ಕಡಿದಾಳು ಶಾಮಣ್ಣರ ಹೆಸರು ಲಂಕೇಶ್ ಪತ್ರಿಕೆಗಳಲ್ಲಿ ನೋಡಿದ್ದು ಬಿಟ್ಟರೆ ಅವರ ಪರಿಚಯ ಇರಲಿಲ್ಲ. ಶಿವಮೊಗ್ಗದ ನೆಹರೂ ರಸ್ತೆಯ ಎರಡನೆ ತಿರುವಿನ ಪ್ರಕೃತಿ ಮುದ್ರಣಾಲಯದಲ್ಲಿ ಅನೇಕ ಬಾರಿ ಇವರನ್ನ ನೋಡಿದ್ದೆ ಆದರೆ ಪರಿಚಯ ಆಗಿರಲಿಲ್ಲ.
ರೈತ ಸಂಘದ ಉಚ್ಚಾಯ ಸನ್ನಿವೇಶದಲ್ಲೂ ಕಡಿದಾಳು ಶಾಮಣ್ಣರ ಹೆಸರು ಅತಿ ಹೆಚ್ಚು ಕೇಳುತ್ತಿದ್ದೆ, 1995 ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾದಾಗ ರೈತ ಸಂಘದಿಂದ ಸಿದ್ದಪ್ಪ ಎಂಬುವವರು ಸದಸ್ಯರಾಗಿದ್ದರು, ಸದಾ ಹಸಿರು ಶಾಲು ಹೊದ್ದು ಸಭೆಗೆ ಬರುತ್ತಿದ್ದ ಅವರು ಮಿತ ಬಾಷಿಗಳು ಯಾವಾಗಲು ನನ್ನ ಪಕ್ಕದಲ್ಲೆ ಕುಳಿತುಕೊಳ್ಳುತ್ತಿದ್ದರು, ಒಮ್ಮೆ ಜಿಲ್ಲಾ ಪಂಚಾಯತ್ ಸಭೆ ನಡೆಯುವಾಗ ಕಡಿದಾಳು ಶಾಮಣ್ಣ ಗ್ಯಾಲರಿಯಲ್ಲಿ ಬ೦ದು ಕುಳಿತರು ಇದನ್ನ ಸಿದ್ದಪ್ಪರ ಗಮನಕ್ಕೆ ತಂದಾಗ ಸಿದ್ದಪ್ಪ ಗಾಭರಿ ಆದರು "ಕೆಲಸ ಮಾಡಿಸಿಕೊಡುತೀನಿ ಅಂದರು ಬಿಡಲ್ಲ'' ಅಂತ ಚಡ ಪಡಿಸಿದರು, ನಾನು ಶಾಮಣ್ಣರನ್ನ ನೋಡುತ್ತಾ ಸಭಾ ಕಲಾಪ ಆಲಿಸುತ್ತಿದ್ದೆ.
ಶಾಮಣ್ಣ ಸಿದ್ದಪ್ಪರ ಕಡೆಯೇ ನೋಡುತ್ತಾ ಕುಳಿತಿದ್ದರೆ, ಸಿದ್ದಪ್ಪ ಶಾಮಣ್ಣರನ್ನ ನೋಡದಂತೆ ನಟಿಸುತ್ತಿದ್ದರು. ಕೊನೆಗೆ ಶಾಮಣ್ಣ ನನಗೆ ಕೈಸನ್ನೆ ಮಾಡಿ ಸಿದ್ದಪ್ಪರನ್ನ ಕರೆಯಲು ಸನ್ನೆ ಮಾಡಿದರು.ಸಿದ್ದಪ್ಪರಿಗೆ ಎಚ್ಚರಿಸಿದೆ ಸಿದ್ದಪ್ಪ ಮಾತ್ರ ಶಾಮಣ್ಣರ ಕಡೆ ಯಾವ ಕಾರಣಕ್ಕೂ ನೋಡದೆ ನನಗೂ ಆ ಕಡೆ ನೋಡದಂತೆ ಎಚ್ಚರಿಸಿದರು.
ನಂತರ ನಾನು ಪ್ರಸ್ತಾಪಿಸಿದ ಯಾವುದೋ ವಿಚಾರ ದೊಡ್ಡ ಚಚೆ೯ ಆಗಿ ಇಡಿ ಜಿಲ್ಲಾ ಪಂಚಾಯತ ನ ಪ್ರಮುಖ ಸುದ್ದಿ ಆಗಿತ್ತು ಆ ದಿನ.
