Skip to main content

#ಹಾವು ಹಿಡಿದು ಅನಾಥ ಆಶ್ರಮ ನಡೆಸುವ ಪ್ರಭಾಕರ#

#Snake ಪ್ರಬಾಕರ್ ಹೊಸನಗರ ಜೀನಿ ಎಂಬಲ್ಲಿ ಅನಾಥ ಆಶ್ರಮ ನಡೆಸುತ್ತಿದ್ದಾರೆ#

       ವಿಷಪೂರಿತ ಹಾವು ಮನೆಯಲ್ಲಿ ಬಂದರೆ ಅದನ್ನ ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡುತ್ತಾರೆ. ಅನಾಥರನ್ನ ಇವರು ಜೋಪಾನ ಮಾಡುತ್ತಾರೆ, ದಲಿತ ವಗ೯ಕ್ಕೆ ಸೇರಿದ ಇವರು ಮಾಡುವ ಸೇವೆಯನ್ನ ಅನೇಕರು ಟೀಕಿಸುತ್ತಾರೆ, ಇವರ ವೇಷ ಭೂಷಣ ನೋಡಿ ಗೇಲಿ ಮಾಡುತ್ತಾರೆ.

      ಗೆಳೆಯರಾದ ಇವರು ಮೊನ್ನೆ ಬಂದಾಗ ಮದ್ಯಾಹನ ಮನೆಗೆ ಊಟಕ್ಕೆ ಕರೆದೊಯ್ದಗ ಗೊತ್ತಾಗಿದ್ದು ಇವರು ಸಸ್ಯಹಾರಿ ಅಂತ, ಮದ್ಯ, ತಂಬಾಕು, ಸಿಗರೇಟು ಕೂಡ ಇಲ್ಲ. ಊಟದ ಮಧ್ಯೆ ಜನರು ಇವರ ಬಗ್ಗೆ ಇವರ ಹಿಂದೆ ಆಡಿ ಕೊಳ್ಳುತ್ತಿದ್ದ ಕುಹಕದ ಸತ್ಯ ಅರಿಯಲು ಅನೇಕ ನನ್ನ ಪ್ರಶ್ನೆಗೆ ಅವರು ಉತ್ತರಿಸಿದರು.

      ಅದೇನೆಂದರೆ ...... ಇವರಿಗೆ 7 ವಷ೯ ವಯಸ್ಸು ಆದಾಗ ಶೆಟ್ಟರು ಎಂಬ ಹೋಟೆಲ್ ಭಟ್ಟರು ಇವರನ್ನ ತೀಥ೯ಳ್ಳಿ ಸಮಿಪದ ಆರಗದ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದರಂತೆ ಒಂದೆರಡು ವಷ೯ದಲ್ಲಿ ಆ ಹೋಟೆಲ್ ಮಾಲಿಕರಿಗೂ ಶೆಟ್ಟರಿಗೂ ಜಗಳವಾದಾಗ ಆ ಹೋಟೆಲ್ ಬಿಟ್ಟು ಮಂಗಳೂರಿಗೆ ಶೆಟ್ಟರ ಜೊತೆ ಹೋದರಂತೆ, ಇವರ 2 ವಷ೯ದ ದುಡಿಮೆ ಶೆಟ್ಟರು ಖಚು೯ ಮಾಡಿಕೊಂಡಿದ್ದರಂತೆ. ಮಂಗಳೂರಲ್ಲಿ ಕೆಲಸ ಸಿಗದಿದ್ದಾಗ ಮುಂಬೈಗೆ ಹೋಗೋಣ ಅಂತ ಇಬ್ಬರು ಬಸ್ ಹತ್ತಿದ್ದರಂತೆ, ಬೆಳಿಗ್ಗೆ ಮುಂಬೈಯಲ್ಲಿ ಇವರಿಗೆ ಎಚ್ಚರವಾದಾಗ ಶೆಟ್ಟರು ನಾಪತ್ತೆ.

      ಇಡಿ ದಿನ ದಿಕ್ಕು ಕಾಣದೆ ಅಳುವಾಗ ವೃದ್ದ ಬಿಕ್ಷಕನೋವ೯ ಇವರನ್ನ ಕೆಲ ದಿನ ಸಾಕುತ್ತಾರೆ, ನಂತರ ಸಣ್ಣ ಕೆಲಸಕ್ಕೆ ಸೇರಿಸುತ್ತಾನೆ, ರಾತ್ರಿ ರೈಲು ನಿಲ್ಯಾಣ, ಬಸ್ ನಿಲ್ಡಣಗಳಲ್ಲಿ ಅನೇಕ ವಷ೯ ಕಳೆಯುತ್ತಾರೆ ಆಗಲೇ ಅವರ ಮನಸ್ಸಿನಲ್ಲಿ ಒಂದು ಗುರಿ ರೂಪ ತಳೆಯುತ್ತದೆ, ನಿತ್ಯ ಅಲ್ಲಿ ಅನಾಥರನ್ನ ನೋಡಿದಾಗ ನಾನು ಇಂತವರ ಸೇವೆ ಮಾಡಲು ಅನಾಥ ಆಶ್ರಮ ಮಾಡಬೇಕಂತ.

        ಮುಂದೆ ಹಾವು ಹಿಡಿದು ಆಟ ಆಡಿಸುವ ತಂಡದಲ್ಲಿ ಸೇರಿ ಹಾವು ಹಿಡಿಯುವುದರಲ್ಲಿ ಪರಿಣಿತಿ ಪಡೆದರು, ಅನೇಕ ಹೋಟೆಲ್ಗಳಲ್ಲಿ ಕೆಲಸ ಮಾಡಿದ್ದೆ ಈಗ ಅನಾಥ ಶ್ರಮದ ಕನಸು ನನಸಾಗಿದೆ ಅನೇಕ ದಾನಿಗಳು ಸಹಕಾರ ನೀಡುತ್ತಿದ್ದಾರೆ, ಹಾವು ಹಿಡಿದಾಗ ಜನ ನೀಡುವ ಹಣ ಕೂಡ ಆಶ್ರಮಕ್ಕೆ ಕೊಡುತ್ತೇನೆ ಅಂದರು.

    ಅನಾಥ ಆಶ್ರಮವನ್ನ ಇವರು, ಇವರ ಪತ್ನಿ ಮತ್ತು ತಾಯಿ ಸೇರಿ ನಡೆಸುತ್ತಾರೆ.
ಈ ತಿಂಗಳಿಂದ ಪ್ರತಿ ತಿಂಗಳು ಈ ಅನಾಥ ಆಶ್ರಮಕ್ಕೆ 100 kg ಅಕ್ಕಿ ನೀಡುತ್ತಿದ್ದೇನೆ ಹಾಗೂ ನನ್ನ ಮನವಿಗೆ ಒಪ್ಪಿ ದುುುುಬೈನಲ್ಲಿ ರುವ ಮಿತ್ರ ಸ್ವಾಮಿ ನಾಥನ್ ಕೂಡ ಪ್ರತಿ ತಿಂಗಳು 100 ಕೆಜಿ ಅಕ್ಕಿ ನೀಡುತ್ತಿದ್ದಾಾರೆ.ಮಿ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...