವರು ಉತ್ತರಿಸಿದರು.       ಅದೇನೆಂದರೆ ...... ಇವರಿಗೆ 7 ವಷ೯ ವಯಸ್ಸು ಆದಾಗ ಶೆಟ್ಟರು ಎಂಬ ಹೋಟೆಲ್ ಭಟ್ಟರು ಇವರನ್ನ ತೀಥ೯ಳ್ಳಿ ಸಮಿಪದ ಆರಗದ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದರಂತೆ ಒಂದೆರಡು ವಷ೯ದಲ್ಲಿ ಆ ಹೋಟೆಲ್ ಮಾಲಿಕರಿಗೂ ಶೆಟ್ಟರಿಗೂ ಜಗಳವಾದಾಗ ಆ ಹೋಟೆಲ್ ಬಿಟ್ಟು ಮಂಗಳೂರಿಗೆ ಶೆಟ್ಟರ ಜೊತೆ ಹೋದರಂತೆ, ಇವರ 2 ವಷ೯ದ ದುಡಿಮೆ ಶೆಟ್ಟರು ಖಚು೯ ಮಾಡಿಕೊಂಡಿದ್ದರಂತೆ. ಮಂಗಳೂರಲ್ಲಿ ಕೆಲಸ ಸಿಗದಿದ್ದಾಗ ಮುಂಬೈಗೆ ಹೋಗೋಣ ಅಂತ ಇಬ್ಬರು ಬಸ್ ಹತ್ತಿದ್ದರಂತೆ, ಬೆಳಿಗ್ಗೆ ಮುಂಬೈಯಲ್ಲಿ ಇವರಿಗೆ ಎಚ್ಚರವಾದಾಗ ಶೆಟ್ಟರು ನಾಪತ್ತೆ.     ...