ಇದಾದ ಯಾವತ್ತೊಒಂದು ದಿನ ಪುಟ್ಟಯ್ಯನವರ ಪ್ರಕೃತಿ ಮುದ್ರಣಾಲಯಕ್ಕೆ ಹೋದಾಗ ಪುಟ್ಟಯ್ಯ ನವರು ಜಿಲ್ಲಾ ಪಂಚಾಯತನಲ್ಲಿ ಕಡಿದಾಳು ಶಾಮಣ್ಣ ರಿಗೆ ಒಂದು ಕೆಲಸ ಆಗ ಬೇಕಂತೆ, ಅವರ ಕ್ಷೇತ್ರದಿಂದ ಗೆದ್ದಿರುವ ಸದಸ್ಯ ಎಷ್ಟು ಹೇಳಿದರೂ ಮಾಡ್ತಾ ಇಲ್ಲ ಅಂತ ಇದ್ದರು ಈ ಶಾಮಣ್ಣ ನಿಮ್ಮ ಮಾತು ಸಭೆ ನಲ್ಲಿ ನೋಡಿದ್ದರಂತೆ ಅದಕ್ಕೆ ಮುಂದಿನ ಸಭೆ ದಿನಾಂಕ ನೋಡಿ ಕೊಂಡು ಬರುತ್ತಾರಂತೆ ಅಂದರು ಖಂಡಿತಾ ಅವರ ಕೆಲಸ ಮಾಡಿ ಕೊಡಿಸುತ್ತೇನೆ ಅಂದೆ.
ಮುಂದಿನ ಸಭೆ ಪ್ರಾರಂಭದಲ್ಲೇ ಕಡಿದಾಳು ಶಾಮಣ್ಣ ಬಂದಿದ್ದರು, ನಾನೆ ಹೋಗಿ ಪರಿಚಯ ಮಾಡಿಕೊಂಡೆ ಅವರು ಹೇಳಿದ ವಿಚಾರ ಅವರ ಊರಿನ ಕುಡಿಯುವ ನೀರಿನ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ, ಆ ಊರಲ್ಲಿ ಮತದಾರರಿಗೆ ರೈತ ಸಂಘದ ಅಭ್ಯಥಿ೯ಗೆಲ್ಲಿಸುವ೦ತೆ ಆತ ಕೆಲಸ ಮಾಡದಿದ್ದರೆ ತಾವು ಜವಾಬ್ದಾರಿ ಅಂತ ಶಾಮಣ್ಣ ಭರವಸೆ ನೀಡಿದ್ದರು ಜನ ಶಾಮಣ್ಣರ ಮಾತಿನಂತೆ ರಾಷ್ಟ್ರೀಯ ಪಕ್ಷದ ಅಭ್ಯಥಿ೯ ಸೋಲಿಸಿ ಸಿದ್ದಪ್ಪರನ್ನ ಗೆಲ್ಲಿ ಸಿದ್ದರು ಆದರೆ ಕಳೆದ ಮೂರು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ೦ದು ಹೇಳುವ ಸಿದ್ದಪ್ಪ ಏನೂ ಮಾಡ್ತಾ ಇಲ್ಲ ಅಂದರು.ಸಾರ್ ಸಿದ್ದಪ್ಪ ಮಿತ ಬಾಷಿಅಂದೆ, ಹೌದರಿ ಆತ ತುಂಬಾ ಒಳ್ಳೆಯವರು ಆದರೆ ಸಭೆಗಳಲ್ಲಿ ಮಾತಾಡೊಲ್ಲ ಅಂದರು, ಅವತ್ತು ಸಿದ್ದಪ್ಪ ರ ಪರವಾಗಿ ಕಡಿದಾಳು ಶಾಮಣ್ಣ ಅಪೇಕ್ಷೆ ಪಟ್ಟ ವಿಷಯ ಸಭೆಯಲ್ಲಿ ಪ್ರಸ್ತಾಪಿಸಿ ಪರಿಹರಿಸಿದೆ.
ನಂತರ ಆಗಾಗ್ಗೆ ಪುಟ್ಟಯ್ಯರ ಮುದ್ರಣಾಲಯದಲ್ಲಿ ಭೇಟಿ ಆದ ನೆನಪು, ಅದರ ನಂತರ ನೆನಪಿನಲ್ಲಿ ಉಳಿಯುವಂತ ಕಾಯ೯ಕ್ರಮ ಕಾಗೋಡು ಹೋರಾಟದ ಸುವಣ೯ ಮಹೋತ್ಸವದಲ್ಲಿ.
ಕಾಗೋಡಿನಿಂದ ಹೊರಟ ಕಾಗೋಡು ಜ್ಯೋತಿ ಕಡಿದಾಳು ತಲುಪಿ ಕಡಿದಾಳು ಮಂಜಪ್ಪರ ಸಮಾದಿ ತಲುಪುವಾಗ ಮದ್ಯರಾತ್ರಿ,ಅಲ್ಲಿ ಕಾಗೋಡು ಜ್ಯೋತಿಯನ್ನ ಸ್ವಾಗತಿಸಿದವರು ಕಡಿದಾಳು ಶಾಮಣ್ಣನವರು, ಮಧ್ಯರಾತ್ರಿಯಲ್ಲಿ ಕಡಿದಾಳು ಮಂಜಪ್ಪರ ಸಮಾದಿ ಹತ್ತಿರ ಬೀಸುತ್ತಿದ್ದ ತಂಗಾಳಿಯೊಂದಿಗೆ ಶಾಮಣ್ಣರ ಸುಶ್ಯಾಯವಾದ ಹಾಡು ಕಾಗೋಡಿನಿಂದ ಬಂದ ನಮಗೆಲ್ಲ ಆಗಿದ್ದ ಆಯಾಸ ಮರೆತು ರೋಮಾಂಚನವಾಗಿತ್ತು.
ಆನಂದಪುರದಲ್ಲಿನ ಕನ್ನಡ ಸಂಘದ ಆವರಣದಲ್ಲಿ ಸಾಹಿತಿ ನಾ.ಡಿಸೋಜರ ಹೆಸರಲ್ಲಿ ನಿಮಿ೯ಸಿದ್ದ ಬಯಲು ರಂಗ ಮಂದಿರ ಉದ್ಘಾಟನೆಗೆ ಕರೆದಿದ್ದೆ ಬಂದಿದ್ದರು.
ಇನ್ನೂ೦ದು ಬಾರಿ ಕಡಿದಾಳು ಮಂಜಪ್ಪರ ಜನ್ಮ ಶತಾಬ್ದಗೆ ಕಾಗೋಡು ಹೋರಾಟದ ನೇತಾರ ಗಣಪತ ಪ, ಸಾಹಿತಿ ಕೋಣ0 ದೂರು ವೆಂಕಪ ಗೌಡರೊಂದಿಗೆ ಹೋದಾಗ ಮಾಜಿ ಮಂತ್ರಿ ಜಿ.ಗೋವಿಂದೆಗೌಡರೊಂದಿಗೆ ಆ ಸಭೆಯಲ್ಲಿ ಭಾಗವಹಿಸಿದ್ದ ಶಾಮಣ್ಣ ನನಗೆ ಸಭೆಯಲ್ಲಿ ಮಾತಾಡಲು ಹೇಳಿದಾಗ ನಾನು ಕಾಗೋಡು ಹೋರಾಟದ ನೇತಾರ ಗಣಪತಿಯಪರ ಆತ್ಮಚರಿತ್ರೆಯಲ್ಲಿ ಕೋಣಂದೂರು ವೆಂಕಪ್ಪನವರು ಕಡಿದಾಳು ಮಂಜಪ್ಪರ ಬಗ್ಗೆ ಬರೆದ ಒಂದು ಸುಂದರವಾದ ಅದ್ಯಾಯ ಓದಿದೆ.
ನಂತರ ಆನಂದಪುರಂ ಕಾಲೇಜಿಗೆ ಕುವೆಂಪು ಸಾಹಿತ್ಯ ಪ್ರಚಾರದ ಅಂಗವಾಗಿ ಕಲಾವಿದರ ತಂಡದೊಂದಿಗೆ ಬಂದಿದ್ದ ಶಾಮಣ್ಣ ನಮ್ಮ ಮನೆಗೆ ಬಂದು ನನ್ನ ಮಾತಾಡಿಸಿ ಹೋಗಿದ್ದು ನನಗೆ ಸದಾ ನೆನಪಿನಲ್ಲಿ ಉಳಿದಿದೆ.
ಕಡಿದಾಳು ಶಾಮಣ್ಣರ ಬಗ್ಗೆ ನೆನಪಿನ ಪ್ರಸ್ತಕ ಬಿಡುಗಡೆ ಆಗಿದೆ ಅದರಲ್ಲಿನ ಕೆಲ ಲೇಖರರ ಬಿಡಿ ಲೇಖನ ಪತ್ರಿಕೆಯಲ್ಲಿ ಓದಿದೆ ಶಾಮಣ್ಣ ಮಾತ್ರ ಯಾರ ನಿಲುಕಿಗೂ ಸಿಗದ ಆದರೆ ಎಲ್ಲರ ನೆನಪಿನಲ್ಲೂ ಉಳಿಯುವ ವ್ಯಕ್ತಿತ್ವದವರು.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
This comment has been removed by the author.
ReplyDelete"ಉಚ್ಚಾಯ" ಇದಾವ ಪದ? ಇದಕೇನು ಅರ್ಥ?
ReplyDeleteಉಚ್ಛ್ರಾಯ ಎಂಬುದನ್ನು ಮೊದಲು ಸರಿಯಾಗಿ ಬರೆಯುವುದನ್ನು ನೀವು ಕಲಿಯಿರಿ